Butter milk: ಬೇಸಿಗೆಯಲ್ಲಿ ಪ್ರತಿದಿನ ಮಜ್ಜಿಗೆ ಕುಡಿದರೆ ಎಷ್ಟು ಒಳ್ಳೆಯದು ಗೊತ್ತಾ? ಅದ್ಭುತ ಮಾಹಿತಿ ಇಲ್ಲಿದೆ
Butter milk : ಭಾರತದಾದ್ಯಂತ ಅನೇಕ ರಾಜ್ಯಗಳಲ್ಲಿ, ನಿಯಮಿತ ಊಟದ ಜೊತೆಗೆ ಒಂದು ಲೋಟ (Butter milk) ಮಜ್ಜಿಗೆಯನ್ನು ಸೇವಿಸಲಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ (Butter milk)ಮಜ್ಜಿಗೆಯನ್ನು ಸೇವಿಸಲಾಗುತ್ತದೆ. ಇದು ಹೆಚ್ಚಿದ ಬಿಸಿಲಿನ ತಾಪಕ್ಕೆ ಪರಿಹಾರವನ್ನು ನೀಡುತ್ತದೆ. ದೇಹವನ್ನು ತಂಪಾಗಿಸುವ ಸಾಮರ್ಥ್ಯವನ್ನು ಮಜ್ಜಿಗೆ ಹೊಂದಿದೆ. ಮಜ್ಜಿಗೆಯನ್ನು ಉಪ್ಪು, ಮಸಾಲೆಯುಕ್ತ ವಸ್ತುಗಳನ್ನು ಬೆರೆಸುವ ಮೂಲಕ ರುಚಿ ರುಚಿಯಾಗಿ ಕುಡಿಯಲಾಗುತ್ತದೆ. ಹೆಚ್ಚಾಗಿ ಮಜ್ಜಿಗೆ ತಯಾರಿಸುವಾಗ ಕರಿಮೆಣಸು, ಜೀರಿಗೆ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳಂತಹ ಮಸಾಲೆ ಪದಾರ್ಥಗಳನ್ನು ಮಜ್ಜಿಗೆಯಲ್ಲಿ ಕಪ್ಪು ಉಪ್ಪಿನೊಂದಿಗೆ ಬೆರೆಸಿದರೆ ರುಚಿ ಅದ್ಭುತವಾಗಿಸುತ್ತದೆ. ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳು ತೊಡೆದು ಹಾಕುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯೋದ್ರಿಂದ ಆಗುವ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಓದಿ
ಮಜ್ಜಿಗೆ ಆಮ್ಲೀಯತೆ ನಿಯಂತ್ರಿಸುತ್ತದೆ
ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರದಿಂದಾಗಿ. ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುತ್ತದೆ. ಇದು ಎದೆಯುರಿಗೆ ಕಾರಣವಾಗುತ್ತದೆ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಸಾಮಾನ್ಯಗೊಳಿಸುತ್ತದೆ. ಆಮ್ಲೀಯತೆಯಿಂದ ಬಳಲುತ್ತಿರುವವರು ಒಂದು ಲೋಟ ಮಜ್ಜಿಗೆ ಕುಡಿದರೆ ಪರಿಹಾರ ಪಡೆಯಬಹುದು. ಒಣಗಿದ ಶುಂಠಿ ಪುಡಿ ಮತ್ತು ಮೆಣಸನ್ನು ಒಟ್ಟಿಗೆ ತೆಗೆದುಕೊಂಡರೆ, ಆಮ್ಲೀಯತೆ ಹೋಗುತ್ತದೆ.
ಹಲ್ಲು& ಮೂಳೆಗಳಿಗೆ ಮಜ್ಜಿಗೆ ಒಳ್ಳೆಯದು
ಮಜ್ಜಿಗೆ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ನಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಬಹಳ ಉಪಯುಕ್ತವಾಗಿದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ತೆಗೆದುಕೊಳ್ಳುವುದು ಆಸ್ಟಿಯೊಪೊರೋಸಿಸ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಜ್ಜಿಗೆ ರಕ್ತದೊತ್ತಡ ನಿಯಂತ್ರಿಸುತ್ತದೆ
ಒಂದು ಲೋಟ ಮಜ್ಜಿಗೆ ಕೂಡ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಪ್ರತಿದಿನ ಮಜ್ಜಿಗೆಯನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗಗಳು ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಸಹಾಯ ಮಾಡುತ್ತದೆ.