SBI Recruitment 2023 : ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ : ಮಾ.31

SBI Recruitment 2023 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (SBI Recruitment 2023)
ಹುದ್ದೆ : ಬ್ಯುಸಿನೆಸ್ ಕರೆಸ್ಪಾಂಡೆಂಟ್ ಫೆಸಿಲಿಟೇಟರ್​ ಹುದ್ದೆ ಒಟ್ಟು ಹುದ್ದೆ : ಬೆಂಗಳೂರಿನಲ್ಲಿ ಒಟ್ಟು 32 ಹುದ್ದೆಗಳು
ದೇಶಾದ್ಯಂತ 868 ಹುದ್ದೆ ಭರ್ತಿ ನಡೆಸಲಾಗುವುದು.

ವಿದ್ಯಾರ್ಹತೆ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ನಿಯಮಾನುಸಾರ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರತಕ್ಕದ್ದು.

ವಯೋಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಾನ ಮಾರ್ಚ್​ 10ಕ್ಕೆ 65 ವರ್ಷ ಮೀರಿರಬಾರದು. ಪ.ಜಾ, ಪ.ಪಂ, ಪ್ರವರ್ಗ 1 ಸೇರಿದಂತೆ ಉಳಿದ ವರ್ಗಗಳಿಗೆ ಎಸ್​ಬಿಐ ಅನುಸಾರ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಎಸ್​ಬಿಐನಲ್ಲಿ 30 ವರ್ಷ ಸೇವಾ ನಿಯಮ ಪಾಲನೆ ಮಾಡಿರಬೇಕು.

ವೇತನ:
ಎಸ್​ಬಿಐ ನಿಯಮ ಅನುಸಾರ ಅಭ್ಯರ್ಥಿಗಳಿಗೆ ಮಾಸಿಕ 40 ಸಾವಿರ ವೇತನವನ್ನು ನಿಗದಿ ಮಾಡಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್​ ಮಾಡಿ ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ನಂತರ ಮೆರಿಟ್​ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ:
ಈ ಹುದ್ದೆಗೆ ಈಗಾಗಲೇ ಎಸ್​ಬಿಐನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಬ್ಯಾಂಕ್​ ನೌಕರರ ಕಾರ್ಯ ನಿರ್ವಹಣೆ ಅವಧಿಯಲ್ಲಿ ಈ ಅಭ್ಯರ್ಥಿಗಳು ಕೂಡ ಕಾರ್ಯ ನಿರ್ವಹಿಸಲಿದ್ದಾರೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್​ಬಿಐ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಆನ್​ಲೈನ್​ ಮೂಲಕವೇ ಅಗತ್ಯ ದಾಖಲೆಗಳ ಮಾಹಿತಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : ಮಾರ್ಚ್​ 31

ಅಧಿಕೃತ ವೆಬ್ ಸೈಟ್ : sbi.co.in

ಇದನ್ನೂ ಓದಿ : ಮಂಗಳೂರಿನ ಏರ್‌ಲೈನ್ಸ್ ನಲ್ಲಿ ಪದವಿ ಆದವರಿಗೂ ಇದೆ ಉದ್ಯೋಗವಕಾಶ

Leave A Reply

Your email address will not be published.