ಕರುಳು ಚುರ್ ಎನ್ನೋ ಘಟನೆ ..! ಒಂದೇ ತಾಯಿಯ ಇಬ್ಬರು ಮಕ್ಕಳು ಬೀದಿನಾಯಿ ದಾಳಿಗೆ ಸಾವು

Stray dog :ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೇವಲ ಎರಡು ದಿನದ ಅಂತರದಲ್ಲಿ ಒಂದೇ ತಾಯಿಯ ಇಬ್ಬರು ಮಕ್ಕಳು ಬೀದಿ ನಾಯಿ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಕರುಳು ಚುರ್ ಎನ್ನೋ ಘಟನೆ ಬೆಳಕಿಗೆ ಬಂದಿದ್ದು, ದೆಹಲಿ ಜನರನ್ನೆ ಬೆಚ್ಚಿಬೀಳಿಸುವಂತೆ ಮಾಡಿದೆ.

ನೈಋತ್ಯ ಪ್ರದೇಶದಲ್ಲಿ 7 ಮತ್ತು 5 ವರ್ಷ ವಯಸ್ಸಿನ ಸೋದರರನ್ನು ಬೀದಿನಾಯಿಗಳ (stray dog) ಗುಂಪು ಅಟ್ಯಾಕ್ ಮಾಡಿದ್ದು, ಒಂದೇ ತಾಯಿಯ ಇಬ್ಬರು ಮಕ್ಕಳು ಕಳೆದುಕೊಂಡು ಹೃದಯವಿದ್ರಾವಕ ಘಟನೆಯನ್ನುನಡೆದ್ದು ಹೆತ್ತಕರುಳು ಹೇಳತೀರದಂತೆ ಬಿಕ್ಕಿ ಬಿಕ್ಕಿ ಅಳುವಂತಹ ಪರಿಸ್ಥಿತಿ ನಿರ್ಮಣಗೊಂಡಿದೆ.
ದೆಹಲಿಯ ವಸಂತ್ ಕುಂಜ್ ನಿವಾಸಿಗಳಾ ಆನಂದ್ ಮತ್ತು ಆತನ ಕಿರಿಯ ಸಹೋದರ ಆದಿತ್ಯ ಎಂದು ಗುರುತಿಸಲಾಗಿದೆ. ಮಾರ್ಚ್ 10 ರಂದು ಮಧ್ಯಾಹ್ನ 3 ಗಂಟೆಗೆ ಮಗು ಕಾಣೆಯಾಗಿರುವ ಬಗ್ಗೆ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಮಗುವಿನ ತಾಯಿಯೊಂದಿಗೆ ತೀವ್ರ ಹುಡುಕಾಟವನ್ನು ನಡೆಸಿದ್ದರು. ಪೊಲೀಸರ ಭಾರೀ ಹುಡುಕಾಟದ ಬಳಿಕ ನಿರ್ಜನ ಪ್ರದೇಶದಲ್ಲಿನ ಗೋಡೆಯ ಬಳಿ ಆನಂದ್ನ ಮೃತದೇಹವೊಂದು ಪತ್ತೆಯಾಗಿತ್ತು.
ಪ್ರಾಣಿಗಳ ಗಾಯಗಳ ಗುರುತುಗಳು ಆತನ ಕಾಲು, ಬೆನ್ನು, ಸೊಂಟ, ಕುತ್ತಿಗೆ ಮತ್ತು ತಲೆಯ ಮೇಲೆ ದೇಹದ ಮೇಲೆ ಪತ್ತೆಯಾಗಿತ್ತು. ಓರ್ವ ಮಗುವನ್ನು ಕಳೆದು ಕೊಂಡ ಸಂಕಟದಲ್ಲಿದ್ದ ತಾಯಿಗೆ ಮತ್ತೊಂದು ಅಘಾತ ಎದುರಾಗಿದ್ದು, ಮತ್ತೊರ್ವ ಮಗನನೂ ಶೌಚ ಮಾಡಲು ಹೋಗಾ ಆ ಮಗುವಿನ ಮೇಲೆಯೋ ಬೀದಿ ನಾಯಿಗಳುದಾಳಿ ನಡೆಸಿತ್ತು,
ಗಾಯಗೊಂಡ ಬಾಲಕನನ್ನು ತನ್ನ ಕಾರಿನಲ್ಲಿ ವಸಂತ್ ಕುಂಜ್ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೀದಿ ನಾಯಿಗಳಅಟ್ಟಹಾಸಕ್ಕೆ ಇಬ್ಬರು ಕಂದಮ್ಮಗಳನ್ನು ಕಳೆದು ಕೊಂಡ ತಾಯಿ ಕಣ್ಣಿರಿನಲ್ಲಿ ದಿನ ಕಳೆಯುವಂತೆ ಬೇಸರ ವ್ಯಕ್ತಪಡಿಸಿದ್ದಾಳೆ.