McDonald’s ನಲ್ಲಿ ಊಟ ಮಾಡ್ತಿದ್ದ ಹುಡುಗನ ಚಡ್ಡಿಗೊಳಗೆ ಹೋದ ಇಲಿ? ಮುಂದೆನಾಯ್ತು ಗೊತ್ತಾ?
McDonald’s : ಬೇಸಿಗೆಯಲ್ಲಿ ಇಲಿಗಳ ಕಾಟ ತಪ್ಪಿದಲ್ಲ. ಇಲಿಗಳನ್ನು ಹೋಟೆಲ್ ಅಥವಾ ಮನೆಯಿಂದ ಹೊರಹಾಕೋದು ತುಂಬಾ ಕಷ್ಟದ ಸಂಗತಿಯಾಗಿದೆ. ಕೆಲವೊಮ್ಮೆ ಸಣ್ಣ ಇಲಿಯೂ ಬಹು ದೊಡ್ಡ ಭೀತಿ ಸೃಷ್ಟಿಸುವುದು ಸಹಜ. ಇದೀಗ ಇಂತಹದ್ದೇ ಅವಾಂತರ ಸೃಷ್ಟಿ ಮಾಡಿದ ಘಟನೆಯೊಂದು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
ತೆಲಂಗಾಣ ನಗರದ ಮೆಕ್ಡೊನಾಲ್ಡ್ಸ್ನಲ್ಲಿ(McDonald’s ) ವ್ಯಕ್ತಿಯೊಬ್ಬರು ಊಟ ಮಾಡಲು ಹೋದಾಗ ಹುಡುಗನೊಬ್ಬನ ಚಡ್ಡಿಯೊಳಗೆ ಇಲಿ ಹೋಗಿ ಕಚ್ಚಿದ್ದು, ಬಾಲಕನ ಕಿರುಚಾಡಿದ್ದನ್ನು ಕೇಳಿ ಮೆಕ್ ಡೊನಾಲ್ಡ್ ಸಿಬ್ಬಂದಿ ಮತ್ತು ಬಾಲಕನ ತಂದೆ ಗಾಬರಿಗೊಂಡಿದ್ದರು. ಅವನು ಇಲಿಯನ್ನು ಪಕ್ಕಕ್ಕೆ ಎಳೆದು ಎಸೆದನು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕನನ್ನು ಬೋಯಿನಪಲ್ಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇಬಿಸ್ ನಿರೋಧಕ ಚುಚ್ಚುಮದ್ದನ್ನು ತಕ್ಷಣವೇ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಲಿಕಚ್ಚಿದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಮಾಡಿದೆ.
ಬಾಲಕನ ತಂದೆ ಘಟನೆಯ ಬಗ್ಗೆ ಸಿಟ್ಟುಕೊಂಡಿದ್ದು, ಘಟನೆ ನಡೆದ ಒಂದು ದಿನದ ನಂತರ, ಬಾಲಕನ ತಂದೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವಲ್ಲಿ ಮೆಕ್ಡೊನಾಲ್ಡ್ಸ್ ವಿಫಲವಾಗಿದೆ ಎಂದು ಅವರು ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಮೆಕ್ ಡೊನಾಲ್ಡ್ಸ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, “ಮೆಕ್ಡೊನಾಲ್ಡ್ಸ್ ಇಂಡಿಯಾದಲ್ಲಿ, ನಮ್ಮ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಯಾವಾಗಲೂ ಅತ್ಯುನ್ನತ ಮಟ್ಟದ ಗುಣಮಟ್ಟ, ಸೇವೆ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ನಾವು ಹೆಮ್ಮೆಪಡುತ್ತೇವೆ. ಹುಡುಗನ ಮೇಲೆ ಇಲಿ ದಾಳಿಯ ಘಟನೆಯ ಬಗ್ಗೆ ನಮಗೆ ತಿಳಿಯಿತು. ಈ ಘಟನೆಯು ರೆಸ್ಟೋರೆಂಟ್ ನಲ್ಲಿನ ನಮ್ಮ ಸಿಬ್ಬಂದಿಗೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿತು. ಗ್ರಾಹಕರಿಗೆ, ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ನಿರ್ವಹಿಸಲು ಕ್ರಮಗಳನ್ನು ಕೈಗೊಂಡರು.
ಆಹಾರ ಸುರಕ್ಷತಾ ಅಧಿಕಾರಿಗಳು ತಮ್ಮ ಲೆಕ್ಕಪರಿಶೋಧನೆಯಲ್ಲಿ ನಾವು ರೆಸ್ಟೋರೆಂಟ್ ನಲ್ಲಿ ಅಗತ್ಯ ಮಾನದಂಡಗಳನ್ನು ನಿರ್ವಹಿಸುತ್ತಿದ್ದೇವೆ ಎಂದು ಕಂಡುಕೊಂಡರು. ನಮ್ಮ ಎಲ್ಲಾ ರೆಸ್ಟೋರೆಂಟ್ ಗಳ ಮೇಲೆ ಕೀಟ ನಿಯಂತ್ರಣವನ್ನು ಸಿಂಪಡನೆ ಮಾಡುತ್ತೇವೆ. ಯಾವುದೇ ರೀತಿಯ ಸಮಸ್ಯೆಯಾಗದಂತೆ ಕಾಳಜಿ ವಹಿಸುವುದನ್ನು ಮುಂದುವರಿಸುತ್ತೇವೆ. ಮೆಕ್ ಡೊನಾಲ್ಡ್ಸ್ ಇಂಡಿಯಾದಲ್ಲಿ, ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿದೆ. ಸುರಕ್ಷಿತ, ಆರೋಗ್ಯಕರ ಮತ್ತು ಗುಣಮಟ್ಟದ ಆಹಾರವನ್ನು ಒದಗಿಸಲು ನಾವು ಯಾವಾಗಲೂ ಬದ್ಧರಾಗಿದ್ದೇವೆ.