Scrappage Policy: 10 ವರ್ಷ ಹಳೆಯ ವಾಹನಗಳಿದ್ರೆ ಸ್ಕ್ರ್ಯಾಪ್​ ! ಸಾರಿಗೆ ಇಲಾಖೆ ಏನು ಹೇಳಿದೆ?

scrappage policy : ಹಳೆಯ ವಾಹನ(vehicle)ಗಳಿಂದ ಹೆಚ್ಚಾದ ಅವಘಡ ಸಂಭವಿಸುತ್ತಿದೆ ಇದರಿಂದ ಜನರ ಪ್ರಾಣಕ್ಕೂ ಕುತ್ತು ಬರುತ್ತಿದೆ. ಹಾಗೂ ರಸ್ತೆಯು ಹಾಳಾಗುತ್ತಿದೆ. ರಸ್ತೆಯ ಸುರಕ್ಷೆಯ ಕಾಳಜಿಗಾಗಿ ಆಗಸ್ಟ್ 2021 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಹನ ಸ್ಕ್ರಾಪೇಜ್ ನೀತಿಯನ್ನು (scrappage policy) ಜಾರಿಗೆ ತಂದಿದ್ದರು.

ಈ ಯೋಜನೆಯ ಗುರಿ ಎಂದರೇ ಫಿಟ್(fit) ವಾಹನಗಳು ಮಾತ್ರ ರಸ್ತೆಯಲ್ಲಿ ಚಲಿಸಬೇಕು ಎಂಬುದಾಗಿತ್ತು, ಆದರೆ ಈ ರೂಲ್ಸ್ ಅನ್ನು ಯಾರು ಕೂಡ ಫಾಲೋ (follow) ಮಾಡುತ್ತಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಈ ಕುರಿತು ಸ್ಕ್ರಾಪ್ ಮಾಡಲು ಸ್ವಾಯಂಪ್ರೇರಿತ ವಾಹನ ಸ್ಕ್ರ್ಯಾಪ್ ಪೇಜ್ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯ ಮೇಲೆ ಇದೀಗ ಹಲವಾರು ವಿಷಯಗಳು ವದಂತಿಯಲ್ಲಿದೆ. ಅದೇನೆಂದರೆ ಹತ್ತು ವರ್ಷ ಕಳೆದಿರುವ ಹಳೆಯ ಟ್ರಾಕ್ಟರ್ (tracter) ಗಳಿಗೆ ಪರ್ಮಿಟ್ ಗಳು ಸ್ತಬ್ಧ ಆಗಲಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ (viral) ಆಗುತ್ತಿದೆ.

ವೈರಲ್ (viral) ವಿಷಯದ ಬಗ್ಗೆ ವಿವರಣೆ ನೀಡಿರುವ ಹೆದ್ದಾರಿ ಸಚಿವಾಲಯ ಇದು ನಿಜವಲ್ಲ ಸುಳ್ಳು ವದಂತಿ( fake) ಎಂದು ತಿಳಿಸಿದೆ. ಟ್ವಿಟ್ಟರ್ ( twitter) ಹಾಗೂ ವಾಟ್ಸಪ್ (whatsapp) ಮತ್ತು ಇನ್ನಿತರ ಸಾಮಜಿಕ ಜಾಲತಾಣ (social media) ದಲ್ಲಿ 10 ವರ್ಷದ ಹಳೆಯ ಟ್ರಾಕ್ಟರ್ (tracter)ಗಳನ್ನು ಸ್ಕ್ರ್ಯಾಪ್ ಮಾಡಬೇಕು ಎಂಬ ಸುದ್ದಿ ಹರಿದಾಡುತ್ತಿದೆ ಆದರೆ ಈ ಸುದ್ದಿ ಸುಳ್ಳು. ಈ ಸುದ್ದಿಯನ್ನು ಕೇಳಿ ಜನರು ತಮ್ಮ ನೆಮ್ಮದಿಯನ್ನು ಕೆಡಿಸಿಕೊಳ್ಳಬೇಡಿ, ಹಾಗೂ ಯಾವುದೇ ಭಯಕ್ಕೆ ಒಳಗಾಗ ಬೇಡಿ ಇದು ಕೇವಲ ಗಾಳಿಸುದ್ದಿ ಈ ವಿಷಯಕ್ಕೆ ಕಿವಿ ಕೊಡಬೇಡಿ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ. ಹಾಗೂ ಸುಳ್ಳು ಸುದ್ದಿಯನ್ನು ಹರಡಿಸುವವರ ಮೇಲೆ ತಕ್ಕ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ವಾಹನ ಸ್ಕ್ರ್ಯಾಪ್ ಪೇಜ್ ನೀತಿಯಲ್ಲಿ ಯಾವುದೇ ರೀತಿಯ ಕಡ್ಡಾಯ ವಯಸ್ಸಿನ(age bar) ಮಿತಿ ಇಲ್ಲ. ಸ್ವಯಂಚಾಲಿತ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಗಿಸಿ ನಂತರ ವಾಹನ ಫಿಟ್ ಆಗುವವರೆಗೆ ರಸ್ತೆಯಲ್ಲಿ ಚಲಿಸಬಹುದು ಹಾಗೂ 15 ವರ್ಷಗಳಾದ ಕಾರುಗಳನ್ನು ಫಿಟ್ನೆಸ್(fitnes) ಪರೀಕ್ಷೆಗೆ ನೀಡಬೇಕು ಎಂದು ತಿಳಿಸಿದ್ದಾರೆ. ಈ ರೂಲ್ಸ್ (rules) ಟ್ರಾಕ್ಟರ್ (tracter) ಅಥವಾ ಸಾರಿಗೆಯೇತರ ವಾಹನಗಳಿಗೆ ಇಂತಹ ಅಗತ್ಯವಿಲ್ಲ.

ಸಾರಿಗೆ ರಹಿತ ಕೃಷಿ ಟ್ರಾಕ್ಟರ್ (tracter) ವಾಹನವನ್ನು ಖರೀದಿಸುವಾಗಲೆ 15 ವರ್ಷಗಳವರೆಗೆ ನೋಂದಾಯಿಸಲಾಗುತ್ತದೆ. 15 ವರ್ಷದ ನಂತರ ಒಮ್ಮೆಗೆ ಐದು ವರ್ಷಗಳವರಗೆ ನೊಂದಾಣಿಗೊಳಿಸಬಹುದು.
ಜನವರಿ 16 2023 ರಂದು ಹೊರಡಿಸಿದ್ದ ಸೂಚನೆ ಅಡಿಯಲ್ಲಿ ಉಲ್ಲೇಖಿಸಲಾದ ಕೆಲವು ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಯಾವುದೇ ವಹಣಕ್ಕು ಸ್ಕ್ರಾಪಿಂಗ್ ವಯಸ್ಸನ್ನು ನಿಗದಿಸಿಲ್ಲ. ಕೇಂದ್ರ ಸರ್ಕಾರದ ಸ್ಕ್ರಾಪ್ ಪೇಜ್ ನೀತಿಯಲ್ಲಿ ಒಂದೊಂದು ರಾಜ್ಯಕ್ಕೂ ಒಂದೊಂದು ರೂಲ್ಸ್ ಅನ್ನು ಫಾಲೋ (follow) ಮಾಡಬಹುದಾಗಿದೆ. 15 ವರ್ಷ ಮೇಲ್ಪಟ್ಟ ವಾಹನಕ್ಕೆ ದಂಡದಲ್ಲಿ (fain)ಶೇ 50 ರಷ್ಟು ರಿಯಾಯಿತಿ ಮತ್ತು 20 ವರ್ಷ ಮೇಲ್ಪಟ್ಟ ವಾಹನಕ್ಕೆ ಶ್ರೇ 75 ರಷ್ಟು ರಿಯಾಯಿತಿ ನೀಡಲಾಗಿದೆ.

Leave A Reply

Your email address will not be published.