Women Secret: ಹುಡುಗಿಯರು ಮಾಡೋ ಈ ಸನ್ನೆಗಳ ನಿಜವಾದ ಅರ್ಥ ಏನು ಗೊತ್ತಾ? ನೋಡಿ, ಈಗಲೇ ಅರ್ಥ ಮಾಡಿಕೊಳ್ಳಿ, ನಿಮ್ಮ ಹುಡುಗಿಯಲ್ಲೂ ಗಮನಿಸಿ!

Women Secret : ಈ ಜಗತ್ತಿನಲ್ಲಿ ಯಾರ ಮನಸ್ಸನ್ನಾದರೂ ಅರಿಯಬಹುದು, ಆದರೆ ಈ ಮಹಿಳೆಯರ ಮನಸ್ಸು ತಿಳಿದುಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಈಗಿದ್ದ ಮನಸ್ಸು ಅವರಿಗೆ ಇನ್ನು ಸ್ವಲ್ಪ ಸಮಯದಲ್ಲಿ ಇರೋದಿಲ್ಲ, ಯಾವಾಗಲೂ ಚಂಚಲವಾದ ಮನಸ್ಥಿತಿ ಹೊಂದಿರುತ್ತಾರೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಕೆಲವೊಮ್ಮೆ ಅವರು ವಿವಿಧ ರೀತಿಯ ಸನ್ನೆಗಳನ್ನು ತೋರಿದರೂ ಅದು ನಮಗೆ ಅರ್ಥವಾಗದೆ ಹೋಗುತ್ತದೆ. ಅಂತೆಯೇ ಈ ಲೇಖನದಲ್ಲಿ ಮಹಿಳೆಯರು ನೀಡುವಂತಹ ಕೆಲವು ಸನ್ನೆಗಳು ಯಾವ ಅರ್ಥವನ್ನು ನೀಡುತ್ತವೆ (Women Secret) ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ.

 

ನೀವು ಯಾರಾದರೂ ನಿಮ್ಮ ಪರಿಚಯಸ್ಥ ಹುಡಿಗಿಯೊಂದಿಗೆ ಮಾತನಾಡುತ್ತಿರಬೇಕಾದರೆ ಆಕೆ ನಿಮ್ಮ ಮಾತಿಗೆ ಪದೇ ಪದೇ ತಲೆ ಅಲ್ಲಾಡಿಸುತ್ತಿದ್ದಾಳೆ ಎಂದರೆ ಅಥವಾ ಅವಳೇನಾದರೂ ಬಾಗಿದರೆ ಅದನ್ನು ಬೇರೆ ಅಪಾರ್ಥ ಮಾಡಿಕೊಳ್ಳಬೇಡಿ ಖಂಡಿತವಾಗಿ ನೀವು ಹೇಳುತ್ತಿರುವ ಮಾತುಗಳು ಅವಳಿಗೆ ಇಷ್ಟವಾಗಿದೆ ಹಾಗೂ ಅದನ್ನು ಅವಳು ಗಂಭೀರವಾಗಿ ಕೇಳುತ್ತಿದ್ದಾಳೆ(Listening seriously) ಎಂಬ ಅರ್ಥ ಅದು. ಅಲ್ಲದೆ ನೀವು ಮಾತನಾಡುತ್ತಿರುವ ಮಾತುಗಳು ಆಕೆಗೆ ಗಂಭೀರವಾಗಿವೆ ಎನ್ನುವುದಾಗಿದೆ.

ಒಂದು ವೇಳೆ ಆಕೆ ನಿಮ್ಮನ್ನು ನೋಡಿ ಮುದುಡಿ ಸಂಕುಚಿತವಾಗಿ ಕುಳಿತುಕೊಂಡಿದ್ದರೆ ಅದರ ಅರ್ಥ ಆಕೆ ನಿಮಗೆ ಶರಣಾಗಿದ್ದಾಳೆ ಎಂದು. ಅಲ್ಲದೆ ನಿಮ್ಮ ಜೊತೆ ಮಾತನಾಡುತ್ತಿರಬೇಕಾದರೆ ಪದೇಪದೇ ತಲೆ ಕೂದಲನ್ನು ಮುಟ್ಟುತ್ತಿದ್ದಾಳೆ ಎಂದರೆ ಆಕೆ ನಿಮ್ಮ ಬಗ್ಗೆ ಆಕರ್ಷಿತಳಾಗಿದ್ದಾಳೆ(Interested) ಎನ್ನುವುದರ ಸೂಚನೆಯಾಗಿದೆ. ಒಂದು ವೇಳೆ ಆಕೆ ಸಂಬಂಧವಿಲ್ಲದ ಸಮಯದಲ್ಲಿ ನಗುತಿದ್ದಾಳೆ ಎಂದರೆ ಆ ಪರಿಸ್ಥಿತಿಯಲ್ಲಿ ಅಥವಾ ಆ ಚರ್ಚೆಯಲ್ಲಿ ನರ್ವಸ್ ಆಗಿದ್ದಾಳೆ ಅನ್ನುವುದನ್ನು ತೋರಿಸುತ್ತದೆ.

ಇನ್ನು ಮಾತನಾಡುವಾಗ ಆಕೆ ನಿಮ್ಮನ್ನು ನೋಡಿ ತುಟಿ ಕಚ್ಚುತ್ತಿದ್ದಾಳೆ ಎಂದರೆ ಕೇವಲ ಅವಳು ನಿಮ್ಮ ಬಗ್ಗೆ ಇಂಟರೆಸ್ಟ್(Showing Interest) ತೋರಿಸುತ್ತಿದ್ದಾಳೆ ಎಂದಲ್ಲ ಬದಲಾಗಿ ಚಿಂತೆ ಹಾಗೂ ಒತ್ತಡ ಇರುವ ಸಂದರ್ಭದಲ್ಲಿ ಕೂಡ ಮಹಿಳೆ ಈ ರೀತಿಯ ಸನ್ನೆಗಳನ್ನು ತೋರಿಸುತ್ತಾಳೆ. ಈ ಬಗ್ಗೆ ಅರಿತುಕೊಂಡರೆ ನಿಮ್ಮ ಮುಂದೆ ಇರುವಂತಹ ಮಹಿಳೆ ಅಥವಾ ಹುಡುಗಿ ಇವುಗಳಲ್ಲಿ ಯಾವುದಾದರೂ ಸನ್ನೆಯನ್ನು ಮಾಡುತ್ತಿದ್ದರೆ ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ತಿಳಿದು ಬರುತ್ತದೆ.

ಇದನ್ನೂ ಓದಿ :  Vijaya Sankalpa Yatre: ಏ ಕುಮಾರಸ್ವಾಮಿ, ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು

Leave A Reply

Your email address will not be published.