Madhya Pradesh: 28 ವಯಸ್ಸಿಗೆ 2 ಮದುವೆಯಾದ ಆಸಾಮಿ! ವಾರದಲ್ಲಿ 3 ದಿನ ಅವಳಿಗೆ, ಇನ್ನು 3 ದಿನ ಇವಳಿಗೆ! ಉಳಿದ ಒಂದು ದಿನ ಯಾರಿಗೆ?

Madhya Pradesh viral news :ವಿದೇಶಿಗನೊಬ್ಬ ತಾನು ಹತ್ತಾರು ಹುಡುಗಿಯರನ್ನು ಮದುವೆಯಾಗಿ ಪ್ರತೀ ಹೆಂಡತಿಯರಿಗೂ ತನ್ನ ಬಳಿ ಇರಲು ಟೈಮ್ ಫಿಕ್ಸ್ ಮಾಡಿ ಸಖತ್ ಸುದ್ಧಿಯಾಗಿದ್ದ ಘಟನೆ ಕಳೆದ ವರ್ಷ ನಡೆದಿತ್ತು. ಆದರೆ ಇಂತದೇ ಒಂದು ಪ್ರಸಂಗವೀಗ ನಮ್ಮ ದೇಶದಲ್ಲೇ ನಡೆದಿದ್ದು ಸಾಫ್ಟ್‌ವೇರ್ ಇಂಜಿನಿಯರೊಬ್ಬ (Software Engineer) ಇಬ್ಬರನ್ನು ಮದುವೆಯಾಗಿ, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿ ಭಾರೀ ಸುದ್ದಿಯಾಗಿದ್ದಾನೆ.

ಹೌದು, 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್(software engineer) ತನ್ನ ಇಬ್ಬರು ಹೆಂಡತಿಯರೊಂದಿಗೆ ಒಪ್ಪಂದ ಮೇರೆಗೆ ಇಬ್ಬರ ಜೊತೆಗೂ ಜೀವನ ನಡೆಸುತ್ತಿರುವ ಘಟನೆ ಮಧ್ಯಪ್ರದೇಶದ (Madhya Pradesh viral news) ಗ್ವಾಲಿಯರ್‌ನಲ್ಲಿ ಕಂಡುಬಂದಿದೆ.

ಈ ವ್ಯಕ್ತಿ ತನ್ನ ಇಬ್ಬರು ಹೆಂಡತಿಯರಿಗೆ ಒಂದೇ ರೀತಿಯ ಸಮಯವನ್ನು ನೀಡುತ್ತೇನೆಂದು ಒಪ್ಪಂದ ಮಾಡಿಕೊಂಡಿದ್ದಾನೆ. ಈ ಕಾರಣಕ್ಕೆ ಇಬ್ಬರು ಹೆಂಡಿರಿಗೆ ತನ್ನ ಸಮಯವನ್ನು ಹಂಚಿಕೊಂಡಿದ್ದಾನೆ. ವಾರದ ಲೆಕ್ಕಾಚಾರದಂತೆ ಈತ ವಾರದ ಮೂರು ದಿನ ಒಬ್ಬ ಹೆಂಡತಿಯೊಂದಿಗಿದ್ದರೆ, ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಲು ಒಪ್ಪಿದ್ದಾನೆ. ಆದರೆ ವಾರದಲ್ಲಿ 7 ದಿನಗಳಿರುತ್ತವೆ. 6ದಿನ ಇಬ್ಬರ ನಡುವೆ ಕಳೆದರೆ, ಇನ್ನುಳಿದ ಭಾನುವಾರ ಏನುಮಾಡುತ್ತಾನೆ? ಇದು ಆತನಿಗೆ ಬಿಟ್ಟಿದ್ದು. ಇಬ್ಬರಲ್ಲಿ ಯಾರ ಜೊತೆ ಬೇಕಾದರೂ ಸಮಯ ಕಳೆಯಬಹುದು. ಅಲ್ಲದೆ ಈ ವ್ಯಕ್ತಿ ತನ್ನ ಇಬ್ಬರು ಪತ್ನಿಯರಿಗೂ ಪ್ರತ್ಯೇಕ ಫ್ಲಾಟ್‌ಗಳನ್ನು ಒದಗಿಸಿ, ಆ ಇಬ್ಬರು ಮಡದಿಯರ ಮಕ್ಕಳ ಜವಾಬ್ದಾರಿಯನ್ನೂ ಹೊತ್ತಿದ್ದಾನೆ.

ಇನ್ನು ಈ ಪ್ರಕರಣದ ಹಿನ್ನೆಲೆ ನೋಡೋದಾದ್ರೆ ಇದೊಂದು ತರ ಕೊಂಚ ವಿಚಿತ್ರವಾಗಿದೆ. 2008ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್‍ನಿಂದಾಗಿ ಗ್ವಾಲಿಯರ್‍ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್‍ಗೆ ಹಿಂದಿರುಗಿದ. ಗ್ವಾಲಿಯರ್‌ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಜೀವನಾಂಶ ಕೋರಿ ಗ್ವಾಲಿಯರ್‍ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ವೇಳೆ ವಕೀಲರೊಬ್ಬರು ಮೊದಲ ಪತ್ನಿ ವಿರೋಧಿಸಿದರೆ ಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಆತ ತನ್ನ ಇಬ್ಬರು ಪತ್ನಿಯರನ್ನು ಸೇರಿಸಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮೂವರು ಸೇರಿ ನ್ಯಾಯಾಲಯಕ್ಕೆ ಹೊಗದಿರಲು ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಒಪ್ಪಂದದ ಪ್ರಕಾರ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಅವರು ಆಯ್ಕೆ ಮಾಡಿದವರ ಜೊತೆ ಭಾನುವಾರ ಕಳೆಯಬಹುದಾಗಿದೆ. ಒಂದು ವೇಳೆ ಈ ಒಪ್ಪಂದವನ್ನು ತಪ್ಪಿದರೆ ಒಪ್ಪಂದವನ್ನು ಉಲ್ಲಂಘಿಸಿದರೆ ಮೊದಲ ಪತ್ನಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ನಿರ್ಧರಿಸಿಕೊಂಡಿದ್ದಾರೆ.

Leave A Reply

Your email address will not be published.