CCTV : ಹಾಡಹಗಲೇ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಬಲವಂತವಾಗಿ ಕಿಸ್ ಮಾಡಿದ ಯುವಕ : ಸಿಸಿಟಿವಿಯಲ್ಲಿ ವಿಡಿಯೋ ಸೆರೆ
Bihar : ಬಿಹಾರ : ಫೋನ್‌ನಲ್ಲಿ ಮಾತನಾಡುತ್ತ ನಿಂತಿದ್ದ ಆರೋಗ್ಯ ಕಾರ್ಯಕರ್ತೆಯನ್ನು ಬಲವಂತವಾಗಿ ತಬ್ಬಿಕೊಂಡು ಕಿಸ್ಸಿಂಗ್ ಮಾಡಿದ ಘಟನೆಯೊಂದು ಬಿಹಾರದ (Bihar) ಜಮುಯಿ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ನಡೆದಿದ್ದು, ಶಾಕಿಂಗ್ ವಿಡಿಯೋ ಸಿಸಿಟಿವಿಯಲ್ಲಿ ವೈರಲ್ ಆಗಿದೆ. ಈ ಘಟನೆ ಕಂಡು ಸಾರ್ವಜನಿಕರು ಬೆಚ್ಚಿಬೀಳಿಸುವಂತೆ ಮಾಡಿದೆ.
ಸಂತ್ರಸ್ತೆ ಬಿಹಾರದ ಜಮುಯಿ ಜಿಲ್ಲೆ ಸದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಎಂದಿನಂದೆ ಫೋನ್‌ನಲ್ಲಿ ಮಾತನಾಡುತ್ತಿರೋವಾಗ ಆಸ್ಪತ್ರೆಯ ಆವರಣದಲ್ಲಿ ಸಾಮಾನ್ಯರಂತೆ ಬಂದು ಮಹಿಳೆಯನ್ನು ತಬ್ಬಿಕೊಂಡು ಕಿಸ್ಸಿಂಗ್ ಮಾಡಿದ ಅಘಾತಕಾರಿ ಘಟನೆ ಮಾರ್ಚ್ 10 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.
ಕೂಡಲೇ ಸಂತ್ರಸ್ತೆ ಜಮುಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಕೃತ್ಯ ಎಸಗಿದ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.
ಖಾಸಗಿ ಮಾಧ್ಯಮಗಳಿಗೆ ಘಟನೆ ಸಂಬಂಧಿಸಿ ಮಹಿಳೆ ಮಾತನಾಡುತ್ತ, ಆಸ್ಪತ್ರೆಯ ಆವರಣಕ್ಕೆ ಆತ ಏಕೆ, ಹೇಗೆ ಬಂದನು ಎಂದು ನನಗೆ ತಿಳಿದಿಲ್ಲ, ನನಗೆ ಆ ವ್ಯಕ್ತಿ ಯಾರೆಂದು ಗೊತ್ತಿಲ್ಲ, ನಾನು ಅವನಿಗೆ ಏನು ಮಾಡಿದ್ದೇನೆ ? ಎಂದು ಹೇಳಿಕೊಳ್ಳುತ್ತ, ಆತ ಚುಂಬಿಸಿದ ತಕ್ಷಣ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದಾಗ ಆತ ಪರಾರಿಯಾಗಿದ್ದನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ , ಅನೇಕರು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದ್ದಾರೆ. ಎಸ್‌ಡಿಪಿಒ ಡಾ ರಾಕೇಶ್ ಕುಮಾರ್ ಅವರ ಪ್ರಕಾರ, ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಲಾಗಿದೆ.
जमुई सदर अस्पताल में महिला स्वास्थ्य कर्मी को दिनदहाड़े युवक ने ज़बरदस्ती किस किया, CCTV में क़ैद हुई घटना. महिला की शिकायत पर FIR दर्ज, महिला सुरक्षा पर उठाये गम्भीर सवाल. pic.twitter.com/uDC2wZ3cMR
— Utkarsh Singh (@UtkarshSingh_) March 13, 2023