Electric Vehicle : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ A250, Ambler ಎಲೆಕ್ಟ್ರಿಕ್ ಬೈಕ್ ; ಇವುಗಳ ವಿಶೇಷತೆಯ ಕುರಿತು ಮಾಹಿತಿ ಇಲ್ಲಿದೆ!
A250, Ambler Electric Vehicle : ಮಾರುಕಟ್ಟೆಗೆ ದಿನಕ್ಕೊಂದು ವಿವಿಧ ರೀತಿಯ ವಿಶೇಷ ವಾಹನಗಳು (Vehicles) ಬರುತ್ತಿವೆ. ಬರುತ್ತಿರುವ ವಾಹನಗಳೆಲ್ಲವು ವಿವಿಧ ರೀತಿಯ ವಿಶೇಷಗಳನ್ನೂ ಹೊಂದಿದ್ದು, ಇವುಗಳು ಜನರ ಕಣ್ಣನ್ನು ಸೆಳೆಯುತ್ತಿರುವುದರಲ್ಲಿ ಎರಡು ಮಾತಿಲ್ಲ. ಜನರಿಗೆ ಯಾವ ವಾಹನಗಳನ್ನು ಖರೀದಿಸುವುದು ಎಂಬುವುದೇ ಯೋಚನೆ ಮಾಡುವ ರೀತಿಯಲ್ಲಿ ಸೂಪರ್ ಆದ ಗಾಡಿಗಳು ಮಾರುಕಟ್ಟೆಗೆ (Market) ಲಗ್ಗೆ ಇಡುತ್ತಲೇ ಇರುತ್ತದೆ. ಇದೀಗ ಮತ್ತೊಂದು ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.
ಟೆಕ್ ಇನ್ನೋವೇಟಿವ್ ಮೊಬಿಲಿಟಿ ಎಂಬ ಕಂಪೆನಿಯು ಎರಡು ಹೊಸ ಇವಿಗಳನ್ನು ಮಾರುಕಟ್ಟೆಗೆ ತಂದಿದೆ. ಇವುಗಳ ಹೆಸರುಗಳು A250, Ambler. ( A250, Ambler Electric Vehicle ) ಬನ್ನಿ ಇವುಗಳ ಬಗ್ಗೆ ತಿಳಿದುಕೊಳ್ಳೋಣ.
ಈ ಕಂಪನಿಯು ಮಾರುಕಟ್ಟೆಗೆ ಎರಡು ಹೊಚ್ಚ ಹೊಸ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡಿದೆ. ಇವುಗಳ ಹೆಸರು A250 ಮತ್ತು ಆಂಬ್ಲರ್ (Ambler)ಎಂಬುದಾಗಿದೆ. ವಿಶಿಷ್ಟ ಆಂಬ್ಲರ್ (Ambler) ವಾಹನದ ಬಗ್ಗೆ ಹೇಳುವುದಾದರೆ ಇದೊಂದು ವಿಶಿಷ್ಟ ಮಹತ್ವವನ್ನು ಹೊಂದಿರುವ ವಾಹನ ಎಂದೇ ಹೇಳಬಹುದು, ಯಾಕೆಂದರೆ ಈ ರೀತಿಯ ವಾಹನಗಳು ಮಾರುಕಟ್ಟೆಗೆ ಬಂದಿರಲಿಲ್ಲ. ಇದೇ ಮೊದನೆಯದು ಎಂದು ಕಂಪನಿ ಹೇಳಿದೆ.
ಈ ಆಂಬ್ಲರ್ (ambler) ವಾಹನವನ್ನು ಒಮ್ಮೆ ಚಾರ್ಜ್ (charge) ಮಾಡಿದರೆ 75 ಕಿಲೋಮೀಟರ್ ವರಗೆ ಚಲಿಸುತ್ತದೆ. ಈ ವಾಹನಕ್ಕೆ ಲೈಸೆನ್ಸ್ ನ ಅಗತ್ಯವಿಲ್ಲ. ಈ ವಾಹನವು 150 ಕೆಜಿ ಹೋರುವ ಸಾಮರ್ಥ್ಯವನ್ನು ಹಿಂದಿದೆ. ಹಾಗೂ ಮೂರು ವರ್ಷದ ವಾರಂಟಿಯನ್ನೂ ಹೊಂದಿದ್ದು, ಇದರ ಬೆಲೆ ಬಂದು 49,999 ದಿಂದ ಪ್ರಾರಂಭವಾಗುತ್ತದೆ.
ಇದರ ಮತ್ತೊಂದು ವಿಶೇಷತೆ ಅಂದರೆ ಬ್ಯಾಟರಿ ವಾಟರ್ ಪ್ರೂಫ್ ಫಿಚರ್ ಅನ್ನೂ ಹೊಂದಿದೆ. ಹಾಗೂ ಕೇವಲ 3 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಕೂಡ ಹೊಂದಿದೆ.
ಹಾಗೆಯೇ A250 ಯ ಬಗ್ಗೆ ಹೇಳುವುದಾದರೆ ಇದನ್ನೂ ಒಂದು ಸಲ ಚಾರ್ಜ್(charge) ಮಾಡಿದರೆ 45 ಕಿಲೋಮೀಟರ್ ವರಗೆ ಸಂಚರಿಸುವ ವಾಹನ ಇದಾಗಿದೆ. ಈ ವಾಹನದ ಬ್ಯಾಟರಿ ಗೆ ಒಂದು ವರ್ಷ ವಾರಂಟಿ ನೀಡಲಾಗುತ್ತದೆ. ಈ ಬೈಸಿಕಲ್ ನ ವೇಗ 25 ಕಿಲೋಮೀಟರ್ ಆಗಿದೆ. ಇದು 36V 250W BLDC ಹಬ್ ಮೋಟಾರ್ ಅನ್ನೂ ಹೊಂದಿದೆ. ಇದು ಎಲ್ ಡಿ ಸಿ ಡಿಸ್ಪ್ಲೇ ಯನ್ನು ಕೂಡ ಹೊಂದಿದೆ.
ಅಂದ ಹಾಗೆ ಇದರ ಬೆಲೆಯು ಕೇವಲ 27,999 ರಿಂದ ಪ್ರಾರಂಭವಾಗುತ್ತದೆ. ಅತಿ ಕಡಿಮೆ ಬೆಲೆಯ ಒಂದು ಒಳ್ಳೆಯ ಬೈಸಿಕಲ್ ಆಗಿದೆ ಎಂದೇ ಹೇಳಬಹುದು. ಎಲೆಕ್ಟ್ರಿಕ್ ಕಂಪನಿ ಈ ರೀತಿಯ ವಾಹನಗಳನ್ನು ಬಿಡುಗಡೆ ಮಾಡಿರುವುದು ಜನರಿಗೆ ನಿಜಕ್ಕು ಉಪಯುಕ್ತಕರ. ಕಡಿಮೆ ಬೆಲೆಗೆ ಹಲವಾರು ವಿಶೇಷ ಹೊಂದಿರುವ ಈ ವಾಹನಗಳು ಇದಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಾಹನ ಎಂದೇ ಹೇಳಬಹುದು.