Mahindra XUV700: ಚಾಲಕನಿಲ್ಲದೇ ಓಡಿಸಬಹುದಾದ ಕಾರನ್ನು ರಸ್ತೆಗಳಿಸಿದ ಮಹೀಂದ್ರಾ! ತಾನಾಗೇ ಓಡುವ ಮಹೀಂದ್ರಾ XUV700 ನ ವೀಡಿಯೊ ಈಗ ವೈರಲ್!
Mahindra XUV700 : ಇತ್ತೀಚಿನ ದಿನಗಳಲ್ಲಂತೂ ಹಲವಾರು ಕಂಪನಿಗಳ ಹೊಸ ವಸ್ತು ವಿನ್ಯಾಸದ ಕಾರು, ಬೈಕುಗಳು ಒಂದರ ಹಿಂದೆ ಒಂದೆಂಬಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಅದರಲ್ಲೂ ಕೂಡ ಇವುಗಳ ಪೈಕಿ ಎಲೆಕ್ಟ್ರಿಕ್ ವಾಹನಗಳೇ ಹೆಚ್ಚು. ಆದರೀಗ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮಹೀಂದ್ರಾ ಕಂಪೆನಿಯು ಚಾಲಕನಿಲ್ಲದೇ ಓಡಿಸಬಹುದಾದ ಕಾರನ್ನು ರಸ್ತೆಗಿಳಿಸಿದ್ದು, ನೆಟ್ಟಿಗರಲ್ಲರೂ ಹುಬ್ಬೇರುವಂತೆ ಮಾಡಿದೆ.
ಹೌದು, ಮಹೀಂದ್ರಾ XUV700, “Autopilot mode” ಅಂದರೆ ಡೈವರ್ ಇಲ್ಲದೇ ಗಾಡಿ ಚಲಾಯಿಸುವ ಹೊಸ ಫೀಚರ್ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ಇದೀಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋದಲ್ಲಿ ಮಹೀಂದ್ರಾ XUV700 (Mahindra XUV700) ಕಾರಿನಲ್ಲಿ ಚಾಲಕನ ಸೀಟನ್ನು ಖಾಲಿ ಬಿಟ್ಟಿದ್ದು, ಪಕ್ಕದ ಸೀಟಿನಲ್ಲಿ ಪ್ರಯಾಣಿಕ ಆರಾಮವಾಗಿ ವಿಶ್ರಾಂತಿಸುತ್ತಿರುವುದನ್ನು ಕಾಣಬಹುದು.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಾರಿನ ಶೋರೂಮ್ನಿಂದ ಬಿಳಿ ಬಣ್ಣದ ಮಹೀಂದ್ರಾ XUV700 ಹೊರ ಬರುವುದನ್ನು ಕಾಣಬಹುದು. ಡೈವರ್ ಸೀಟ್ ಖಾಲಿಯಾಗಿದ್ದು, ತಿರುವಿನ ಹೆದ್ದಾರಿಯಲ್ಲಿ 90 kmph ವೇಗದಲ್ಲಿ ಕಾರು ಚಲಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ವಿಡಿಯೋದಲ್ಲಿ “ಆಟೋಪೈಲಟ್ ಮೋಡ್” ಎಂದು ಕ್ಯಾಪ್ಷನ್ ಬರೆದಿರುವುದನ್ನು ಕಾಣಬಹುದು.
ಇನ್ನು ತಿರುವಿನ ಹೆದ್ದಾರಿಯಲ್ಲೂ ಯಾವುದೇ ವ್ಯಕ್ತಿಯ ಸಹಾಯವಿಲ್ಲದೇ Autopilot modenನಲ್ಲಿ ಕಾರು ಚಲಿಸುವುದನ್ನು ಕಾಣಬಹುದು. ADAS(Advanced Driver Assistance System) ತಂತ್ರಜ್ಞಾನವನ್ನು ಬಳಸಲಾಗಿದೆ. ಈ ವಿಡಿಯೋ ಪ್ರಶಂಸೆಯನ್ನು ಪಡೆಯುವುದಕ್ಕಿಂತ ಸಾಕಷ್ಟು ಟೀಕೆಗೆ ಕಾರಣವಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಟೀಕೆಗೆ ಕಾರಣವಾಗಿದೆ. ಕಾರನ್ನು ಯಾರು ಚಲಾಯಿಸುತ್ತಿದ್ದಾರೆ, ದೆವ್ವದ ಕಾಟವೋ? ಎಂದು ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಲ್ಲದೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, “ಇಂತಹ ವೀಡಿಯೊಗಳು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗುತ್ತವೆ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ” ನೀವು ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ಕಾರನ್ನು ಯಾರು ಓಡಿಸುತ್ತಿದ್ದಾರೆ? ದೆವ್ವ ಇದೆಯೇ? ಎಂದು ಹಾಸ್ಯಸ್ಪದ ಕಾಮೆಂಟ್ ಮಾಡಿದ್ದಾರೆ.