ವಿಧಾನಸಭಾ ಚುನಾವಣೆ : ಕಾಂಗ್ರೆಸ್‌ನಿಂದ ಸುಳ್ಯ ಪುತ್ತೂರು,ಉಳ್ಳಾಲ,ಬಂಟ್ವಾಳ,ಮಡಿಕೇರಿ,ವಿರಾಜಪೇಟೆ ಅಭ್ಯರ್ಥಿಗಳ ಆಯ್ಕೆ !

Election : ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ(Election) ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಸಿದ್ದ ಪಡಿಸಿದೆ.

 

ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಸುಳ್ಯ ಮೀಸಲು ಕ್ಷೇತ್ರದಿಂದ ನಂದ ಕುಮಾರ್ , ಉಳ್ಳಾಲ ಕ್ಷೇತ್ರದಿಂದ ಯು.ಟಿ.ಖಾದರ್, ಬಂಟ್ವಾಳದಿಂದ ಬಿ.ರಮಾನಾಥ ರೈ, ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಅವರ ಹೆಸರು ಬಹುತೇಕ ಪಕ್ಕಾ ಆಗಿದೆ ಎನ್ನಲಾಗಿದೆ.

ಉಳಿದಂತೆ ಬೆಳ್ತಂಗಡಿ ,ಮೂಡಬಿದಿರೆ,ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ.

ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರಕ್ಕೆ ಕೊಡಗಿನ ಅಭಿವೃದ್ಧಿ ಚಿಂತಕ ಎಂದೇ ಖ್ಯಾತಿ ಪಡೆದಿರುವ ಡಾ.ಮಂಥರ್ ಗೌಡ ಮತ್ತು ವಿರಾಜಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥ ನ್ಯಾಯವಾದಿ ಎ.ಎಸ್.ಪೊಣ್ಣನ್ನ ಅವರು ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

Leave A Reply

Your email address will not be published.