Liquor: ಮದ್ಯ ಪ್ರಿಯರೇ ಗಮನಿಸಿ! ನಿಮಗೊಂದು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಎಣ್ಣೆ ಪ್ರಿಯರಿಗೆ( Liquor)ಈ ಸುದ್ಧಿ ಕೇಳಿ ಬೇಜಾರಾದರೂ ಅಚ್ಚರಿಯಿಲ್ಲ. ಭೋಪಾಲ್ (Bhopal) ಏಪ್ರಿಲ್ 1( April)ರಿಂದ ಎಲ್ಲಾ ಓಪನ್ ಏರ್ ಬಾರ್ ಗಳಲ್ಲಿ ಮದ್ಯ ಮಾರಾಟವನ್ನು ಮುಚ್ಚುವ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ(Chief Minister Of Madhya Pradesh) ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮಾಹಿತಿ ನೀಡಿದ್ದಾರೆ.
ಎಣ್ಣೆಯ( Liquor )ಮಹಿಮೆಯ ಅರಿಯದವರು ಇರಲು ಸಾಧ್ಯವೇ ಇಲ್ಲ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ (Bar) ಎಂಟ್ರಿ ಕೊಡದೆ ಇದ್ದರೆ ಅವರ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!. ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!. ಈ ನಡುವೆ ಎಣ್ಣೆ ಪ್ರಿಯರಿಗೆ ಮುಖ್ಯ ಮಾಹಿತಿ ನೀಡಲಾಗಿದೆ.
ಇತ್ತೀಚೆಗೆ ನಡೆದ ನೂತನ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ(CM) ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಎಲ್ಲಾ ಓಪನ್ ಏರ್ ಬಾರ್ ಗಳನ್ನು ಮುಚ್ಚಿಸುವ ಕುರಿತು ಸಚಿವ ಸಂಪುಟ ಸಭೆಗಳಲ್ಲಿ ಅನುಮೋದನೆ ದೊರೆತಿದ್ದು ಅಂಗಡಿ(Shop) ಇಲ್ಲವೇ ಕೌಂಟರ್‌ಗಳಲ್ಲಿ (Counter)ಮಾತ್ರ ಮದ್ಯ ಮಾರಾಟ(Liquor Sale) ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಮದ್ಯ ಪ್ರಿಯರಿಗೆ ಹೆಚ್ಚೇನು ನಷ್ಟವಾಗದು. ಆದರೆ, ಎಣ್ಣೆ ನಶೆಯಲ್ಲಿ ವಾಹನ ಚಾಲನೆ ಮಾಡಿದರೆ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್ ಅಂತಾನೇ ಲೆಕ್ಕ!! ಈ ನಿಟ್ಟಿನಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲು ಮದ್ಯ ಪ್ರದೇಶ ಸರಕಾರ ಮುಂದಾಗಿದೆ.
ಎಣ್ಣೆ ಪ್ರಿಯರಿಗೆ ಎಷ್ಟು ಒಳ್ಳೆಯ ಸುವರ್ಣ ಅವಕಾಶ ಕಲ್ಪಿಸಲಾಗಿದೆ ಎಂದರೆ ಮದ್ಯವನ್ನು ಬೇಕಿದ್ದರೆ ಮನೆಗೆ ಒಯ್ದು ಕುಡಿಯಬಹುದು.ಆದರೆ, ಕುಡಿದು ವಾಹನ ಚಾಲನೆ (Drink And Drive)ಮಾಡಿದರೆ ಪರವಾನಗಿಯನ್ನೇ ರದ್ದು( Licence Cancel) ಮಾಡುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತಂತೆ ಸಂಪುಟ ತೀರ್ಮಾನ ಕೈಗೊಂಡಿರುವ ಬಗ್ಗೆ ಮುಖ್ಯಮಂತ್ರಿಗಳು ಇದೆ ವೇಳೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.