Exam : 5 ಮತ್ತು 8ನೇ ತರಗತಿ ಪರೀಕ್ಷೆ ಕುರಿತು ಇಂದು ನೀಡಿತು ಹೈಕೋರ್ಟ್ ಮಹತ್ವದ ತೀರ್ಪು!
Board Exam : 5 ಮತ್ತು 8 ನೇ ತರಗತಿಯ (5th and 8th class) ಪರೀಕ್ಷೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಇಂದು ಮಹತ್ವದ ತೀರ್ಪನ್ನು ನೀಡಿದೆ. ಹೌದು, ರದ್ದುಗೊಳಿಸಿದ ಕಲಿಕಾ ಚೇತರಿಕೆ ಪರೀಕ್ಷೆಯನ್ನು(Board exam) ಮಕ್ಕಳ ಕಲಿಕಾ ಹಿತ ದೃಷ್ಟಿಗಾಗಿ ಮಾರ್ಚ್ 27 ರಂದು ಪುನಃ ಪರೀಕ್ಷೆಯನ್ನು(exam) ಆರಂಭಿಸಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತನ್ನ ಪರೀಕ್ಷೆಗೆ ಓದುವ ತಯಾರನ್ನು ನಡೆಸಬೇಕು ಎನ್ನುವ ಸೂಚನೆಯನ್ನು ಹೈಕೋರ್ಟ್ ನೀಡಿದೆ.
ಹೈಕೋರ್ಟು(High court) ನೀಡಿದ ಆದೇಶದ ಮೇಲೆ ಈ ವರ್ಷದ 5ನೇ ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುವುದರ ಬಗ್ಗೆ ಏಕಸದಸ್ಯ ಪೀಠ ತೀರ್ಪನ್ನು ನೀಡಿದೆ. ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಸರ್ಕಾರದ ಆದೇಶವನ್ನು ಆಲಿಸಿ ಇಂದು ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದ್ದು ಶಿಕ್ಷಣ ಇಲಾಖೆ (Education system) ಪ್ರಿನ್ಸಿಪಲ್, ಬೋರ್ಡ್ ಎಕ್ಸಾಮಿಗೆ ಸಂಬಂಧಪಟ್ಟ ಮಕ್ಕಳ ಪ್ರಮಾಣ ಪತ್ರವನ್ನು ನೀಡಬೇಕಾಗಿ ಸೂಚನೆ ಹೊರಡಿಸಿದೆ. ಹಾಗೆಯೇ ಹೈಕೋರ್ಟ್ ಕಲಿಕಾ ಚೇತರಿಕೆ ಪರೀಕ್ಷೆಯ ಬಗ್ಗೆ ಗ್ರೀನ್ ಸಿಗ್ನಲ್ (green signal) ಅನ್ನು ನೀಡಿದೆ.
ಹಾಗಾಗಿ ಮಕ್ಕಳು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಮುಂದೆ ಬರುವ ಬೋರ್ಡ್ ಪರೀಕ್ಷೆಗೆ ಎಲ್ಲಾ ರೀತಿಯ ತಯಾರನ್ನು ನಡೆಸಬೇಕೆಂದು ಹೈ ಕೋರ್ಟ್ ಸೂಚನೆಯನ್ನು ನೀಡಿದೆ. ಹಾಗೆಯೇ ಈ ಪರೀಕ್ಷೆಯು ಅವರವರ ಶಾಲೆಯಲ್ಲಿ ನಡೆಯಬೇಕು ಮತ್ತು ಯಾವುದೇ ಒಬ್ಬ ವಿದ್ಯಾರ್ಥಿನಿಯನ್ನು(girls) ಅಥವಾ ವಿದ್ಯಾರ್ಥಿಯನ್ನು (boys)ಅನುತ್ತೀರ್ಣಗೊಳಿಸುವ (fail)ಹಾಗೆ ಇಲ್ಲ ಎಂದು ಹೈಕೋರ್ಟ್ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದೆ. ಹಾಗಾಗಿ ಪರೀಕ್ಷೆಯ ಬಗ್ಗೆ ಯಾವುದೇ ರೀತಿಯ ಗೊಂದಲಕ್ಕೀಡಾಗದೆ ಹೆಚ್ಚಿನ ಅಂಕಗಳನ್ನು (marks) ಗಳಿಸಬೇಕೆಂದು ಹೈಕೋರ್ಟ್ ತೀರ್ಮಾನವನ್ನು ನೀಡಿದೆ.