Hassan : ಮಾತನಾಡುತ್ತಿದ್ದಂತೆ ವ್ಯಕ್ತಿ ಹೃದಯಾಘಾತದಿಂದ ಸಾವು..!? ಧಿಢೀರ್‌ ಹೃದಯಘಾತ ಲಕ್ಷಣಗಳು , ನಿಯಂತ್ರಣ ಇಲ್ಲಿದೆ ಮಾಹಿತಿ

Hassan :ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಅದರಲ್ಲೂ ಇದೀಗ ಮೊಬೈಲ್‌ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ರಾಜ್ಯದ ಹಾಸನ(hassan)ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.

 

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಹಾಗೆ ಪ್ರತೀ ವರ್ಷ ವಿಶ್ವದಾದ್ಯಂತ ಶೇಕಡ 30ರಷ್ಟು ಜನ ಹೃದಯಾಘಾತ ಸಂಬಂದಿ ಕಾಯಿಲೆಯಿಂದ ಸಾಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು ಅದರಂತೆ ಇದೀಗ ನಮ್ಮ ಪಕ್ಕದ ರಾಜ್ಯದ ಹೊಳೆನರಸೀಪುರದಲ್ಲೇ ಇಂತಹ ಘೋರ ದುರಂತ ಸಂಭವಿಸುತ್ತಿದೆ. ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಂತೆ ದಿಢೀರ್ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಒಳಪಡಿಸಿದ್ದರು ಆಗ   ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.  ವೀರೂಪಾಕ್ಷ (40) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ವೀರೂಪಾಕ್ಷ ಅವರು ಅಂಗಡಿಯ ಮುಂಭಾಗದಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ದಿಢೀರ್‌ ಹೃದಯಾಘಾತ ಎಂದರೇನು?

ದಿನದಿಂದ ದಿನಕ್ಕೆ ಈ ರೀತಿಯ ಘಟನೆಗಳನ್ನು ಹೆಚ್ಚಳಗೊಳ್ಳುತ್ತಿರೋದಿಂದ ಜನರಲ್ಲಿ ಭಯ ಶುರುವಾಗುತ್ತಿದೆ. ಮನುಷ್ಯನ ದೇಹದ ಹೃದಯದಲ್ಲಿ ರಕ್ತನಾಳಗಳು ಅಥವಾ ಕೊರೊನರಿ ಅರ್ಟರೀಸ್ ಇರುತ್ತವೆ. ದೇಹದಲ್ಲಿ ಒಟ್ಟು 3 ಕೊರೊನರಿ ಅರ್ಟರೀಸ್ ಇರುತ್ತವೆ. ಇದು ಯಾವುದೆಂದರೆ ಲೆಫ್ಟ್ ಕೊರೋನರಿ ಆರ್ಟರಿ (LCA), ಸರ್ಕಮ್ ಫ್ಲೆಕ್ಸ್ ಆರ್ಟರಿ ಹಾಗು ರೈಟ್ ಕೊರೋನರಿ ಆರ್ಟರಿ . ಈ ಮೂರು ರಕ್ತನಾಳಗಳಿಂದ ಹೃದಯಕ್ಕೆ ರಕ್ತದ ಚಲನೆ ನಡೆಯುತ್ತಿರುತ್ತದೆ. ದೇಹದ ಇತರೆ ಸಮಸ್ಯೆಗಳಿಂದ ಕೂಡ ಹೃದಯಾಘಾತ ಆಗಬಹುದು .

ಬೇರೆಬೇರೆ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ಹೈ ಕೊಲೆಸ್ಟ್ರಾಲ್ ಅಥವಾ ಹೆಚ್ಚು ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗುತ್ತಾ ಹೋಗುತ್ತದೆ. ಇದರಿಂದ ರಕ್ತ ಚಲನೆಗೆ ಅಡ್ಡಿ ಉಂಟಾಗುತ್ತದೆ . ಈ ಅಡಚಣೆಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತ ಚಲನೆ ನಿಂತುಹೋಗುತ್ತದೆ. ಈ ಸಮಸ್ಯೆಯನ್ನು ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ.

ಹೃದಯಘಾತ ಲಕ್ಷಣಗಳು , ನಿಯಂತ್ರಣ  :

ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತದೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.  ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ,  ಮುನ್ಸೂಚನೆ ಎಂದು ಅರಿವಾಗುವುದಿಲ್ಲ.  ಬೇರೆಯವರಿಗೂ ಮನೆಯವರಿಗೂ  ಹೇಳುವುದಿಲ್ಲ ಹೀಗೆ ಮಾಡುವುದರಿಂದ ಈ ಅಘಾತಕಾರಿ ಸಮಸ್ಯೆಗಳು ಹೆಚ್ಚಾಗುತ್ತದೆ

ಲಕ್ಷಣ

*ವಿಪರೀತ ಬೆವರುವುದು,
*ಸುಸ್ತಾಗುವುದು,
*ಯಾವುದಾದರು ರಟ್ಟೆ ವಿಪರೀತ ನೋಯುವುದು,
*ಎದೆ ಕಿವುಚಿದಂತೆ ಆಗುವುದು

*ನಿರ್ಲಕ್ಷಿಸಬಾರದು.

ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ,  ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ, ತಕ್ಷಣ ಆಸ್ಪತ್ತ್ರೆಯ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ..

Leave A Reply

Your email address will not be published.