RRR Oscar Award ಕರ್ನಾಟಕಕ್ಕೆ ಡಬಲ್-ಸ್ಪೆಷಲ್ ಧಮಾಕ; ಕಾರಣ ಏನು ಗೊತ್ತಾ?

RRR Oscar Award: ‘RRR’ ಸಿನಿಮಾ ಹಾಗೂ ಅದರ ನಾಟು ನಾಟು ಹಾಡು (Natu Natu Song) ಈವರೆಗೆ ಸಿನಿರಂಗದ ಹೆಚ್ಚಿನ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ. ಅಲ್ಲದೆ, ಈ ಹಿಂದೆ ʻಗೋಲ್ಡನ್ ಗೋಬ್ಸ್ʼ ಅವಾರ್ಡ್ (Golden Gobs) ಬಾಚಿಕೊಂಡಿತ್ತು. ‘RRR’ ಸಿನಿಮಾದ ‘ನಾಟು ನಾಟು’ ಹಾಡು ಆಸ್ಕರ್ ಗೆದ್ದಿದ್ದು ಭಾರತಕ್ಕೆ ಮತ್ತೊಂದು ಗರಿಮೆಯನ್ನು ತಂದುಕೊಟ್ಟಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಟ್ರಿಪಲ್ ಆರ್ (RRR) ಚಿತ್ರದ ನಾಟು ನಾಟು ಹಾಡು ‘ಬೆಸ್ಟ್​ ಒರಿಜಿನಲ್ ಸಾಂಗ್’ (Best Original Song) ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಬಾಚಿಕೊಂಡಿದೆ (RRR Oscar Award).

ಎಸ್ ಎಸ್ ರಾಜಮೌಳಿ (Rajamouli) ನಿರ್ದೇಶನದ ಆರ್​ಆರ್​ಆರ್ ಚಿತ್ರ ಆಸ್ಕರ್​ ಪ್ರಶಸ್ತಿ (Oscar Award) ಗೆದ್ದಿದ್ದು, ಭಾರತೀಯರೆಲ್ಲರಿಗೂ ಹೆಮ್ಮೆಯನ್ನುಂಟುಮಾಡಿದೆ. ಎಂ.ಎಂ. ಕೀರವಾಣಿ (MM Keeravani) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ನಾಟು ನಾಟು.. ಹಾಡು ವಿಶ್ವಮಟ್ಟದಲ್ಲೇ ಭಾರೀ ಸೌಂಡ್ ಮಾಡಿದ್ದು, ಇಂಗ್ಲಿಷ್ ಹಾಡುಗಳನ್ನೆಲ್ಲಾ ಹಿಂದಿಕ್ಕಿ
ಆಸ್ಕರ್​ ಪ್ರಶಸ್ತಿ ಗಳಿಸಿದೆ.

1920ರ ದಶಕದಲ್ಲಿದ್ದ ಇಬ್ಬರು ನೈಜ-ಜೀವನದ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಅನುಸರಿಸುತ್ತದೆ. ಚಿತ್ರದಲ್ಲಿ ರಾಮ್ ಚರಣ್ (Ram Charan), ಜೂನಿಯರ್ ಎನ್ ಟಿ ಆರ್ (Jr NTR), ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಈ ಹಾಡಿಗೆ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್​ ಸಖತ್ ಸ್ಟೆಪ್ಸ್ ಹಾಕಿದ್ದು, ಸಿನಿಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದೆ. ಇದೀಗ ಅವಾರ್ಡ್ ಗಳಿಸಿ ಜನಮನದಲ್ಲಿ ಅಚ್ಚೊತ್ತಿದೆ.

RRR ದೇಶಕ್ಕೆ ಆಸ್ಕರ್ ತಂದುಕೊಟ್ಟಿದೆ. ಆದರೆ, ಕರ್ನಾಟಕಕ್ಕೆ (Karnataka) ಡಬಲ್-ಸ್ಪೆಷಲ್ ಧಮಾಕ. ಯಾಕೆ ಗೊತ್ತಾ? ಇದರಿಂದ ಕರ್ನಾಟಕಕ್ಕೆ ಹೆಮ್ಮೆ ಯಾಕೆ? ಯಾಕಂದ್ರೆ, “RRR” ಸಿನಿಮಾದ ನಾಟು ನಾಟು ಹಾಡಿನ ಹಕ್ಕುಗಳನ್ನು ಪಡೆದವರು ಲಹರಿ ಮ್ಯೂಸಿಕ್ (RRR Lahari Music Right). ಜಿ ಮನೋಹರನ್ ನಾಯ್ಡು (G manohar Naidu) ಮತ್ತು ಜಿ ತುಳಸಿರಾಮ್ (G tulasiram) ಈ ಇಬ್ಬರು ಸಹೋದರರು ಲಹರಿವೇಲು ಈ ಮ್ಯೂಸಿಕ್ ಲೇಬಲ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಇಬ್ಬರು ಸಹೋದರರು ಬೆಂಗಳೂರಿನವರು. ಈ ಸಿನಿಮಾ ಆಸ್ಕರ್ ಅವಾರ್ಡ್ ಪಡೆಯುವಲ್ಲಿ ಇವರ ಪಾತ್ರವೂ ಇದೆ ಎಂದೇ ಹೇಳಬಹುದು. ಹಾಗಾಗಿ ಚಿತ್ರಕ್ಕೆ ಆಸ್ಕರ್ ಬಂದಿರೋದು ಕರ್ನಾಟಕಕ್ಕೂ ಹೆಮ್ಮೆಯ ವಿಚಾರ.

Leave A Reply

Your email address will not be published.