ಮದುವೆಯಾಗುವುದಾಗಿ ನಂಬಿಸಿ ವಂಚನೆ : ಪ್ರಿಯಕರನ ಮೈಮೇಲೆ ಕುದಿಯುವ ಎಣ್ಣೆ ಸುರಿದ ಪ್ರೇಯಸಿ..!

Share the Article

Love : ಕೊಯಮತ್ತೂರು : ಮುದುವೆಯಾಗುವುದಾಗಿ (Love)  ನಂಬಿಸಿ ಮೋಸ ಮಾಡಿದಕ್ಕಾಗಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗೆ ಕುದಿಯುತ್ತಿರೋ ಎಣ್ಣೆ ಎರಚಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಶನಿವಾರ ನಡೆದಿದೆ.

ವರ್ಣಪುರಂ ನಿವಾಸಿ 27 ವರ್ಷದ ಕಾರ್ತಿ ಎಂಬ ಯುವಕನನ್ನು ಸಂಬಂಧಿಯೂ ಆಗಿರುವ ಮೀನಾ ದೇವಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಜತೆಗೆ ಮದುವೆಯಾಗುವುದಾಗಿ ಭರವಸೆ ನೀಡಿ  ಸಂಬಂಧವನ್ನು ಹೊಂದಿದ್ದನು.

ಕಾರ್ತಿ ಪೆರುಂತುರೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಆತನ ಮದುವೆ ಬೇರೊಬ್ಬ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ಈ ವಿಚಾರವನ್ನು ತಿಳಿಸೋದಕ್ಕೆ ಕಾರ್ತಿ ಶನಿವಾರ ಮೀನಾ ದೇವಿ ಅವರೊಂದಿಗೆ ಮಾತನಾಡಲು ಮನೆ ಬಂದಿದ್ದರು. ಈ ವೇಳೆ ಪ್ರೇಮಿಗಳ ನಡುವೆ ವಾಗ್ವಾದ ನಡೆಯಿತು.

ಸಂಭಾಷಣೆ ವಾಗ್ವಾದಕ್ಕೆ ತಿರುಗಿ ತೀವ್ರಗೊಂಡ ನಂತರ ಮೀನಾ ದೇವಿ ಕಾರ್ತಿ ಅವರ ದೇಹದ ಮೇಲೆ ಕೊತ ಕೊತ ಕುದಿಯುತ್ತಿರೋ ಎಣ್ಣೆಯನ್ನು ಸುರಿದರು. ಕುದಿಯುವ ಎಣ್ಣೆ ಕಾರ್ತಿಯ ಮುಖ ಮತ್ತು ಕೈಗಳ ಮೇಲೆ ಬಿದ್ದಿತು. ಅವನ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ಘಟನೆಗೆ ಸಂಬಂಧಿಸಿದಂತೆ ಮೀನಾ ದೇವಿಯನ್ನು ಬಂಧಿಸಲಾಗಿದೆ. ಮಹಿಳೆಯ ವಿರುದ್ಧ ಕೊಲೆಯತ್ನ ಸೇರಿದಂತೆ ಕೊಲೆ ಆರೋಪ ಹೊರಿಸಲಾಗಿದೆ.

 

Leave A Reply