2nd PUC Result 2023: ವಿದ್ಯಾರ್ಥಿಗಳೇ ಗಮನಿಸಿ, ಸೆಕೆಂಡ್ ಪಿಯುಸಿ ಫಲಿತಾಂಶ ಯಾವಾಗ? ರಿಸಲ್ಟ್ ಚೆಕ್ ಮಾಡುವ ರೀತಿ ಇಲ್ಲಿದೆ!

2nd PUC Result 2023 : ರಾಜ್ಯದಲ್ಲಿ ಈಗಾಗಲೇ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ (second puc annual exam) ಪ್ರಾರಂಭವಾಗಿದೆ. ಪರೀಕ್ಷೆಯು ಮಾರ್ಚ್‌ 09,2023 ರಿಂದ ಆರಂಭವಾಗಿದ್ದು ಮಾರ್ಚ್ 29,2023ಕ್ಕೆ ಮುಗಿಯಲಿದೆ. ಪರೀಕ್ಷೆಯ ನಂತರ ಫಲಿತಾಂಶ (2nd PUC Result 2023) ಯಾವಾಗ ಬರಬಹುದು? ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

 

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ (b c nagesh) ಮಾಹಿತಿ ನೀಡಿದ್ದು, ಪರೀಕ್ಷೆಯ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗುವುದು ಎಂದು ಹೇಳಲಾಗಿದೆ. ಆದರೆ ನಿರ್ದಿಷ್ಟ ದಿನಾಂಕ ತಿಳಿಸಿಲ್ಲ.

ಮೇ 5 ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ 2023 (CET) ಪರೀಕ್ಷೆಗಳು ಆರಂಭವಾಗಲಿವೆ. ಹಾಗಾಗಿ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಮಂಡಲಿ ನಿರ್ಧರಿಸಿದೆ.
ಬಿಡುಗಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಇನ್ನು ಫಲಿತಾಂಶ ಬಿಡುಗಡೆಯಾದ ಮೇಲೆ ವಿದ್ಯಾರ್ಥಿಗಳು ರಿಸಲ್ಟ್ ಚೆಕ್‌ ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ದ್ವಿತೀಯ ಪಿಯುಸಿ ರಿಸಲ್ಟ್ ಚೆಕ್‌ ಮಾಡೋದು ಹೇಗೆ?
• ವಿದ್ಯಾರ್ಥಿಗಳು ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಗೆ ಭೇಟಿ ನೀಡಬೇಕು.
• ಪಿಯುಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
• ನಂತರ ವಿದ್ಯಾರ್ಥಿಗಳೇ ನಿಮ್ಮ ರಿಜಿಸ್ಟರ್‌ ನಂಬರ್‌ ನಮೂದಿಸಿ.
• ‘Submit’ ಅನ್ನು ಕ್ಲಿಕ್ ಮಾಡಿ.
• ಇಷ್ಟೇ ಈಗ ನಿಮ್ಮ ಫಲಿತಾಂಶ ನಿಮಗೆ ಕಾಣಿಸುತ್ತದೆ.
• ರಿಸಲ್ಟ್ ಶೀಟ್ ಡೌನ್‌ಲೋಡ್‌ ಮಾಡಿ, ಪ್ರಿಂಟ್‌ ತೆಗೆದುಕೊಳ್ಳಿ.

Leave A Reply

Your email address will not be published.