Tata Groups: ತಮ್ಮ ಉತ್ತರಾಧಿಕಾರಿ ಬಗ್ಗೆ ಸುಳಿವು ಕೊಟ್ರಾ ರತನ್ ಟಾಟಾ? ಅಷ್ಟಕ್ಕೂ ಯಾರೀ ಮಾಯಾ ಟಾಟಾ?

Tata groups :ಭಾರತದ ಉದ್ಯಮ ಲೋಕದ ಉತ್ತುಂಗದಲ್ಲಿ ನಿಲ್ಲುವ ಹೆಸರಿಂದರೆ ಅದು ರತನ್ ಟಾಟಾ(Ratan Tata) ಅವರದ್ದು. ಅವರು ಭಾರತ ಕಂಡಂತಹ ಶ್ರೇಷ್ಠ ಹಾಗೂ ಧೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸಾಕಷ್ಟು ವರ್ಷಗಳಿಂದ ಟಾಟಾ ಸಮೂಹ ಸಂಸ್ಥೆಗಳ(Tata Groups) ಚುಕ್ಕಾಣಿ ಹಿಡಿದಿರುವ ರತನ್ ಟಾಟಾ ಅವರಿಗೆ ಈಗಾಗಲೇ ಸಾಕಷ್ಟು ವಯಸ್ಸಾಗಿದೆ. ಹೀಗಾಗಿ ಟಾಟಾ ಸಮೂಹ ಸಂಸ್ಥೆಗಳ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ಬಹುತೇಕರಿಗೆ ಇದ್ದಿರಬಹುದು. ಅಂತೆಯೇ ಇದಕ್ಕೆ ಉತ್ತರ ಸಿಗುವ ಸಮಯ ಬಂದಿದ್ದು ಅದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

ನಿಮಗೆ ಗೊತ್ತಾ ಟಾಟಾ ಸಂಸ್ಥೆಗಳ ಭವಿಷ್ಯದ ಚುಕ್ಕಾಣಿ ಹಿಡಿಯುವವರು ಈ ಸಂಸ್ಥೆಯಲ್ಲಿಯೇ ಕೆಳಗಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು, ಟಾಟಾ ಕುಟುಂಬದ ಕುಡಿಗಳು ಈಗಾಗಲೇ ಸಂಸ್ಥೆಯಲ್ಲೇ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಇವರ್ಯಾರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲವಷ್ಟೇ. ಇತ್ತೀಚೆಗಷ್ಟೇ ಟಾಟಾ ಕುಟುಂಬದ ಮೂರು ಕುಡಿಗಳನ್ನು ರತನ್ ಟಾಟಾ ಅವರು ಟಾಟಾ ವೈದ್ಯಕೀಯ ಕೇಂದ್ರದ ಟ್ರಸ್ಟ್ ಗೆ ನೇಮಕ ಮಾಡಿದ್ದು, ಈ ಹಿನ್ನೆಲೆಯಲ್ಲಿ ಟಾಟಾ ಸಮೂಹದ ಉತ್ತರಾಧಿಕಾರಿಗಳು ಯಾರು ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.

ಇನ್ನು ರತನ್ ಟಾಟಾ ನೇಮಿಸಿರುವ ಈ ಮೂವರು ಕೂಡ ಒಡಹುಟ್ಟಿದವರಾಗಿದ್ದಾರೆ. ಇವರಲ್ಲಿ 34 ವರ್ಷದ ಮಾಯಾ ಟಾಟಾ ಕೂಡ ಒಬ್ಬರಾಗಿದ್ದು, ರತನ್ ಟಾಟಾ ಅವರ ಕಿರಿಯ ವಾರಸುದಾರರಲ್ಲಿ ಒಬ್ಬರು. ಮಾಯಾ, ಅವರ ಸಹೋದರಿ ಲೇಹ್ ಹಾಗೂ ಸಹೋದರ ನೆವಿಲ್ಲೆ ಅವರನ್ನು ಮಂಡಳಿಯ ಹೊಸ ಸದಸ್ಯರನ್ನಾಗಿ ರತನ್ ಟಾಟಾ ನೇಮಕ ಮಾಡಿದ್ದಾರೆ. ಅಲ್ಲದೆ, ಇವರಿಗೆ ಸ್ವತಃ ರತನ್ ಟಾಟಾ ಅವರೇ ತರಬೇತಿ ನೀಡುತ್ತಿದ್ದು, ತಮ್ಮ ಬಿಲಿಯನ್ ಡಾಲರ್ ಉದ್ಯಮವನ್ನು ಮುನ್ನಡೆಸಲು ಸಿದ್ಧಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾದ್ರೆ ಮಾಯಾ ರತನ್ ಟಾಟಾ ಅವರ ಉತ್ತಾರಧಿಕಾರಿನಾ? ಹೀಗೊಂದು ಚರ್ಚೆ ಪ್ರಾರಂಭವಾಗಿದೆ.

ಮಾಯಾ ಅವರು ನೋಯೆಲ್ ಟಾಟಾ ಅವರ ಮೂವರು ಮಕ್ಕಳಲ್ಲಿ ಕಿರಿಯವರು. ತನ್ನ ಸಹೋದರಿ ಲೇಹ್ ಮತ್ತು ಸಹೋದರ ನೆವಿಲ್ಲೆ ಅವರಂತೆ, ಮಾಯಾ ಟಾಟಾ ಗ್ರೂಪ್ ನೊಂದಿಗೆ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸುದ್ದಿ ಮಾಧ್ಯಮದ ವರದಿಯ ಪ್ರಕಾರ ಮಾಯಾ ಯುಕೆಯ ಬೇಯೀಸ್ ಬಿಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದರು. ಅವರ ತಾಯಿ ಅಲೂ ಮಿಸ್ತ್ರಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಮತ್ತು ದಿವಂಗತ ಬಿಲಿಯನೇರ್ ಪಲ್ಲೊಂಜಿ ಮಿಸ್ತ್ರಿ ಅವರ ಮಗಳು ಆಗಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು ಟಾಟಾ ಅಪರ್ಚುನಿಟೀಸ್ ಫಂಡ್ ನೊಂದಿಗೆ ಪ್ರಾರಂಭಿಸಿದರು, ಇದು ಟಾಟಾ ಗ್ರೂಪ್ ಅಂಗ ಸಂಸ್ಥೆಯಾದ ಟಾಟಾ ಕ್ಯಾಪಿಟಲ್ ನ ಅತ್ಯಂತ ಹಳೆಯ ಖಾಸಗಿ ಈಕ್ವಿಟಿ ಫಂಡ್ ಆಗಿತ್ತು.

ಮಾಯಾ ಅವರು “ಹೊಸ ಯುಗದ ವಿಶ್ಲೇಷಣೆ ಮತ್ತು ತಂತ್ರಜ್ಞಾನ” ದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಇಟಿ 2022 ರಲ್ಲಿ ಗ್ರೂಪ್ ಗೆ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅಂತರ್ಜಾಲದಲ್ಲಿ ಮಾಯಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಅವರು ಇಲ್ಲಿಯವರೆಗೆ ಲೈಮ್ಲೈಟ್ ನಿಂದ ದೂರವಿದ್ದಾರೆ. 2011 ರಲ್ಲಿ ರತನ್ ಟಾಟಾ ಉದ್ಘಾಟಿಸಿದ ಕೋಲ್ಕತಾ ಮೂಲದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ವಹಿಸುವ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ ನ ಮಂಡಳಿಯ ಆರು ಸದಸ್ಯರಲ್ಲಿ ಇವರು ಒಬ್ಬರಾಗಿದ್ದರು.

ಒಟ್ಟಿನಲ್ಲಿ ರತನ್ ಟಾಟಾ ಅವರ ಗರಡಿಯಲ್ಲಿ ಬೆಳೆಯುತ್ತಿರುವ ಮಾಯಾ ಮುಂದೆ ಟಾಟಾ ಸಮೂಹವನ್ನು ಮುನ್ನಡೆಸಬಲ್ಲ ವರಾಸುದಾರರಲ್ಲಿ ಒಬ್ಬರಾಗಿ ಬೆಳೆಯುವ ವಿಶ್ವಾಸ ಮೂಡಿಸಿದ್ದಾರೆ ಎನ್ನಲಾಗಿದೆ.

 

ಇದನ್ನೂ ಓದಿ : Bengaluru Mysuru Expressway: ವಾಹನ ಸವಾರರಾಯ್ತು, ಇದೀಗ KSRTC ಪ್ರಯಾಣಿಕರಿಗೂ ಶುಲ್ಕದ ಹೊರೆ! ಟಿಕೆಟ್ ದರ ಏರಿಕೆ ಮಾಡಿದ ಸಾರಿಗೆ ನಿಗಮ!

Leave A Reply

Your email address will not be published.