Yes Bank : ಯೆಸ್ ಬ್ಯಾಂಕ್ ಷೇರನ್ನು ಮಾರುತ್ತಿರುವ ಜನರು; ಯಾಕೆ ಈ ಗದ್ದಲ?

Yes Bank: ಯೆಸ್ ಬ್ಯಾಂಕ್ ಇಂದು ಹೆಚ್ಚಿನ ರೀತಿಯಲ್ಲಿ ಸದ್ದು ಮಾಡುತ್ತಿದ್ದು ಅಮೆರಿಕ ಸಿಲಿಕಾನ್ ವ್ಯಾಲಿ ಬ್ಯಾಂಕಿನ ನಂತರ ಕಾಣಿಸಿಕೊಂಡದ್ದು ಯೆಸ್ ಬ್ಯಾಂಕ್(Yes bank). ಶೇರು ಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್ ನ ಷೇರುಗಳು ಮನಬಂದ ರೀತಿಯಲ್ಲಿ ಬಿಕಾರಿಯಾಗುತ್ತಿದೆ. ಮೂರು ವರ್ಷದ ಲಾಕ್ ಇನ್ ಅವಧಿ ಮುಗಿಯುತ್ತಿದ್ದಂತೆ ಹೂಡಿಕೆದಾರರು( Investors) ಪಂಜರದ ಗೂಡಿನಿಂದ ಸ್ವತಂತ್ರವಾಗಿ ಹೊರಗಡೆ ಹಾರಲು ಬಂದಿರುವಂತೆ ವರ್ತಿಸುತ್ತಿದ್ದಾರೆ.

ಕಳೆದ ಆರು ತಿಂಗಳಲ್ಲಿ ಯೆಸ್ ಬ್ಯಾಂಕಿನ ಷೇರು ಮಾರುಕಟ್ಟೆಯ ವಹಿವಾಟುಗಳ (Transactions) ಸಂಖ್ಯೆ 18.7. ಎನ್ಎಸ್ಇ ಷೇರುಪೇಟೆಯಲ್ಲಿ (Share Market) ಯೆಸ್ ಬ್ಯಾಂಕುಗಳ ವಹಿವಾಟು ಎಷ್ಟಿದೆ? ಎಂದು ಗಮನಿಸಿದರೆ, 46 ಕೋಟಿಗಳ ಷೇರು ವಹಿವಾಟುಗಳಾಗಿವೆ. ನಿನ್ನೆ ಒಂದೇ ದಿನಕ್ಕೆ ಷೇರು ಮಾರುಕಟ್ಟೆಯು ಹೆಚ್ಚು ವಹಿವಾಟು ಕಂಡಿದೆ. ಸೋಮವಾರ 14.40 ಗೆ ಷೇರು ಕುಸಿದಿತ್ತು. ಅದರ ಬಳಿಕ ಮರುದಿನ ಯೆಸ್ ಬ್ಯಾಂಕಿನ ಷೇರು 15.70 ವಹಿವಾಟು ಕಾಣಿಸಿಕೊಂಡಿದೆ. ಯೆಸ್ ಬ್ಯಾಂಕ್ ಯಾವಾಗ ಬೇಕಾದರೂ ಕುಸಿದುಬೀಳುವ ಪರಿಸ್ಥಿತಿಯಲ್ಲಿದೆ. ಯೆಸ್ ಬ್ಯಾಂಕ್ ಷೇರು ಕುಸಿತ ಕಾಣಲು ಕಾರಣವೇನು? ಇದಕ್ಕೆ ಹಲವಾರು ಕಾರಣಗಳಿವೆ(Reasons).ಯೆಸ್ ಬ್ಯಾಂಕ್​ನಲ್ಲಿ ಬೇಡದ ಸಾಲಗಳು(Loans) ಬಹಳ ಹೆಚ್ಚಾಗಿದೆ. ಅದರ ಕಾರ್ಯನಿರ್ವಹಣೆಗೆ ಬಲು ಕಷ್ಟ ಎನ್ನುವ ರೀತಿಯ ಪರಿಸ್ಥಿತಿಗೆ ಬಂದು ನಿಂತಿದೆ ಎಂಬುದು ಆರ್​ಬಿಐನ ಗಮನಕ್ಕೆ ಬಂದಿದೆ. ಗ್ರಾಹಕರ ಠೇವಣಿಗಳನ್ನು ಉಳಿಸುವ ದೃಷ್ಟಿಯಿಂದ ಆರ್​ಬಿಐ ಯೆಸ್ ಬ್ಯಾಂಕ್​ನ ಮರು ರಚನೆಯನ್ನು ಮಾಡುವ ದೃಷ್ಟಿಯನ್ನು ಇಟ್ಟುಕೊಂಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India)ಜೊತೆಗೆ ಇತರ 9 ಬ್ಯಾಂಕುಗಳು ಯೆಸ್ ಬ್ಯಾಂಕ್​ಗೆ (Yes Bank)ಬಂಡವಾಳ ಹಾಕಿ ಅದರ ಒಟ್ಟಿಗೆ ಕೆಲಸಕ್ಕೆ ಅನುಮತಿ ಮಾಡಿಕೊಡಬೇಕೆಂದು ನಿರ್ಧರಿಸಿದೆ. ಈ 9 ಬ್ಯಾಂಕುಗಳ ಕನ್ಸಾರ್ಟಿಯಂ ಯೆಸ್ ಬ್ಯಾಂಕ್​ನಲ್ಲಿ ಶೇ. 49ರಷ್ಟು ಷೇರುಗಳನ್ನು (Shares) ಹೊಂದಿರಬೇಕು. ಕನ್ಸಾರ್ಟಿಯಂ ಮುಖಂಡ ಎಸ್​ಬಿಐ(SBI) ಈ ಯೆಸ್ ಬ್ಯಾಂಕಲ್ಲಿ ಕನಿಷ್ಠ 26ರಷ್ಟಾದರು ಷೇರು ಹೊಂದಿರಬೇಕು ಎಂದು ತಿಳಿಸಿದ್ದಾರೆ. 3 ವರ್ಷಗಳ ಲಾಕ್–ಇನ್ ಪೀರಿಯಡ್ ಇದ್ದುದರಿಂದ ಅಂದರೆ ಯೆಸ್ ಬ್ಯಾಂಕ್​ನ ಯಾವುದೇ ಷೇರುದಾರ 3 ವರ್ಷದವರೆಗೆ ಷೇರುಗಳನ್ನು ಸೆಕೆಂಡರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ಈಗ ಮಾರ್ಚ್ 13ಕ್ಕೆ ಲಾಕ್–ಇನ್ ನ ಅವಧಿ ಕೊನೆಗೊಂಡಿದೆ. ಹೀಗಾಗಿ, ಯೆಸ್ ಬ್ಯಾಂಕ್ ಷೇರು ಮಾರಾಟಕ್ಕೆ ಅಡೆ ತಡೆ ಆಗುತ್ತಿದೆ.

ಯೆಸ್ ಬ್ಯಾಂಕ್ ಷೇರುದಾರರ ವಿವರಗಳು ಹೇಗಿವೆ ?
ಟೋಟಲ್ ಷೇರುಗಳು( Total Shares)- 2875,33,27,384
ಎಸ್​ಬಿಐ ಇತರ ಹಣಕಾಸು ಸಂಸ್ಥೆಗಳಲ್ಲಿ ಇರುವ ಷೇರುಗಳು – ಶೇ. 37.96
ವಿದೇಶೀ ಸಂಸ್ಥೆಗಳ ಮಾಲೀಕತ್ವದಲ್ಲಿರುವ ಷೇರುಗಳು – ಶೇ. 23.25
ಮ್ಯೂಚುವಲ್ ಫಂಡ್​ಗಳು(Mutual Funds) – 0.47
ಸಾರ್ವಜನಿಕರು(Public) – 29.12
ಇತರರು(Others) – 9.2

Leave A Reply

Your email address will not be published.