Madikeri : ಮೊಮ್ಮಗನಿಗೆ ತಿನ್ನಲು ಹಣ್ಣು ಕೊಟ್ಟ ತಾತಾ ! ಸಿಟ್ಟಿಗೆದ್ದ ಸೊಸೆ ಶೂಟ್ ಮಾಡೇ ಬಿಟ್ಳು!!!
Madikeri : ಇತ್ತೀಚೆಗೆ ಕಾಫಿನಾಡು ಕೊಡಗಿನಲ್ಲಿ ಬಂದೂಕಿನ ಶಬ್ಧ ಅಲ್ಲಲ್ಲಿ ಕೇಳಿಬರುತ್ತಿದೆ. ಕೊಡಗಿನಲ್ಲಿ ಬಹುತೇಕ ಜನರು ಮನೆಯಲ್ಲಿ ಬಂದೂಕು ಇರಿಸಿಕೊಂಡಿದ್ದು, ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ಬಂದೂಕು ಶಬ್ಧ ಕೇಳಿಸಿದ್ದು, ವೃದ್ಧ ರ ಕೊಲೆಯೊಂದು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಗು(Madikeri ) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ಸೊಸೆಯೊಬ್ಬಳು ತನ್ನ ಮಾವನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾಳೆ.
ಕೆ.ಎ.ಮಂದಣ್ಣ (73) ಕೊಲೆಯಾದ ವ್ಯಕ್ತಿ ಆಗಿದ್ದು, ಮಂದಣ್ಣನನ್ನು ಅವರ ಸೊಸೆ ನೀಲಮ್ಮ (neelamma ) ಅಲಿಯಾಸ್ ಜ್ಯೋತಿ (jyothi ) (25) ಎಂಬುವವರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನೀಲಮ್ಮ ಎಂಬವಳು ಕಳೆದ ನಾಲ್ಕು ವರ್ಷಗಳ ಹಿಂದೆ ಮಂದಣ್ಣ ಅವರ ಪುತ್ರ ಕೆ.ಎಂ.ನಾಣಯ್ಯ ಅವರನ್ನು ವಿವಾಹವಾಗಿದ್ದರು. ನೀಲಮ್ಮ ಮತ್ತು ಮಂದಣ್ಣ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಕುಟುಂಬದಲ್ಲಿ ಆಗಾಗ ಕಲಹ ನಡೆಯುತ್ತಿತ್ತು. ಇನ್ನು ಮಾವ, ಸೊಸೆ ಬಂದು ಮಗನನ್ನು ನಮ್ಮಿಂದ ಕಿತ್ತುಕೊಂಡಳು ಎಂದು ಪದೇ ಪದೇ ನಿಂದಿಸುತ್ತಿದ್ದು, ಇದರಿಂದಾಗಿ ಸೊಸೆಗೆ ತೀವ್ರ ಕಿರಿಕಿಸಿ ಉಂಟಾಗುತ್ತಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವ ಮಂದಣ್ಣನ ಮನೆಯಲ್ಲಿ ಪ್ರತ್ಯೇಕ ಕೊಠಡಿಯೊಂದಲ್ಲಿ ಆತನ ಮಗನೊಂದಿಗೆ ಸೊಸೆ ನೀಲಮ್ಮ ಬೇರೆಯಾಗಿ ಜೀವನ ನಡೆಸುತ್ತಿದ್ದರು.
ಮಾರ್ಚ್ 11 ರಂದು ಮಂದಣ್ಣ ತನ್ನ 3 ವರ್ಷದ ಮೊಮ್ಮಗನಿಗೆ ಹಣ್ಣು (fruits ) ನೀಡಿದ್ದು, ಇದರಿಂದ ಕೋಪಗೊಂಡ ಸೊಸೆ ನೀಲಮ್ಮ ಮತ್ತು ಮಾವ ಮಂದಣ್ಣ ನಡುವೆ ಜಗಳವಾಗಿದ್ದು, ಮರುದಿನ ಭಾನುವಾರ ಮಾರ್ಚ್ 12 ರಂದು ಪತಿ ನಾಣಯ್ಯ ಉರುವಲು ತರಲು ಹೋಗಿರುವ ಸಂದರ್ಭದಲ್ಲಿ ನೀಲಮ್ಮ ಮಂದಣ್ಣನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾಳೆ, ಈ ಗುಂಡು ಮಾವನ ದೇಹವನ್ನು ಸೀಳಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಘಟನೆ ನಂತರ ನೀಲಮ್ಮಳ ಪತಿ ನಾಣಯ್ಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ (police station ) ಪತ್ನಿ ನೀಲಮ್ಮ ವಿರುದ್ಧ ದೂರು ದಾಖಲಿಸಿದ್ದು, ಘಟನಾ ಸ್ಥಳಕ್ಕೆ ತಹಶೀಲ್ದಾರ ರಾಮಚಂದ್ರ ನಾಯಕ್ ಮತ್ತಿತರರು ಭೇಟಿ ನೀಡಿದ್ದರು.
ಮಂದಣ್ಣ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿದಿದೆ. ಇನ್ನು ಕೊಲೆ ಮಾಡಿದ ಆರೋಪಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.