Saudi arabia is against Muslim: ರಂಜಾನ್‌ ಸಂದರ್ಭ ಮುಸ್ಲಿಂ ರನ್ನು ಕೆರಳಿಸಿದ ಸೌದಿ ಅರೇಬಿಯ ತಂದ ಹೊಸ ನಿಯಮಗಳು ; ಇಸ್ಲಾ೦ ನಿಂದ ದೂರ ಹೋಗ್ತಿದ್ಯಾ ಸೌದಿ ? 

Saudi is against Muslim: ಸೌದಿ ಅರೇಬಿಯಾದ (Saudi Arabia) ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ರಂಜಾನ್ ತಿಂಗಳಲ್ಲಿ ತನ್ನ ನಾಗರಿಕರು ಅನುಸರಿಸಬೇಕಾದ ಹೊಸ ನಿಯಮಗಳನ್ನು ರೂಪಿಸಿದ್ದು, ಈ ನಿರ್ಬಂಧಗಳಿಂದ ವಿಶ್ವದಾದ್ಯಂತ ಮುಸ್ಲಿಮರು ಅಸಮಾಧಾನಗೊಂಡಿದ್ದಾರೆ. ವಿಶ್ಲೇಷಕ ಸಾಮಿ ಹಮ್ದಿ ಅವರ ಪ್ರಕಾರ, ಈ ಬದಲಾವಣೆಗಳು ಇಸ್ಲಾಂ ಧರ್ಮವನ್ನು ಪ್ರಮುಖ ಆಧಾರಸ್ತಂಭವಾಗಿ ಆದ್ಯತೆ ನೀಡದ ಹೊಸ ಸೌದಿಯತ್ತ ಒಯ್ಯುತ್ತಿದೆ ಎಂದು ವರದಿ ಮಾಡಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದ ಸಾಮಿ ಹಮ್ದಿ ಅವರು  ” ಮೊಹಮ್ಮದ್ ಬಿನ್ ಸಲ್ಮಾನ್ (Mohammad Bin Salman) ಅನ್ನು ಸಾರ್ವಜನಿಕ ಜೀವನದಿಂದ ಹೊರಹಾಕುತ್ತಿದ್ದಾರೆ” ಎಂದು ಬರೆದಿದ್ದಾರೆ.

 

ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ತಂದೆ ಕಿಂಗ್ ಸಲ್ಮಾನ್ ಅವರಿಂದ 2015 ರಲ್ಲಿ ಅಧಿಕಾರ ಪಡೆದುಕೊಂಡ ನಂತರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೇವಲ ತೈಲವನ್ನು ನಂಬಿ ಬದುಕು ಸಾಗಿಸುವ ಸೌದಿಯನ್ನು ಹೊಸ ಅವಕಾಶಗಳಿಗೆ ತೆರೆಯುತ್ತಿದ್ದಾರೆ. ಮುಕ್ತ ಸಂಹವನಕ್ಕೆ ಅವಕಾಶ, ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ, ಮಹಿಳೆಯರು ಕಂಪೆನಿಗಳಲ್ಲಿ ಕೆಲಸ ಮಾಡಲು ಅವಕಾಶ, ಒಂಟಿಯಾಗಿ ಪ್ರಯಾಣಿಸಲು ಅವಕಾಶ ಮುಂತಾದ ಯಾರೂ ಊಹಿಸಲಾಗದ ನಿರ್ಧಾರಗಳನ್ನು ತಂದು ಗಮನ ಸೆಳೆದಿದ್ದರು. ಆ ಮೂಲಕ ಸೌದಿ ಅಲ್ಲದೆ ಇತರ ಮುಸ್ಲಿಂ ದೇಶಗಳು ಮತ್ತು ಜನವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದರು. ಈಗ ರಂಜಾನ್ ಸಂದರ್ಭ ಅವರು ಹೊಸ ಕಾನೂನನ್ನು ತಂದಿದ್ದಾರೆ, ಅದು ಮುಸ್ಲಿಂ ವರ್ಗವನ್ನು  ಬೀಳಿಸಿದೆ.

ಈಗ ಯಾವುದಕ್ಕೆ ಸೌದಿಯಲ್ಲಿ ಅನುಮತಿಸಲಾಗುವುದಿಲ್ಲ? 

– ಮಸೀದಿಗಳಿಗೆ ದೇಣಿಗೆ ನಿಷೇಧ ಹೇರಲಾಗಿದೆ

– ಆರಾಧಕರು ತಮ್ಮ ಗುರುತಿನ ದಾಖಲೆಗಳನ್ನು ತರಬೇಕು ಎಂಬ ಕಡ್ಡಾಯ ನಿಯಮ

– ಮೆಕ್ಕಾ ಮತ್ತು ಮದೀನಾದಲ್ಲಿನ ಮುಖ್ಯ ಮಸೀದಿಗಳನ್ನು ಹೊರತುಪಡಿಸಿ, ಉಳಿದ ಕಡೆ ಶಬ್ದದ ವಾಲ್ಯೂಮ್ ಮಟ್ಟವನ್ನು ಕಡಿಮೆ ಮಾಡಬೇಕು ಮತ್ತು ಪ್ರಾರ್ಥನೆಗಳನ್ನು ಪ್ರಸಾರ ಮಾಡಬಾರದು ಎಂಬ ಠರಾವು

– ಮಸೀದಿಗಳಲ್ಲಿ ಸೂರ್ಯಾಸ್ತದ ನಂತರ ಇಫ್ತಾರ್ ಭೋಜನಕ್ಕೆ ನಿಷೇಧ

– ಪ್ರಾರ್ಥನೆಗಳನ್ನು ಸಂಕ್ಷಿಪ್ತವಾಗಿ ಇಡುವ ಅಗತ್ಯವಿದೆ ಎಂದಿದೆ ಸೌದಿ

– ಮಕ್ಕಳಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತಿಲ್ಲ ಎಂಬ ಆಜೆ ಹೊರಡಿಸಿದೆ

– ಪ್ರಾರ್ಥನೆಗಳನ್ನು ದೀರ್ಘಗೊಳಿಸಬಾರ್ದು ಎಂಬ ಕಂಡೀಷನ್

– ಒಂದುವೇಳೆ ಮಸೀದಿಯಲ್ಲಿ ಕ್ಯಾಮೆರಾಗಳನ್ನು ಬಳಸಿದರೆ, ಪ್ರಾರ್ಥನೆಯ ಸಮಯದಲ್ಲಿ ಇಮಾಮ್ ಅಥವಾ ಆರಾಧಕರ ಚಿತ್ರಗಳನ್ನು ತೆಗೆದುಕೊಳ್ಳಲು ಅವುಗಳನ್ನು ಬಳಸಬಾರದು ಎಂಬ ನಿಯಮ

– ಉಪವಾಸ ಮಾಡುವ ಜನರಿಗೆ ಆಹಾರ ನೀಡುವ ಯೋಜನೆಗಳಿಗೆ ಯಾರೂ ಯಾವುದೇ ಹಣಕಾಸಿನ ದೇಣಿಗೆ ಸಂಗ್ರಹಿಸಬಾರದು.

– ಉಪವಾಸ ಮಾಡುವವರಿಗೆ ಆಹಾರವನ್ನು ನೀಡಿದರೆ, ಅದನ್ನು ಗೊತ್ತುಪಡಿಸಿದ ಪ್ರದೇಶಗಳಲ್ಲಿ ನೀಡಿ, ಆ ನಂತರ ಪ್ರದೇಶ ಸ್ವಚ್ಛಗೊಳಿಸಬೇಕು.

– ಹೊಸ ನಿಯಮಗಳ ಪ್ರಕಾರ ಇಫ್ತಾರ್‌ಗಾಗಿ ಯಾವುದೇ ತಾತ್ಕಾಲಿಕ ಕೊಠಡಿಗಳು ಅಥವಾ ಟೆಂಟ್‌ಗಳನ್ನು ಸ್ಥಾಪಿಸಬಾರದು.

– ಮಸೀದಿಗಳಲ್ಲಿ ಇಫ್ತಾರ್ ಕೂಟ ಇಲ್ಲ ಅಲ್ಲದೆ ಐಡಿ ಇಲ್ಲದೆ ಇತಿಕಾಫ್ ಇಲ್ಲ

ಇದು ಇಸ್ಲಾಮಿನ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಎನ್ನಲಾಗಿದೆ. ಈ ಮೂಲಕ ವಿದೇಶಿ ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಸಾಮ್ರಾಜ್ಯದ ಸಮಾಜವನ್ನು ತೆರೆಯುವ ಪ್ರಯತ್ನದಲ್ಲಿ, ವಿಮರ್ಶಕರು ಹೊಸ ಮಿತಿಗಳು ಇಸ್ಲಾಂನ ಪ್ರಭಾವವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದು ಹಮದಿ ಹೇಳಿದ್ದಾರೆ. ಈಗ ಕಟ್ಟರ್ ಸೌದಿ ದೇಶವು ಕ್ರಮೇಣ ಸಂಗೀತ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತಿದೆ. ಅಲ್ಲದೆ ಅದು ಪ್ರಸಿದ್ಧ ಪಾಶ್ಚಾತ್ಯ ಪ್ರದರ್ಶಕರನ್ನು ಆಹ್ವಾನಿಸಿ ಮಾರ್ಡರ್ನೈಸೇಷನ್ ಗೆ ತೆರೆದುಕೊಳ್ಳುತ್ತಿದೆ ಸೌದಿ ಸಂಸ್ಥಾನ. ಇನ್ನು

30 ವರ್ಷಗಳ ನಂತ್ರ ಆದ್ರೂ ಸರಿ, ಅಲ್ಲಿನ ಆಯಿಲ್ ರಿಸರ್ವ್ ಖಾಲಿ ಆಗಲೇ ಬೇಕು. ಆಗ ಯಾವುದೇ ಉತ್ಪತ್ತಿ ಮೂಲ ಇಲ್ಲದೆ ಅಲ್ಲಿನ ಈಗಿನ ಐಷಾರಾಮಿ ಜೀವನಕ್ಕೆ ಹೊಂದಿಕೊಂಡ ಜನ ಪರದಾಡಬೇಕಾಗತ್ತೆ. ಅದಕ್ಕೆಂದೇ ಈಗಲೇ ತಯಾರಿ ಮಾಡುತ್ತಿದ್ದಾರೆ ಯುವ ನಾಯಕ HBS ಅಲಿಯಾಸ್ ಮೊಹಮ್ಮದ್ ಬಿನ್ ಸಲ್ಮಾನ್. ಅದರ ಇನ್ನೊಂದು ಮಜಲೇ ಈಗ ಜಾರಿಗೆ ತಂಡ ರಂಜಾನ್ ಸಂದರ್ಭದ ಈ ಕಾನೂನು ಎನ್ನಲಾಗುತ್ತಿದೆ.

Leave A Reply

Your email address will not be published.