Nobel Peace Prize: ಪ್ರಧಾನಿ ನರೇಂದ್ರ ಮೋದಿಗೆ ʼನೊಬೆಲ್ʼ ಶಾಂತಿ ಪ್ರಶಸ್ತಿ? ಸಮಿತಿ ಉಪ ಮುಖ್ಯಸ್ಥ ಅಸಲ್ ತೋಜೆ ಹೇಳಿದ್ದೇನು?
Nobel Peace Prize : ಸಿನಿ ರಂಗದ ಅತಿ ದೊಡ್ಡ ಪ್ರಶಸ್ತಿ ಆಸ್ಕರ್ ಈ ಬಾರಿ ಯಾರಿಗೆ ಲಭಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದು, ಸದ್ಯ ಆ ಕುತೂಹಲ ತಣಿದಂತಾಗಿದೆ. ಆದರೆ ಇದೀಗ ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೋಬೆಲ್(Nobel) ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಈ ಸಲ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ(Narendra Modi) ಯವರೇ ಈ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗುತ್ತಾರಾ? ಎಂಬ ವಿಚಾರವೀಗ ಮುನ್ನಲೆಗೆ ಬಂದಿದೆ.
ಹೌದು, ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವೆ ಯುದ್ದ ನಡೆಯುತ್ತಿರುವಾಗ ಸಹಜವಾಗಿಯೇ ಈ ಪ್ರಶಸ್ತಿ ಯಾರಿಗೆ ಸಲ್ಲುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ನೊಬೆಲ್ ಪ್ರಶಸ್ತಿ ಸಮಿತಿ ಉಪ ಮುಖ್ಯಸ್ಥ ಅಸಲ್ ತೋಜೆ(Asle Toje) ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ (Nobel Peace Prize) ದೊಡ್ಡ ಸ್ಪರ್ಧಿ ಎನ್ನುವ ಮೂಲಕ ಮೋದಿಯವರಿಗೆ ಈ ಪ್ರಶಸ್ತಿ ದೊರೆಯುವ ಸುಳಿವು ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅಸ್ಲೆ ತೋಜೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವದ ಶಾಂತಿಯ ಅತ್ಯಂತ ವಿಶ್ವಾಸಾರ್ಹ ಮುಖ ಎಂದು ಬಣ್ಣಿಸಿದ್ದಾರೆ. ಮೋದಿಯವರ ಅಭಿಮಾನಿಯಾಗಿಯೂ ಆಗಿರುವ ಅಸಲ್ ತೋಜೆ, ಪ್ರಧಾನಿ ಮೋದಿಯವರು ಜಗತ್ತಿನಲ್ಲಿ ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ ಮತ್ತು ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದ್ದಾರೆ.
ಅಲ್ಲದೆ ‘ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಭಾರತ ಶ್ರೀಮಂತ ಹಾಗೂ ಶಕ್ತಿಶಾಲಿ ರಾಷ್ಟ್ರವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಅತ್ಯಂತ ಅರ್ಹ ನಾಯಕ ಪ್ರಧಾನಿ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರೆ ಅದು ಐತಿಹಾಸಿಕವಾಗಲಿದೆ’ ಎಂದು ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಎನ್ನುವುದು, ಆಲ್ಫ್ರೆಡ್ ನೊಬೆಲ್ ಅವರ ಕೊನೆಯ ಇಚ್ಛೆಯಂತೆ ಸ್ಥಾಪಿಸಲಾದ, “ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ವಿಜ್ಞಾನ ಕ್ಷೇತ್ರಗಳಲ್ಲಿ “ಮಾನವಕುಲಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದವರಿಗೆ” ನೀಡಲಾಗುವ ವಾರ್ಷಿಕ ಅಂತರರಾಷ್ಟ್ರೀಯ ಪ್ರಶಸ್ತಿಗಳ” ಒಂದು ಗುಂಪಾಗಿದೆ. ಪ್ರತಿಯೊಂದು ಪ್ರಶಸ್ತಿ ವಿಜೇತರಿಗೆ ಚಿನ್ನದ ಪದಕ, ಒಂದು ಡಿಪ್ಲೊಮಾ ಮತ್ತು ಹಣದ ಮೊತ್ತವನ್ನು ನೀಡಲಾಗುತ್ತದೆ. ಇದನ್ನು ನೊಬೆಲ್ ಪ್ರತಿಷ್ಠಾನವು ವಾರ್ಷಿಕವಾಗಿ ನಿರ್ಧರಿಸುತ್ತದೆ.
ಇದನ್ನೂ ಓದಿ: UNO: ವಿಶ್ವ ಸಂಸ್ಥೆಯಲ್ಲಿ ‘ಕಾಂತಾರ’ದ ಕಲರವ! UNO ಸಭೆ ಉದ್ದೇಶಿಸಿ ಕನ್ನಡದಲ್ಲೇ ಮಾತಾಡಲಿದ್ದಾರೆ ರಿಷಬ್ ಶೆಟ್ಟಿ!
೧೯೦೧ ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ೧೯೦೧ ರಿಂದ ೨೦೧೮ ರ ವರೆಗೆ ಒಟ್ಟು ೯೦೪ ವ್ಯಕ್ತಿಗಳಿಗೆ (೮೫೨ ಪುರುಷರು ಮತ್ತು ೫೨ ಮಹಿಳೆಯರು) ಮತ್ತು ೨೪ ಸಂಸ್ಥೆಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.ಪ್ರಶಸ್ತಿ ಪುರಸ್ಕೃತರಲ್ಲಿ ಒಟ್ಟು ೧೨ ಭಾರತೀಯರಾಗಿದ್ದಾರೆ (ಐದು ಭಾರತೀಯ ನಾಗರಿಕರು ಮತ್ತು ಏಳು ಭಾರತೀಯ ಮೂಲದವರಾಗಿದ್ದಾರೆ). ರವೀಂದ್ರನಾಥ ಟ್ಯಾಗೋರ್(Ravindranath Tagore) ಪ್ರಶಸ್ತಿ ಪಡೆದ ಮೊದಲ ಭಾರತೀಯ ಪ್ರಜೆಯಾಗಿದ್ದಾರೆ.
https://twitter.com/MeghUpdates/status/1635987710786830342?t=zbujCxcheiAEIVymDR2bxQ&s=08