Viagra: ಮಹಿಳೆಯರಿಗೂ ಇರುತ್ತಾ ವಯಾಗ್ರ? ಯಾವ ರೀತಿಯದ್ದು? ಎಲ್ಲಾ ವಿವರ ಇಲ್ಲಿದೆ!

Viagra : ವಯಾಗ್ರ(viagra)ಮಾತ್ರೆ ಬಗ್ಗೆ ವಯಸ್ಕರೆಲ್ಲರಿಗೂ ತಿಳಿದೇ ಇರುತ್ತದೆ. ಇದನ್ನು ಬಳಕೆ ಮಾಡದಿದ್ದರೂ ಅದು ಏನುಕ್ಕೆ ಬಳಕೆಯಾಗುತ್ತದೆ ಎಂಬ ತಿಳುವಳಿಕೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಂತೆಯೇ ಈ ವಯಾಗ್ರವನ್ನು ನಾವು ಕೇವಲ ಪುರುಷರಿಗೆ ಮೀಸಲಿಟ್ಟಿದ್ದೇವೆ. ವಯಾಗ್ರದ ಸುದ್ದಿ ಬಂದಾಗ ಪುರುಷರನ್ನು ಗಮನದಲ್ಲಿಟ್ಟುಕೊಂಡೇ ಮಾತನಾಡ್ತೇವೆ. ಆದ್ರೆ ವಯಾಗ್ರ ಕೇವಲ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಇದೆ ಅನ್ನೋ ವಿಚಾರ ನಿಮಗೆ ತಿಳಿದಿದ್ಯಾ? ತಿಳಿದಿದ್ರೂ ಅದನ್ನು ತೆಗೆದುಕೊಳ್ಳುವ ವಿಧಾನ ಹೇಗೆ ಅನ್ನೋದು ಗೊತ್ತಿದ್ಯಾ? ಹಾಗಿದ್ರೆ ಈ ಸ್ಟೋರಿ ನೋಡಿ.

 

ವಯಾಗ್ರವನ್ನು ಸಾಮಾನ್ಯವಾಗಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಲ್ಲಿ ಬಳಸಲಾಗುತ್ತದೆ. ಇದು ಶಿಶ್ನ ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ. ಸಂಭೋಗದ ಸುಖವನ್ನು ಹೆಚ್ಚಿಸಲು ನೆರವಾಗುತ್ತದೆ. ಇನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ವಯಾಗ್ರ ಬಗ್ಗೆ ಹೇಳೋದಾದ್ರೆ, ದೇಹದ ಯಾವುದೇ ಭಾಗದಲ್ಲಿ ರಕ್ತ (Blood ) ಪರಿಚಲನೆಯನ್ನು ವೇಗಗೊಳಿಸುವ ಕೆಲಸವನ್ನು ಈ ವಯಾಗ್ರ ಮಾಡುತ್ತದೆ.

ವಯಾಗ್ರವನ್ನು ಕಾಮಾಸಕ್ತಿ ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಸಬಹುದು. ಕೆಲವೊಮ್ಮೆ ವೈದ್ಯರೇ ವಯಾಗ್ರ ಸೇವನೆ ಮಾಡುವಂತೆ ಮಹಿಳೆಯರಿಗೆ ಸಲಹೆ ನೀಡ್ತಾರೆ. ಗರ್ಭಾಶಯಕ್ಕೆ ರಕ್ತ ಪೂರೈಕೆಯನ್ನು ತಲುಪಿಸಲು ವಯಾಗ್ರವನ್ನು ಬಳಸುವಂತೆ ಮಹಿಳೆಯರಿಗೆ ಹೇಳಲಾಗುತ್ತದೆ. ಆದ್ರೆ ವಯಾಗ್ರ ಬಳಕೆ ಮೊದಲು ಅದ್ರ ಡೋಸೇಜ್ ತಿಳಿದಿರಬೇಕಾಗುತ್ತದೆ. ಅದನ್ನು ಮಿತಿಮೀರಿ ಸೇವನೆ ಮಾಡಿದ್ರೆ ಅಪಾಯ ನಿಶ್ಚಿತ. ವಯಾಗ್ರದ ಡೋಸೇಜ್ (Dosage) 25 ಎಂಜಿಯಿಂದ 100 ಎಂಜಿ ನಡುವೆ ಇರಬೇಕು. ನೀವು ಈ ಮಿತಿಗಿಂತ ಹೆಚ್ಚು ವಯಾಗ್ರವನ್ನು ಸೇವನೆ ಮಾಡಿದ್ರೆ ಅಪಾಯವನ್ನು ಎದುರಿಸಬೇಕಾಗುತ್ತದೆ.

ವಯಾಗ್ರ ಕೂಡ ಪ್ರಿಸ್ಕ್ರಿಪ್ಷನ್ ಇಲ್ಲದೆ ಸುಲಭವಾಗಿ ಲಭ್ಯವಿದೆ. ಹಾಗಾಗಿ ಜನರು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ವಯಾಗ್ರ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ವಯಾಗ್ರವನ್ನು ನೀವು ಎಂದಿಗೂ ಕೇವಲ ಸಂತೋಷಕ್ಕಾಗಿ ಬಳಕೆ ಮಾಡಬೇಡಿ. ಅದನ್ನು ಎಲ್ಲ ಔಷಧಿಯಂತೆ ಪರಿಗಣಿಸುವುದು ಬಹಳ ಮುಖ್ಯ. ವಯಾಗ್ರವನ್ನು ಸೇವನೆ ಮಾಡುವ ಮೊದಲು ಅದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಅರ್ಧ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ವಯಾಗ್ರ ಸೇವನೆಯಿಂದ ಕಾಡುವ ಸಮಸ್ಯೆಯೇನು? : ವಯಾಗ್ರ ಸೇವನೆ ಮಾಡೋದ್ರಿಂದ ನಿಮ್ಮ ಲೈಂಗಿಕ ಜೀವನದ ಆನಂದವನ್ನು ಹೆಚ್ಚಿಸಬಹುದು ನಿಜ. ಆದ್ರೆ ವಯಾಗ್ರ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಭೇಟಿಯಾಗುವುದು ಬಹಳ ಒಳ್ಳೆಯದು. ಯಾಕೆಂದ್ರೆ ಕೆಲ ರೋಗಿಗಳಿಗೆ ವಯಾಗ್ರ ಸೇವನೆಯಿಂದ ರೋಗದ ಲಕ್ಷಣ ಹೆಚ್ಚಾಗಬಹುದು. ಹೃದ್ರೋಗಿಗಳು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಅಥವಾ ಯಾವುದೇ ರೀತಿಯ ಕಾರ್ಡಿಯೋ ನಾಳೀಯ ಅಸ್ವಸ್ಥತೆಯನ್ನು ಹೊಂದಿರುವವರು ವಯಾಗ್ರ ತೆಗೆದುಕೊಂಡರೆ ಅಪಾಯ ಎದುರಿಸಬೇಕಾಗುತ್ತದೆ.

ಹಾಗೆಯೇ ಯಾವುದೇ ಕಾರಣಕ್ಕೂ ವಯಾಗ್ರವನ್ನು ಆಲ್ಕೋಹಾಲ್ ಜೊತೆ ಸೇವಿಸಬಾರದು. ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಇದ್ದಲ್ಲಿ ಹೆಚ್ಚು ಹಾನಿಯಾಗುವುದಿಲ್ಲ. ಒಂದಕ್ಕಿಂತ ಹೆಚ್ಚು ಪೆಗ್ ಸೇವನೆ ಮಾಡಿದಾಗ ಇದು ಸಮಸ್ಯೆಗೆ ಕಾರಣವಾಗುತ್ತದೆ. ಇದು ಕೆಲವು ರೋಗಿಗಳಲ್ಲಿ ಹೈಪೊಟೆನ್ಷನ್‌ಗೆ ಕಾರಣವಾಗಬಹುದು. ಹೀಗೆ ವಯಾಗ್ರ ಸೇವನೆ ಮಾಡಿದ್ರೆ ನಿಮ್ಮ ರಕ್ತದೊತ್ತಡ ಹಠಾತ್ ಕುಸಿಯಬಹುದು. ಕೆಲವರಲ್ಲಿ ಇದು ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಬಹುದು. ನಿಮಗೆ ಹೃದಯ ಸಮಸ್ಯೆಯಿದ್ದು, ವಯಾಗ್ರ ಸೇವನೆ ಮಾಡಿದ್ರೆ ರಕ್ತ ಪೂರೈಕೆಯ ಮೇಲೂ ಪರಿಣಾಮ ಉಂಟಾಗಿ, ಹಠಾತ್ ಹೃದಯಾಘಾತ ಅಥವಾ ಮೆದುಳು ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.

 

ಇದನ್ನೂ ಓದಿ : ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ದಶಪಥ ಹೆದ್ದಾರಿ ಇಂದಿನಿಂದ ಟೋಲ್‌ ಸಂಗ್ರಹ ಶುರು; ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

Leave A Reply

Your email address will not be published.