ಫ್ಲಿಪ್ ಕಾರ್ಟ್ ‘ಬಿಗ್ ಸೇವಿಂಗ್ ಡೇಸ್’ ಸೇಲ್ : ಭರ್ಜರಿ ಡಿಸ್ಕೌಂಟ್ ಮೂಲಕ ಸಿಗುತ್ತೆ ಈ ಮೊಬೈಲ್ ಗಳು!

Flipkart ‘Big Saving Days’ :ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಹೊಸ ಆಫರ್ ನೀಡುವುದರ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಇದೀಗ ಫ್ಲಿಪ್‌ಕಾರ್ಟ್ ಸೇವಿಂಗ್ ಡೇಸ್ ಸೇಲ್ (Flipkart ‘Big Saving Days’) 2023ನ್ನು ಪ್ರಾರಂಭಿಸಿದ್ದು, ಭಾರೀ ರಿಯಾಯಿತಿಯಲ್ಲಿ ಉತ್ಪನ್ನಗಳು ದೊರೆಯಲಿದೆ.

 

ಈ ಬಾರಿಯ ಸೇವಿಂಗ್ ಸೇಲ್ ನಲ್ಲಿ ಮೊಬೈಲ್ ಫೋನ್ ಗಳನ್ನು ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದ್ದೂ, ಮೊಬೈಲ್ ಖರೀದಿದಾರರಿಗೆ ಫ್ಲಿಪ್ಕಾರ್ಟ್ ಭರ್ಜರಿ ಆಫರ್ ನೀಡಿದೆ. ಬಿಗ್ ಸೇವಿಂಗ್ ಡೇಸ್’ ಮಾರ್ಚ್ 11 ರಿಂದ ಪ್ರಾರಂಭವಾಗಿದೆ. ಐದು ದಿನಗಳ ಈ ಸೇಲ್‌ನಲ್ಲಿ ನೀವು ಟಾಪ್ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಡೀಲ್‌ಗಳನ್ನು ಪಡೆಯಬಹುದು.

ನಥಿಂಗ್ ಫೋನ್ (1) :
ನಥಿಂಗ್ ಫೋನ್ (1) ಅನ್ನು ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಭಾರೀ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಫೋನ್ 50 MP ಕ್ಯಾಮೆರಾ, 6.55-ಇಂಚಿನ ಪೂರ್ಣ ಹೆಚ್​ಡಿ+ ಓಎಲ್​ಇಡಿ ಡಿಸ್ಪ್ಲೇ ಅಡಾಪ್ಟಿವ್ ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778+ ಪ್ರೊಸೆಸರ್, 4,500mAh ಬ್ಯಾಟರಿ, 33W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ. ಈ ಫೋನ್‌ನ ಮೂಲ ರೂಪಾಂತರದ 128GB ಮಾದರಿಯು ಪ್ರಸ್ತುತ ರೂ.27,999 ಕ್ಕೆ ಲಭ್ಯವಿದೆ. ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್‌ನ ಭಾಗವಾಗಿ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಇದನ್ನು ರೂ.25,000 ಕ್ಕೆ ಪಡೆಯಬಹುದು. ಈ ಮೂಲಕ ಸುಮಾರು ರೂ.3000 ರಿಯಾಯಿತಿ ದರದಲ್ಲಿ ಖರೀದಿಸಬಹುದು.

ಗೂಗಲ್ ಪಿಕ್ಸೆಲ್ 7:
ಫ್ಲಿಪ್‌ಕಾರ್ಟ್ ತನ್ನ ಬಿಗ್ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಗೂಗಲ್ ಪಿಕ್ಸೆಲ್ 7 ನಲ್ಲಿ ಉತ್ತಮ ರಿಯಾಯಿತಿಯನ್ನು ಘೋಷಿಸಿದೆ. ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.3 ಇಂಚಿನ ಅಮೋಲ್ಡ್ ಡಿಸ್ಪ್ಲೇ, ಆಂಡ್ರಾಯ್ಡ್ 13, ಗೂಗಲ್ ಟೆನ್ಸರ್ G2 ಚಿಪ್ ಸೆಟ್, ಡ್ಯುಯಲ್ ಕ್ಯಾಮೆರಾ (50 MP+12 MP) ಸೆಟಪ್, 10.8 MP ಫ್ರಂಟ್ ಕ್ಯಾಮೆರಾ, Li-Ion 4355 mAh ಬ್ಯಾಟರಿಯಂತಹ ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ ಇದರ ಬೆಲೆ ರೂ 59,999, ಆದರೆ ಇತ್ತೀಚಿನ ಮಾರಾಟದಲ್ಲಿ ಇದನ್ನು ರೂ 50,000 ಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದು.

ಐಫೋನ್ 14:
ಬಿಗ್ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್ ಐಫೋನ್ 14 ನಲ್ಲಿ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ. ಇದು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 71,999 ರೂಪಾಯಿಗೆ ಲಭ್ಯವಿದೆ. ಆದರೆ ಈ ಸೇಲ್‌ನಲ್ಲಿ ಐಫೋನ್ 14 ರೂ.60,009 ರಿಂದ ರೂ.69,999 ರವರೆಗೆ ಲಭ್ಯವಿದೆ. ನೀವು ಎಲ್ಲಾ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳನ್ನು ಸೇರಿಸಿದರೆ, ನೀವು ಅದನ್ನು ರೂ.60,000 ಗೆ ಹೊಂದಬಹುದು.

ಹಾಗೆಯೇ ಐಫೋನ್ 14 ಪ್ಲಸ್​ ನ್ನು ಫ್ಲಿಪ್ಕಾರ್ಟ್ ಮಾರಾಟದಲ್ಲಿ ರೂ.80,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಐಫೋನ್ 14 6.1-ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ ಕಾರ್ಯನಿರ್ವಹಿಸುತ್ತದೆ. ಈ ಹ್ಯಾಂಡ್‌ಸೆಟ್ ಇತ್ತೀಚಿನ iOS 16 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ.

ಕೇಂದ್ರ ಸರ್ಕಾರದಿಂದ ಜನತೆಗೆ ಬಂಪರ್ ಆಫರ್ : ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಿರಿ 6 ಸಾವಿರ ರೂಪಾಯಿ!

Leave A Reply

Your email address will not be published.