Fitness : 103ರ ಹರೆಯದಲ್ಲೂ ತಾರುಣ್ಯದ ಉತ್ಸಾಹ! ಈಗಲೂ ಜಿಮ್‌ನಲ್ಲಿ ಬಾಡಿ ಫಿಟ್ನೆಸ್‌ ಮಾಡುತ್ತಿರುವ ಅಜ್ಜಿ!

Fitness: ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯನ್ನು ನೋಡಿ ನೆಟ್ಟಿಗರು ಅಚ್ಚರಿಯ ಜೊತೆಗೆ ಮೆಚ್ಚುಗೆಯ ಸುರಿಮಳೆ ಗೈಯುತ್ತಿದ್ದಾರೆ. ಹಾಗಿದ್ರೆ, ವೈರಲ್ ಆಗುತ್ತಿರುವ ಮ್ಯಾಟರ್ ಏನಪ್ಪಾ ಅಂತೀರಾ? ಹಾಗಿದ್ರೆ, ಈ ಕುರಿತ ಇಂಟರೆಸ್ಟಿಂಗ್ ವಿಷಯ ನಾವು ಹೇಳ್ತೀವಿ ಕೇಳಿ!!

 

ವಯಸ್ಸಾಗುತ್ತಾ ಹೋದಂತೆ ಮನೆ, ಮಕ್ಕಳು ಎಂದೆಲ್ಲ ಜಂಜಾಟದ ನಡುವೆ ಅಣ್ಣ- ತಮ್ಮನ ರೀತಿಯಲ್ಲಿ ಬಿಪಿ(Bp), ಶುಗರ್ (Sugar)ಕಾಣಿಸಿಕೊಂಡ ಬಳಿಕ ನಾವಿಬ್ಬರೇ ಸಾಕಾ?? ಎಂದು ಮಂಡಿ ನೋವು, ಕಾಲು ನೋವು( Leg Pain) ಹೀಗೆ ಒಂದಲ್ಲ ಒಂದು ಸಮಸ್ಯೆ 40 ರ(After 40) ಗಡಿ ದಾಟಿದ ಬಳಿಕ ಕಾಣಿಸಿಕೊಳ್ಳೋದು ಕಾಮನ್!! ಅಷ್ಟೆ ಏಕೆ!! ಇಂದಿನ ಆಹಾರ ಶೈಲಿ, ಒತ್ತಡಯುತ ಜೀವನ ಶೈಲಿಯಿಂದ 40ರ ಹರೆಯದವರನ್ನ ಬಿಡಿ ಯುವಜನತೆಯೇ ಅದೆಷ್ಟೋ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ವಯಸ್ಸಾದರೂ ಚಿರಯುವತಿಯಂತೆ ಉತ್ಸಾಹದ ಚಿಲುಮೆಯಂತೆ ಆಕ್ಟೀವ್ ಹಾಗೂ ಎನರ್ಜಿಟಿಕ್ ಅಜ್ಜಿ ಅಲ್ಲಲ್ಲಾ!! ಯಂಗ್ ಆಂಡ್ ಎನರ್ಜಿಟಿಕ್ ಲೇಡಿ ಒಬ್ಬರ ವೀಡಿಯೋ ( Video) ವೈರಲ್ (Viral) ಆಗಿ ಸಂಚಲನ ಮೂಡಿಸುತ್ತಿದೆ.

ವಯಸ್ಸಾಗುತ್ತಾ ಹೋದಂತೆ ಎಲ್ಲ ಹಾಸಿಗೆಯನ್ನೋ ಇಲ್ಲವೇ ಮತ್ತಾರನ್ನೋ ಆಶ್ರಯಿಸಿಕೊಂಡು ಓಡಾಡುವುದನ್ನೂ ಗಮನಿಸಿರುತ್ತೇವೆ. ಅಯ್ಯೋ!! ಕಾಲು ನೋವು ವಯಸ್ಸಾಯಿತು ಅನ್ನೋದನ್ನ ಕೇಳಿರುತ್ತೇವೆ. ಆದರೆ, ವೈರಲ್ ಆಗಿರುವ ವೀಡಿಯೋದಲ್ಲಿ ಜಿಮ್ ನಲ್ಲಿ ತೊಡಗಿಸಿಕೊಂಡು ಫುಲ್ ಫಿಟ್ ಆಂಡ್ ಫೈನ್ ( Fit And Fine Body)ಹೊಂದಿರುವ ಮಹಿಳೆಯ ವಯಸ್ಸು ಕೇಳಿದರೆ ದಂಗಾಗೋದು ಪಕ್ಕಾ!!

ಕ್ಯಾಲಿಫೋರ್ನಿಯಾದ(California) 103 ವಯಸ್ಸಿನ ತೆರೇಸಾ ಮೂರ್ ಎಂಬ ಅಜ್ಜಿಯ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅರೇ!! ವ್ಹಾ!! ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಇಳಿ ಪ್ರಾಯದಲ್ಲಿಯೂ ಅಜ್ಜಿಯ ನಿಲ್ಲದ ಉತ್ಸಾಹ ಜೊತೆಗೆ ತನ್ನ ಸೌಂದರ್ಯದ ಮೇಲೆ ಅವರಿಗಿರುವ ಕಾಳಜಿ ಕಂಡರೆ ಯುವಜನತೆ ನಾಚಿ ನೀರಾಗುವುದಂತು ಗ್ಯಾರಂಟಿ!! ಅಷ್ಟೆ ಏಕೆ!! ಈ ಪ್ರಾಯದಲ್ಲಿಯು ಮೈದಂಡಿಸುವ ಬಾಡಿ ಫಿಟ್ನೆಸ್(Fitness) ಬಗೆಗೆ ಅವರಿಗಿರುವ ಕಾಳಜಿ ಯುವನತೆಗೆ ಸೆಡ್ಡು ಹೊಡೆದರು ಅಚ್ಚರಿಯಿಲ್ಲ!!

ಇನ್ನೂ ಈ ಅಜ್ಜಿ ತೆರೇಸಾ ಇಟಲಿಯಲ್ಲಿ 1946 ರಲ್ಲಿ ಜನಿಸಿದ್ದು, ಸೇನಾ ಅಧಿಕಾರಿಯನ್ನು ವಿವಾಹವಾಗಿ(Marriage) ಅನೇಕ ದೇಶಗಳ ಕಡೆಗೆ ಪರ್ಯಟನೆ ಕೂಡ ನಡೆಸಿದ್ದಾರಂತೆ. ಇನ್ನೂ ಅಜ್ಜಿಯ ತಾರುಣ್ಯದ ಉತ್ಸಾಹದ (Enthusiasm)ಬಗ್ಗೆ ಮಾತಾಡಿದರೆ, ವಾರದಲ್ಲಿ ಮೂರರಿಂದ ನಾಲ್ಕು ದಿನ ಜಿಮ್​​ನಲ್ಲಿ ವರ್ಕ್​ಟ್​​​​ ಮಾಡಿ ಫಿಟ್ನೆಸ್​​ ಮೆಂಟೇನ್ ಮಾಡುತ್ತಾರಂತೆ ತೆರೇಸಾ. ಅಷ್ಟೆ ಅಲ್ಲ ಕಣ್ರೀ!! ಅಜ್ಜಿಯ ವರಸೆ ಕಂಡು ಯುವಕರು ಶಾಕ್ ಆಗೋದು ಪಕ್ಕಾ!!.
ಚಿರ ಯೌವನದ( Young)ಅದರಲ್ಲಿಯೂ ಈಗಷ್ಟೇ ಹದಿಹರೆಯದ ಹಂತಕ್ಕೆ ಕಾಲಿಟ್ಟ ಕನ್ಯೆಯಂತೆ ಮೇಕ್​​ಅಪ್​​ ಮಾಡಿಕೊಂಡು ಜಿಮ್​​​ಗೆ (Jim)ಬರುವ ಅಜ್ಜಿ ಇಳಿ ವಯಸ್ಸಿನಲ್ಲಿಯೂ ಕೂಡ ತನ್ನ ಸೌಂದರ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರಂತೆ. ಜೀವನದ (Life)ಪ್ರತಿ ಕ್ಷಣವನ್ನೂ ಕೂಡ ಖುಷಿ ಖುಷಿಯಿಂದ(Happy )ಕಳೆಯುವ ತೆರೇಸಾ ತಮ್ಮ ಸ್ನೇಹಿತರೊಂದಿಗೆ ಪಾರ್ಟಿಗಳಲ್ಲಿ (Party) ಕೂಡ ಸಮಯ ಕಳೆಯುತ್ತಾರೆ. ತನ್ನ ತಾಯಿ ಇಳಿವಯಸ್ಸಿನಲ್ಲಿ ಕೂಡ ಸಂತೋಷದ( Enjoy)ಜೀವನ ನಡೆಸುವ ಕುರಿತು ತೆರೇಸಾ ಅವರ ಮಗಳು ಶೀಲಾ ಮೂರ್ ಖುಷಿಯನ್ನು ಹಂಚಿಕೊಂಡಿದ್ದಾರೆ.

ಈ ನಡುವೆ 103ನೇ ವಯಸ್ಸಿನ ತೆರೇಸಾ ಅವರು ಕೂಡ ತನ್ನ ಮಗಳು ತಮ್ಮ ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನ್ಯೂಯಾರ್ಕ್ ಪೋಸ್ಟ್ ವರದಿಯ ಮೂಲಕ ತಿಳಿದು ಬಂದಿದೆ. ಸದ್ಯ, 103 ರ ಹರೆಯದ ಅಜ್ಜಿಯು ಜಿಮ್​​ನಲ್ಲಿ ವರ್ಕ್​ಟ್ ಮಾಡುತ್ತಿದ್ದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟ್ವಿಟರ್​​​ನಲ್ಲಿ ಹಂಚಿಕೊಂಡ ಪೋಸ್ಟ್​​​​​​ ಎಲ್ಲೆಡೆ ಹರಿದಾಡುತ್ತಿದೆ. 103 ವಯಸ್ಸಿನ ಅಜ್ಜಿ ವರ್ಕ್​ಟ್ ಮಾಡುತ್ತಿರುವ ಪೋಟೋವನ್ನು @Pubity ಎಂಬ ಟ್ವಿಟರ್(Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಈ ವಿಡಿಯೋಗೆ ಹೆಚ್ಚಿನ ಕಾಮೆಂಟ್‌ಗಳ (Comments)ಜೊತೆಗೆ ಲೈಕ್‌ಗಳನ್ನೂ ಗಿಟ್ಟಿಸಿಕೊಂಡಿದೆ. ಏನೇ ಹೇಳಿ!! ಈ ವಯಸ್ಸಲ್ಲಿ ಅಜ್ಜಿಯ ಉತ್ಸಾಹಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು ಅಲ್ವಾ!! ನೀವೇನಂತೀರಾ?

 

https://twitter.com/Pubity/status/1634872016561127424?ref_src=twsrc%5Etfw%7Ctwcamp%5Etweetembed%7Ctwterm%5E1634872016561127424%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಇದನ್ನೂ ಓದಿ : Special Snake : ಅಂಚೆ ಕಚೇರಿಗೆ ಪಾರ್ಸೆಲ್ ಮೂಲಕ ಬಂತೇ ಈ ವಿಶೇಷ ರೀತಿಯ ಹಾವು! ಸಿಬ್ಬಂದಿಗಳೆಲ್ಲ ಫುಲ್ ಶಾಕ್!

Leave A Reply

Your email address will not be published.