Bangalore-Mysore Highway: ಲೋಕಾರ್ಪಣೆ ದಿನವೇ ಮೈಸೂರು – ಬೆಂಗಳೂರು ನೂತನ ಎಕ್ಸ್ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ
Bangalore-Mysore Highway :ಇಂದು ಬಹುನಿರೀಕ್ಷಿತ ಮೈಸೂರು- ಬೆಂಗಳೂರು(Bangalore-Mysore Highway) ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಉದ್ಘಾಟನೆ ಮಾಡಿದ್ದಾರೆ. ಆದರೆ ವಿಪರ್ಯಾಸವೆಂದರೆ ಲೋಕಾರ್ಪಣೆಯಾದ ದಿನವೇ ಈ ನೂತನ ಎಕ್ಸ್ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಹೌದು, ಮಂಡ್ಯ(Mandya) ಜಿಲ್ಲೆ ಮದ್ದೂರಿನ(Maddur) ಎಕ್ಸ್ಪ್ರೆಸ್ ಹೈವೇ ಫ್ಲೈ ಓವರ್ ಬಳಿ ಕಾರು ಪಲ್ಟಿಯಾಗಿದೆ. ಇದು ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಪಲ್ಟಿಯಾದ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯವಾಗಿವೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ಕೆಲವು ದಿನಗಳಿಂದ ಈ ಹೈವೇ ವಿಚಾರವಾಗಿ ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿತ್ತು. ‘ಶ್ರೇಯಸ್ಸು ಸಿಂಹಕ್ಕೆ ಸೇರಬೇಕೆ ಹೊರತು ನರಿಗಲ್ಲ’ ಎಂಬ ಪೋಸ್ಟ್ ಗಳು ಸುದ್ಧಿಮಾಡಿದ್ದವು. ಇದರ ನಡುವೆ ಈ ದಶಪಥ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿದೆ. ಇದು ಹೈವೇ ರೋಡ್ ಅಲ್ಲ ಕಿಲ್ಲರ್ ರೋಡ್ ಎಂಬ ಟೀಕೆಗಳು ಆಗಾಗ ಕೇಳಿಬರುತ್ತಿದ್ದವು. ಇದರ ಬೆನ್ನಲೇ ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾದ ಕೂಡಲೇ ಅಪಘಾತ ಸಂಭವಿಸಿರೋದು ಕಾಕತಾಳೀಯ ಎನಿಸಿದೆ.
ಇನ್ನು ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ-275ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ 6-ಪಥವನ್ನು ಒಳಗೊಂಡಿದೆ. 118 ಕಿಮೀ ಉದ್ದದ ಈ ಯೋಜನೆಯನ್ನು ಒಟ್ಟು 8480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು 3 ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ಇಳಿಸಿದೆ.