ಆರೋಗ್ಯಕರ ಜೀವನಕ್ಕಾಗಿ ಮನೆಯಲ್ಲೇ ಇದೆ ಔಷಧಿ : ವಿಜ್ಞಾನಿಗಳೇ ಒಪ್ಪಿಕೊಂಡಿರುವ ಮನೆಮದ್ದುಗಳು ಇಲ್ಲಿದೆ ನೋಡಿ

natural home remedies :ಆರೋಗ್ಯಕರ ಜೀವನ ಎಂದರೆ ಉತ್ತಮ ಆರೋಗ್ಯ ಮತ್ತು ಒಳ್ಳೆಯ ಮನಸ್ಸು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸುವುದು ಮುಖ್ಯ. ಆರೋಗ್ಯಕರ ಜೀವನಶೈಲಿ ರೋಗಗಳನ್ನು ತಡೆಯುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಒಳ್ಳೆಯ ಅಭ್ಯಾಸಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ.

 

ಅಂತೆಯೇ ಉತ್ತಮ ಆಹಾರ ಸೇವನೆ ಕೂಡ ಆರೋಗ್ಯಯುತ ವ್ಯಕ್ತಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಆದರೆ ಇಂದಿನ ಆಹಾರ ಪದ್ಧತಿಯಿಂದ ಆರೋಗ್ಯವೆ ಹದಗೆಟ್ಟಿದೆ. ಇಂದರಿಂದ ಮುಕ್ತಿ ಪಡೆಯಲು ವೈದ್ಯರನ್ನು ಭೇಟಿ ಆಗಿ ಇಂಗ್ಲೀಷ್ ಮದ್ದು ಪಡೆಯುತ್ತಾರೆ. ಆದರೆ ಕೆಲವೊಂದು ಸಮಸ್ಯೆ ಗೆ ಮನೆಯಲ್ಲೇ ಔಷಧಿ ತಯಾರಿಸಬಹುದು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಹೌದು. ಕೆಲವೊಂದು ಮನೆ ಮದ್ದುಗಳು ನಿಜವಾಗಿಯೂ ಪರಿಣಾಮಕಾರಿಯಾಗಿದೆ ಎಂದು ಸ್ವತಃ ವಿಜ್ಞಾನಿಗಳೇ ಒಪ್ಪಿದ್ದಾರೆ. ಹಾಗಿದ್ರೆ ಬನ್ನಿ ಆ ಮನೆ ಮದ್ದುಗಳ (natural home remedies) ಕುರಿತು ತಿಳಿಯೋಣ.

ಅರಿಶಿನ:
ಅರಿಶಿನವನ್ನು ಹಾಲಿಗೆ ಅಥವಾ ನೀರಿಗೆ ಸೇರಿಸುವಾಗ ಒಂದು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಹಾಕಲು ಮರೆಯದಿರಿ. ಇದು ಅರಿಶಿನದ ಔಷದಿಯ ಗುಣವನ್ನು ಹೆಚ್ಚಿಸುತ್ತದೆ. ಅರಿಶಿನದಲ್ಲಿನ ಔಷಧೀಯ ಗುಣಕ್ಕೆ ಕರ್ಕ್ಯುಮಿನ್ ಕಾರಣವಾಗಿದೆ ಎಂದು ಹಲವಾರು ಅಧ್ಯಯನಗಳು ತಿಳಿಸುತ್ತದೆ. ಒಂದು ಅಧ್ಯಯನದಲ್ಲಿ, ಸಂಧಿವಾತ ನೋವು ಹೊಂದಿರುವ ಜನರು 50 ಮಿಗ್ರಾಂ ಡಿಕ್ಲೋಫೆನಾಕ್ ಸೋಡಿಯಂನ ಉರಿಯೂತದ ಔಷಧಕ್ಕಿಂತ 500 ಮಿಲಿಗ್ರಾಂ (ಮಿಗ್ರಾಂ) ಕರ್ಕ್ಯುಮಿನ್ ಅನ್ನು ತೆಗೆದುಕೊಂಡ ನಂತರ ಅವರ ನೋವಿನ ಮಟ್ಟವು ಕಡಿಮೆಯಾಗಿದೆ ಎಂದು ಗಮನಿಸಲಾಗಿದೆ.

ಕಾಳು ಮೆಣಸು:
ಕಾಳು ಮೆಣಸು ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಕಾರಣ ಇದನ್ನೂ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಕಾಳು ಮೆಣಸು ನಾಟಿ ಔಷಧದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಹೋಮಿಯೋಪತಿಯ ಹೊರಗೆ ನಿಧಾನವಾಗಿ ಹೆಚ್ಚು ಅಂಗೀಕರಿಸಲ್ಪಟ್ಟಿದೆ. ಇದರಲ್ಲಿನ, ಕ್ಯಾಪ್ಸೈಸಿನ್ ನೋವನ್ನು ನಿರ್ವಹಿಸುವ ಕೆಲಸ ಮಾಡುತ್ತದೆ. ಇದು ಮೊದಲು ಚರ್ಮದ ಪ್ರದೇಶವನ್ನು ಬಿಸಿಯಾಗುವಂತೆ ಮಾಡುವ ಮೂಲಕ ನೋವನ್ನು ತಗ್ಗಿಸುತ್ತದೆ.

ಶುಂಠಿ:
ಶೀತ, ನೋಯುತ್ತಿರುವ ಗಂಟಲಿನಿಂದ ಬಳಲುತ್ತಿರುವಾಗ ಅಥವಾ ಬೆಳಗಿನ ಬೇನೆ ಮತ್ತು ವಾಕರಿಕೆ ಅನುಭವಿಸುತ್ತಿರುವಾಗ ಶುಂಠಿಯನ್ನು ಸೇವಿಸಬಹುದು. ಶುಂಠಿಯ ಇತರ ಪ್ರಯೋಜನವೆಂದರೆ ಉರಿಯೂತ ನಿವಾರನೆಯಲ್ಲೂ ಸಹಕರಿಸುತ್ತದೆ.

ನೀಲಗಿರಿ ಎಣ್ಣೆ:
ನೀಲಗಿರಿ ಎಣ್ಣೆಯು 1,8-ಸಿನಿಯೋಲ್ ಎಂಬ ಅಂಶವನ್ನು ಹೊಂದಿದೆ, ಇದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇಲಿಗಳ ಮೇಲೆ ಇದನ್ನೂ ಪ್ರಯೋಗಿಸಿದಾಗ ಅವುಗಳಲ್ಲಿ ಮಾರ್ಫೀನ್ ಎಫೆಕ್ಟ್ ಕಂಡುಬಂದಿದೆ. ನೀಲಗಿರಿ ಎಣ್ಣೆಯು ದೇಹದ ನೋವನ್ನು ನಿವಾರಿಸುತ್ತದೆ ಎಂದು ಅಧ್ಯಯನಗಳಲ್ಲಿ ತೋರಿಸಲಾಗಿದೆ.

ಪುದೀನಾ:
ನಾಟಿ ಔಷಧದಲ್ಲಿ ಸಾಮಾನ್ಯವಾಗಿ ಪುದೀನಾವನ್ನು ಹಲವಾರು ವಿಭಿನ್ನ ಚಿಕಿತ್ಸೆಗಳಲ್ಲಿ ಬಳಸುತ್ತಾರೆ. ಪುದೀನಾ ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್ (IBS) ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಫೈಬರ್ ಜೊತೆಗೆ, ಇದು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಜೀರ್ಣಾಂಗದಲ್ಲಿ ಉರಿಯೂತದ ನೋವನ್ನು ಕಡಿಮೆ ಮಾಡುತ್ತದೆ.

Leave A Reply

Your email address will not be published.