Ambani’s Chef Salary: ಕೊನೆಗೂ ಬಯಲಾಯ್ತು ಮುಕೇಶ್ ಅಂಬಾನಿ ಮನೆಯ ಅಡುಗೆ ಭಟ್ಟನ ಸಂಬಳ! ಈ ಬಾಣಸಿಗನ ಸಂಭಾವನೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!

Ambani’s Chef Salary : ಒಳ್ಳೊಳ್ಳೆ ಹೈಯರ್ ಎಜುಕೇಷನ್(Higher Education) ಪಡೆದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಗಳಿಸುವವರನ್ನು ನಾವು ತುಂಬಾ ಲಕ್ಕಿ ಅನ್ನುತ್ತೇವೆ. ಆದರೆ ನಾವಿಲ್ಲಿ ಒಬ್ಬ ಅಡುಗೆ ಭಟ್ಟರನ್ನು, ಕಂಪೆನಿಗಳಲ್ಲಿ ದುಡಿದು ಲಕ್ಷ ಲಕ್ಷ ಸಂಪಾದನೆ ಮಾಡೋರಿಗಿಂತ ಹೆಚ್ಚು ಅದೃಷ್ಟವಂತರೆಂದು ಹೇಳ್ತೇವೆ. ಹೇಳಬೇಕಾಗುತ್ತೆ. ಅರೆ! ಯಾರದೋ ಮನೆಯಲ್ಲಿ ಅಡುಗೆ ಕೆಲ್ಸ ಮಾಡುವವರನ್ನು ಇವರ್ಯಾಕೆ ಅದೃಷ್ಟವಂತರು ಅಂತ ಹೇಳ್ತಿದ್ದಾರೆ ಅನ್ಕೊಳ್ತಿದಿರಾ? ಆದರೆ ನಾವೀಗ ಪರಿಚಯ ಮಾಡ್ತಿರೋ ಅಡುಗೆ ಭಟ್ಟರನ್ನು ಅದೃಷ್ಟವಂತರು ಅಂತ ಕರಿಲೇ ಬೇಕು, ಕಾರಣ ಅವರು ಗಳಿಸುತ್ತಿರುವ ಸಂಬಳ (Ambani’s Chef Salary) ! ಹಾಗಿದ್ರೆ ಯಾರಾತ? ಆತ ಗಳಿಸುವ ಸಂಬಳವೆಷ್ಟು?

ರಿಲಯನ್ಸ್ ಸಮೂಹ ಸಂಸ್ಥೆಗಳ(Reliance Groups) ಒಡೆಯ ಮುಕೇಶ್ ಅಂಬಾನಿ(Mukesh Ambani) ಕೇವಲ ನಮ್ಮ ಭಾರತ ದೇಶದ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅಲ್ಲದೆ ಇಡೀ ವಿಶ್ವದಲ್ಲೇ 2ನೇ ಶ್ರೀಮಂತ ಹಾಗೂ ದೊಡ್ಡ ಮನೆಯನ್ನು ಹೊಂದಿರುವಂತಹ ಖ್ಯಾತಿ ಕೂಡ ಅವರಿಗಿದೆ. ಅಂದಹಾಗೆ ನಾವೀಗ ಹೇಳ ಹೊರಟಿರುವುದು ಕೂಡ ಇವರ ಮನೆಯ ಅಡುಗೆಭಟ್ಟ(Chef)ನ ಬಗ್ಗೆ. ಆತ ಪಡೆದುಕೊಳ್ಳುವ ಸಂಭಾವನೆ ಕುರಿತಂತೆ.

ಹೌದು, ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ತಮ್ಮ ಕುಟುಂಬದವರ ಬಗ್ಗೆ ಮಾತ್ರವಲ್ಲ, ತಮ್ಮ ಮನೆಯಲ್ಲಿ ಕೆಲಸ ಮಾಡುವ ಪ್ರತಿ ಉದ್ಯೋಗಿಯ ಕಡೆಗೂ ವಿಶೇಷ ಕಾಳಜಿ ಮಾಡುತ್ತಾರೆ. ಅಂಬಾನಿ ಕುಟುಂಬದಲ್ಲಿ ಕೆಲಸ ಮಾಡುವ ಜನರು ಕೇವಲ ನೌಕರರು ಮಾತ್ರವಲ್ಲದೆ ಒಂದು ರೀತಿಯ ಕುಟುಂಬದ ಸದಸ್ಯರುಗಳ ತರಾನೇ ಆಗಿದ್ದಾರೆ. ಅಲ್ಲದೆ ಅಂಬಾನಿಯ ಮನೆಯಲ್ಲಿ ದುಡಿಯುವ ಎಲ್ಲಾ ಉದ್ಯೋಗಿಗಳಿಗೂ ಅತ್ಯುತ್ತಮ ಸಂಬಳ ನೀಡಲಾಗುತ್ತದೆ. ಅಂಬಾನಿ ಮನೆಯಲ್ಲಿ ಯಾವುದಾದ್ರೂ ಒಂದು ಸಣ್ಣ ಕೆಲಸ ಸಿಕ್ಕಿದರೆ ಸಾಕು, ಬದುಕಿನಲ್ಲಿ ಸೆಟ್ಲ್ ಆದಂತೆ ಎನ್ನುವುದು ಅಲ್ಲಿ ಅಂಬಾನಿ ಕುಟುಂಬ ಅವರಿಗೆ ನೀಡುವ ಸಂಬಳದ ಮಹಾತ್ಮೆ ಗೊತ್ತಿದ್ದವರ ಅನಿಸಿಕೆ.

ಇನ್ನು ಈ ಪೈಕಿ ವಿಶೇಷ ಗಮನ ಸೆಳೆಯುವ ಅಂಬಾನಿ ಮನೆ ಉದ್ಯೋಗಿ ಅಂದ್ರೆ ಅದು ಅವರ ಮನೆಯ ಬಾಣಸಿಗ. ಅಂಬಾನಿ ಅವ್ರು ವಿಶೇಷ ಸರ್ಟಿಫೈಡ್ ಚೆಫ್ ಅನ್ನು ತಮ್ಮ ಮನೆಯ ಅಡುಗೆ ಬಟ್ಟನಾಗಿ ನೇಮಿಸಿದ್ದಾರೆ. ನೀವೇನಾದರೂ ಇವನು ಪಡೆಯೋ ಸಂಬಳ ಕೇಳಿದ್ರೆ, ಬೇರೆ ಕಡೆ ಮಾಡುತ್ತಿರುವ ನೌಕರಿ ತೊರೆದು ಅಲ್ಲಿಗೆ ಹೋಗಿ ಅಡುಗೆ ಮನೆ ಸೇರಿಕೊಳ್ಳೋಣ ಎನಿಸಬಹುದು. ಯಾಕೆಂದ್ರೆ ಈತ ಕೇವಲ ಅಡುಗೆ ಮಾಡುವುದಕ್ಕಾಗಿ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಾವನೆಯನ್ನು ತೆಗೆದುಕೊಳ್ಳುತ್ತಾನಂತೆ! ಈ ಲೆಕ್ಕಚಾರದಲ್ಲಿ ನೋಡಿದರೆ ವರ್ಷಕ್ಕೆ 24 ಲಕ್ಷ ಸಂಭಾವನೆಯನ್ನು ಆತ ಪಡೆಯುತ್ತಾನೆ. ಇದು ಯಾವುದೇ ಕಂಪನಿಯ ಬಾಸ್ ಗಳ ಆದಾಯಕ್ಕೂ ಕೂಡ ಕಡಿಮೆ ಇಲ್ಲ ಅನ್ನಬಹುದು. ಇದರ ಜೊತೆಗೆ ಅವರ ಕುಟುಂಬಕ್ಕೆ ಕೂಡ ಹಲವಾರು ಸೌಲಭ್ಯಗಳನ್ನು ಅಂಬಾನಿ ಕುಟುಂಬವೇ(Ambani Family) ಅರೆಂಜ್ ಮಾಡಿಕೊಡುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಅಂದಹಾಗೆ ಮುಕೇಶ್ ಅಂಬಾನಿ(Mukesh Ambani) ಪಕ್ಕ ವೆಜಿಟೇರಿಯನ್ ಆಗಿದ್ದು ಬೆಳಗಿನ ಬ್ರೇಕ್ ಫಾಸ್ಟ್ ಸಂದರ್ಭದಲ್ಲಿ ಸೌತ್ ಇಂಡಿಯನ್ ತಿಂಡಿ ಆಗಿರುವ ಇಡ್ಲಿ ಸಾಂಬಾರ್ ಅನ್ನು ತಿನ್ನಲು ಸಾಕಷ್ಟು ಇಷ್ಟಪಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ದಿನದಲ್ಲಿ ಎಷ್ಟೇ ಬ್ಯುಸಿ ಆಗಿದ್ದರು ಕೂಡ ರಾತ್ರಿ ಊಟ ಮಾತ್ರ ಕುಟುಂಬದ ಜೊತೆಗೆ ತಮ್ಮ ಮನೆಯಲ್ಲಿ ತಿನ್ನಬೇಕು ಎನ್ನುವುದು ಅವರ ಜೀವನದ ಮತ್ತೊಂದು ಶಿಸ್ತಿನ ನಿಯಮ. ಅವರು ತಿನ್ನೋದು ಸಿಂಪಲ್ ಅಡುಗೆ ಆಗಿದ್ದರೂ ಕೂಡ ಅದನ್ನು ರುಚಿಕರವಾಗಿ ತಯಾರಿಸಬೇಕು.

ಅಲ್ಲದೆ ಇನ್ನೊಂದು ಆಶ್ಚರ್ಯಕರವಾದ ಸಂಗತಿ ಅಂದರೆ ಮುಖೇಶ್ ಅಂಬಾನಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡುವುದು ಮಾತ್ರವಲ್ಲ ಅವರಿಗೆ ವಿಮೆ ಕೂಡ ನೀಡುತ್ತಾರೆ. ಇನ್ನು ವಿಶೇಷವಾದ ಸಂಗತಿ ಎಂದರೆ, ಮುಖೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿಗಳ ಮಕ್ಕಳು ಅಮೆರಿಕಾದಲ್ಲಿ ಓದುತ್ತಿದ್ದಾರಂತೆ!

ಅಂದಹಾಗೆ ಅಂಬಾನಿ ಕುಟುಂಬದಲ್ಲಿ ಒಬ್ಬ ಅಡುಗೆ ಮಾಡೋನಿಗೂ ಅಥವಾ ಚಾಲಕನಾಗಿರೋನಿಗೂ ವಿಶೇಷ ತರಬೇತಿ ನೀಡಲಾಗುತ್ತದೆ. ಜೊತೆಗೆ ಅವರಿಗೆ ಅನೇಕ ಪರೀಕ್ಷೆಗಳನ್ನು ನಡೆಸಿ ನಂತರ ಆಯ್ಕೆ ಮಾಡಲಾಗುತ್ತದೆ. ಮುಖೇಶ್ ಅಂಬಾನಿ ಅವರ ನಿರೀಕ್ಷೆಯನ್ನು ತಲುಪಿದರೆ ನಂತರ ಅಲ್ಲಿ ಕೆಲಸ ಮಾಡಲು ಆಯ್ಕೆಯಾದವರ ಜೀವನ ಮಾತ್ರ ಜಿಂಗಾಲಾಲ. ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡಿ ತಿಂಗಳಿಗೆ ಲಕ್ಷ ಸಂಪಾದನೆ ಮಾಡಿದರು ಮಕ್ಕಳನ್ನು ಫಾರಿನ್ ನಲ್ಲಿ ಓದಿಸಲು ಸಾಧ್ಯವಿಲ್ಲ. ಆದರೆ ಅಂಬಾನಿ ಮನೆಯಲ್ಲಿ ಕೆಲಸಕ್ಕೆ ಇರುವ ಸಾಮಾನ್ಯ ನೌಕರರ ಮಕ್ಕಳು ಕೂಡ ಅಮೇರಿಕಾದಂತಹ ಸ್ಥಳಗಳಲ್ಲಿ ಓದುತ್ತಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ ಅಲ್ವಾ?

 

ಇದನ್ನೂ ಓದಿ: Relationship: ಈತ ತಂಗಿಯನ್ನೇ ಮದುವೆಯಾಗಿ 6 ವರ್ಷ ಸಂಸಾರ ಮಾಡಿದ್ದ! ಈ ಒಂದು ಘಟನೆಯಿಂದ ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!

Leave A Reply

Your email address will not be published.