Rain of insects: ಆಕಾಶದಿಂದ ತುಪು ತುಪು ಉದುರಿದವು ಕಂಬಳಿಹುಳಗಳು! ಅಯ್ಯೋ ದೇವ್ರೇ, ಚೀನಾದಲ್ಲಿ ಇದೆಂತಾ ವಿಚಿತ್ರ ಮಳೆ!

Rain of insects :ನೀವು ಆಲಿಕಲ್ಲಿನ ಮಳೆ, ಹಳದಿ ಮಳೆ, ಕೆಂಪು ಮಳೆ ಜೊತೆಗೆ ಮೀನಿನ ಮಳೆ ಆಗಿರುವುದನ್ನು ಕೂಡ ಕೇಳಿರಬಹುದು. ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ಸುರಿದ ಕೆಂಪು ಮಳೆ (Red Rain), ತೆಲಂಗಾಣದಲ್ಲಿ ಸುರಿದ ಮೀನಿನ ಮಳೆ(Fish Rain) ಇಂದಿಗೂ ಅಚ್ಚರಿಯೇ. ಆದರೆ ಈಗ ಅದಕ್ಕಿಂತ ಅಚ್ಚರಿಯ ಹವಾಮಾನ ಬೆಳವಣಿಗೆಯೊಂದು ಜನರನ್ನು ನಿಬ್ಬೆರಗಾಗಿಸಿದೆ. ಯಾಕೆಂದರೆ ಚೀನಾದಲ್ಲಿ ಇದೀಗ ಕೀಟಗಳ ಮಳೆ(Rain of insects)ಯಾಗುತ್ತಿದೆ. ಅದರಲ್ಲೂ ಕೂಡ ಕಂಬಳಿ ಹುಳಗಳೇ(Hairy Caterpillar) ಅತೀ ಹೆಚ್ಚೆಂದು ಹೇಳಬಹುದು!

ಹೌದು, ನೀವು ಓದುತ್ತಿರೋದು ಸತ್ಯ. ಚೀನಾದ ರಾಜಧಾನಿ ಬೀಜಿಂಗ್‌ನ(Beijing)ಲ್ಲಿ ಮಳೆಯಾಗುತ್ತಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ. ಆ ಮಳೆಯಲ್ಲಿ ಬರೀ ಕೀಟಗಳೇ ತುಂಬಿಕೊಂಡಿವೆ. ಅದರಲ್ಲೂ ಕೂಡ ಆ ಮಳೆಯಲ್ಲಿ ಯತೇಚ್ಛವಾಗಿ ಕಂಬಳಿ ಹುಳುಗಳೇ ಸೇರಿಕೊಂಡಿವೆ. ಈ ಮಳೆ ಚೀನಾದಲ್ಲಿ ಎಷ್ಟು ವ್ಯಾಪಕವಾಗಿದೆ ಎಂದರೆ, ಚೀನಾದ ರಸ್ತೆಗಳ ಮೇಲೆ ನಿಲ್ಲಿಸಿರುವ ಕಾರುಗಳು ಹಾಗೂ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಕೀಟಗಳು ಬಿದ್ದಿವೆ. ಆಕಾಶದಿಂದ ಮಳೆ ಬೀಳುವ ರೀತಿಯಲ್ಲಿಯೇ ಕೀಟಗಳು ನೆಲಕ್ಕೆ ಬೀಳುತ್ತಿವೆ.

ಈ ವಿಡಿಯೋವೀಗ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಬೀಜಿಂಗ್‌ನ ರಸ್ತೆಯ ಮೇಲಿರುವ ಕಾರ್‌ಗಳ ಮೇಲೆ ಕೀಟಗಳ ರೀತಿಯ ಜೀವಿಗಳು ಬಿದ್ದಿರುವುದನ್ನು ಕಾಣಬಹುದಾಗಿದೆ. ಬೀಜಿಂಗ್‌ನಲ್ಲಿ ರಸ್ತೆಗಳ ಪಕ್ಕದಲ್ಲಿ ನಿಲ್ಲಿಸಿದ ಕಾರುಗಳ ಮೇಲೆ ಕಂಬಳಿಹುಳಗಳ ತರಹದ ಧೂಳಿನ ಕಂದು ಬಣ್ಣದ ಜೀವಿಗಳು ಬಿದ್ದಿವೆ. ಇನ್‌ಸೈಡರ್‌ ಪೇಪರ್‌ ಇಂಥ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಜನರು ಆಕಾಶದಿಂದ ಮಳೆಯ ರೀತಿಯಲ್ಲಿ ಬೀಳುವ ಹುಳಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳ ಮೊರೆ ಹೋಗಿರುವುದನ್ನೂ ನಾವು ಕಾಣಬಹುದಾಗಿದೆ.

ಆದರೆ ನ್ಯೂಯಾರ್ಕ್(New Yark) ಪೋಸ್ಟ್ ಪ್ರಕಾರ, ‘ಹುಳಗಳ ಮಳೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಮದರ್ ನೇಚರ್ ನೆಟ್‌ವರ್ಕ್ ಎಂಬ ವೈಜ್ಞಾನಿಕ ನಿಯತಕಾಲಿಕವು ಭಾರೀ ಗಾಳಿಯ ಕಾರಣದಿಂದಾಗಿ ಹೆಚ್ಚಾಗಿ ಭಾರವಿಲ್ಲದೇ ಇರುವ ಈ ಜೀವಿಗಳು ಹಾರಿ ಬಂದಿರುವ ಸಾಧ್ಯತೆ ಹೆಚ್ಚಿದೆ. ಎಂದು ತಿಳಿಸಿದೆ. ಅಲ್ಲದೆ ಚಂಡಮಾರುತದ ನಂತರ ಕೀಟಗಳು ಸುಂಟರಗಾಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ಈ ರೀತಿಯ ಘಟನೆ ಸಂಭವಿಸುತ್ತದೆ ಎಂದು ನಿಯತಕಾಲಿಕವು ಗುರುತಿಸಿದೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ತಿಳಿಸಿದೆ.

ಆದರೆ, ಚೀನಾದ ಪತ್ರಕರ್ತ ಶೆನ್ ಶಿವೈ ಅವರು ಈ ಕುರಿತು ಪ್ರತಿಕ್ರಿಯಿಸಿ, ಈ ವೀಡಿಯೊ ನಕಲಿ ಎಂದು ಹೇಳಿದ್ದಾರೆ. ಬೀಜಿಂಗ್ ನಗರವು ಇತ್ತೀಚಿನ ದಿನಗಳಲ್ಲಿ ಯಾವುದೇ ಮಳೆಗೆ ಸಾಕ್ಷಿಯಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.