Male Birth Control Gel : ಬಂದಿದೆ ಜೆಲ್‌ ರೂಪದಲ್ಲಿ ಪುರುಷ ಗರ್ಭ ನಿರೋಧಕ ! ಜಸ್ಟ್‌ ನಿಮ್ಮ ಭುಜಕ್ಕೆ ಹಚ್ಚಿ ಸಾಕು, ಮಕ್ಕಳಾಗುವುದಿಲ್ಲ!!!

Male Birth Control Gel : ಗರ್ಭ ನಿರೋಧಕದ ವಿಚಾರವಾಗಿ ಹುಡುಗಿಯರಿಗೆ ನಾನಾ ರೀತಿಯ ಆಯ್ಕೆಗಳಿದ್ದರೆ, ಪುರುಷರಿಗೆ ಕಾಂಡೋಮ್(Condom), ಮಾತ್ರೆ(Tablets) ಹಾಗೂ ಶಸ್ತ್ರಚಿಕಿತ್ಸೆ(Operation) ಗಳಂತಹ ಗರ್ಭ ನಿರೋಧಕಗಳು ಸದ್ಯ ಮಾರುಕಟ್ಟೆಯಲ್ಲಿವೆ. ಆದರೀಗ ಈ ಗರ್ಭ ನಿರೋಧಕದಲ್ಲಿ ಹೊಸದೊಂದು ಆವಿಷ್ಕಾರ ನಡೆದಿದ್ದು, ಪುರುಷರು ಕಾಂಡೋಮ್, ಮಾತ್ರೆಯ ಬದಲು ಜೆಲ್‌ (Male Birth Control Gel) ಬಳಸಬಹುದು. ಹೌದು, ಅಂತಹದ್ದೊಂದು ವಿನೂತನ ಪ್ರಯೋಗ ನಡೆದಿದ್ದು, ಇದು ಯಶಸ್ವಿಯಾಗಿದೆ. ಹಾಗಾದ್ರೆ ಇದನ್ನ ಬಳಸೋದು ಹೇಗೆ, ಎಲ್ಲಿಗೆ ಹಚ್ಚಬೇಕು ಎಂಬೆಲ್ಲಾ ಮಾಹಿತಿಗಳು ಇಲ್ಲಿದೆ ನೋಡಿ.

ಹೌದು, ಕಾಂಟ್ರಾಲೈನ್ ಎಂಬ ವರ್ಜೀನಿಯಾ ಮೂಲದ ಸ್ಟಾರ್ಟಪ್ ಅಭಿವೃದ್ಧಿಪಡಿಸಿರುವ ಈ ವಿನೂತನ ಪುರುಷರ ಗರ್ಭ ನಿರೋಧಕದ ಪ್ರಯೋಗವು 2023ರ ಗಿಜ್ಮೊಡೊ ಸೈನ್ಸ್ ಫೇರ್‌ನಲ್ಲಿ ಯಶಸ್ಸನ್ನು ಕಂಡಿದೆ. ಅಲ್ಲದೆ ಈ ಜೆಲ್, ಕ್ಲಿನಿಕಲ್ ಪ್ರಯೋಗಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದೊಂದು ರೀತಿಯ ಅಚ್ಚರಿಯಾದರೂ ಸತ್ಯ. ಇದರ ವಿಶೇಷವೆಂದರೆ, ಈ ಜೆಲ್ಲನ್ನು ಪುರುಷರು ತಮ್ಮ ಭುಜಗಳಿಗೆ ಲೇಪಿಸಿಕೊಂಡರಷ್ಟೇ ಸಾಕು! ನೆಸ್ಟೊರಾನ್ ಜೆಲ್ ನ್ನು ಪುರುಷರು ತಮ್ಮ ಭುಜಕ್ಕೆ ಹಚ್ಚಿಕೊಂಡರೆ ಸಾಕು. ಇದನ್ನು ಚರ್ಮ ಎಳೆದುಕೊಳ್ಳುತ್ತದೆ.

ಇದು ಪುರುಷರ ಲೈಂಗಿಕಾಸಕ್ತಿ ಕಡಿಮೆ ಮಾಡುವುದಿಲ್ಲ. ಬದಲಿಗೆ ಕೇವಲ ವೀರ್ಯವು ಪುರುಷರ ಮೂತ್ರನಾಳಕ್ಕೆ ಹೋಗದಂತೆ ನಿರ್ಬಂಧಿಸುತ್ತದೆ. ಈ ನೆಸ್ಟೊರಾನ್ ಮತ್ತು ಇಂತಹುದೇ ಔಷಧಿಗಳನ್ನು ಈಗಾಗಲೇ ಮಹಿಳೆಯರಿಗೆ ಗರ್ಭ ನಿರೋಧಕವಾಗಿ ಬಳಸಲಾಗುತ್ತದೆ. ಇದನ್ನು ಪುರುಷರಿಗೆ ನೀಡಿದಾಗ, ಟೆಸ್ಟೋಸ್ಟೆರಾನ್ ಸೇರಿದಂತೆ ಪುರುಷ ಫಲವತ್ತತೆಗೆ ಕಾರಣವಾದ ವೃಷಣಗಳಲ್ಲಿನ ಹಾರ್ಮೋನುಗಳ ಮಟ್ಟವನ್ನು ಔಷಧವು ಕಡಿಮೆ ಮಾಡುತ್ತದೆ, ಇದು ಕಡಿಮೆ ವೀರ್ಯ ಎಣಿಕೆಗೆ ಕಾರಣವಾಗುತ್ತದೆ.

ತೊಂದರೆಯೆಂದರೆ ಇದು ರಕ್ತದಲ್ಲಿ ಪರಿಚಲನೆಯಾಗುವ ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ, ಇದು ಕಡಿಮೆ ಲೈಂಗಿಕ ಡ್ರೈವ್‌ನಂತಹ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ಈ ಅಡ್ಡ ಪರಿಣಾಮ ಎದುರಿಸಲು ಸಶಕ್ತವಾಗುವಂತೆ ಜೆಲ್ ತಯಾರಿಸಲಾಗಿದೆ. ಆದ್ದರಿಂದ ಜೆಲ್‌ಗೆ ಸಂಶ್ಲೇಷಿತ ಟೆಸ್ಟೋಸ್ಟೆರಾನ್ ಅನ್ನು ಸೇರಿಸುವ ಮೂಲಕ, ಪುರುಷರ ರಕ್ತದಲ್ಲಿ ಹಾರ್ಮೋನ್ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಬಹುದು. ಈ ಮೂಲಕ ಅವರ ತಾತ್ಕಾಲಿಕ ಸಂತಾನಹೀನತೆಯನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬಹುದು.

ನಿರೀಕ್ಷೆಯಂತೆ ಎಲ್ಲವೂ ಕಾರ್ಯರೂಪಕ್ಕೆ ಬಂದರೆ, NES/T ಜೆಲ್(ಪುರುಷ ಜನನ ನಿಯಂತ್ರಣ ಜೆಲ್) ಶೀಘ್ರದಲ್ಲೇ ಸಾರ್ವಜನಿಕರನ್ನು ತಲುಪುವ ಮೊದಲ ಹೊಸ ರೀತಿಯ ಪುರುಷ ಗರ್ಭನಿರೋಧಕವಾಗಬಹುದು.

Leave A Reply

Your email address will not be published.