Ratan Tata: ಇನ್ಸ್ಟಾದಲ್ಲಿ ರತನ್ ಟಾಟಾ ಫಾಲೋ ಮಾಡೋ ಆ ಏಕೈಕ ಖಾತೆ ಯಾವುದು ಗೊತ್ತಾ?
Ratan Tata :ತಮ್ಮದೇ ಕ್ಷೇತ್ರದಲ್ಲಿ ಹೆಸರು ಮಾಡಿ ಖ್ಯಾತಿ ಗಳಿಸಿದ ಸಾಧಕರೆಲ್ಲರೂ ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿರ್ತಾರೆ. ಅದರಲ್ಲೂ ಇಂದು ಟ್ರೆಂಡ್ ಆಗಿರೋ ಇನ್ಸ್ಟಾಗ್ರಾಮ್(Instagram) ಅಲ್ಲಂತೂ ತುಸು ಹೆಚ್ಚೆನ್ನಬಹುದು. ಇಲ್ಲಿ ಇವರಿಗೆ ಲಕ್ಷಾಂತರ ಫಾಲೋವರ್ಸ್(Followers) ಕೂಡ ಇರುತ್ತಾರೆ. ಇದರೊಂದಿಗೆ ಅವರೂ ಕೆಲವರನ್ನು ಫಾಲೋ ಮಾಡಾತಿರ್ತಾರೆ. ಆದ್ರೆ ಅದು ಕೇವಲ ಆಯ್ದ ಖಾತೆಗಳಾಗಿರುತ್ತವೆ. ಅಂತೆಯೇ ನಮ್ಮ ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ(Ratan Tata) ಕೂಡ ಈ ಇನ್ಸ್ಟಾಗ್ರಾಮ್ ನಲ್ಲಿ ಸದಾ ಸಕ್ರಿಯರಾಗಿದ್ದು ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ. ಆದರೆ ರತನ್ ಟಾಟಾ ಮಾತ್ರ ಕೇವಲ ಒಬ್ಬ ವ್ಯಕ್ತಿಯನ್ನು ಫೋಲೋ ಮಾಡ್ತಿದ್ದು, ಆ ಏಕೈಕ ವ್ಯಕ್ತಿ ಯಾರು? ಅನ್ನೋ ಕುತೂಹಲ ಸದ್ಯ ಎಲ್ಲರಲ್ಲೂ ಕಾಡ್ತಿದೆ.
ಹೌದು, ತಮ್ಮ ವಿಶಿಷ್ಟವಾದ ವ್ಯಕ್ತಿತ್ವ, ಬದುಕಿನ ಶೈಲಿ ಹಾಗೂ ವಿಶಿಷ್ಟವಾದ ಕಾರ್ಯಗಳ ಮೂಲಕ ಎಲ್ಲರ ಮನದಲ್ಲಿ ಬೇರೂರಿರುವ ಬಹುದೊಡ್ಡ, ಪ್ರಸಿದ್ದ ಉದ್ಯಮಿ ಎಂದರೆ ಅದು ರತನ್ ಟಾಟಾ. ಇವರು ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 8.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇಷ್ಟೊಂದು ಫಾಲೋವರ್ಸ್ಗಳನ್ನು ಪಡೆದುಕೊಂಡಿರುವುದು ವಿಶೇಷ ಸಂಗತಿ ಏನಲ್ಲಾ, ಆದರೆ ಇವರು ಒಂದೇ ಒಂದು ಇನ್ಸ್ಟಾಗ್ರಾಮ್ ಖಾತೆ ಫಾಲೋ ಮಾಡುತ್ತಿದ್ದಾರೆ. ಅಷ್ಟಕ್ಕೂ ರತನ್ ಟಾಟಾ ಫಾಲೋ ಮಾಡುತ್ತಿರುವ ಇನ್ಸ್ಟಾಗ್ರಾಮ್ ಖಾತೆ ಯಾವುದು?
ಅಂದಹಾಗೆ ಇದು ಯಾವುದೇ ಸೆಲೆಬ್ರಿಟಿಗಳು ಅಥವಾ ಅವರ ಗೆಳೆಯರಲ್ಲ. ಸದಾ ಸಮಾಜ ಸೇವೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಯುವ ಜನತೆಗೆ ಸ್ಫೂರ್ತಿಯಾಗಿರುವ ರತನ್ ಟಾಟಾರವರು ಫಾಲೋ ಮಾಡುವ ಏಕೈಕ ಇನ್ಸ್ಟಾಗ್ರಾಮ್ ಖಾತೆ ಟಾಟಾ ಗ್ರೂಪ್ನ ಟಾಟಾ ಟ್ರಸ್ಟ್ಸ್(Tata Trust) ನದ್ದು. ಇತ್ತೀಚಿನ ದಿನಗಳಲ್ಲಿ ಟಾಟಾ ಟ್ರಸ್ಟ್ಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರತನ್ ಟಾಟಾ, ಅದರ ಇನ್ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡ್ತಿದ್ದಾರೆ.
ಈ ಟಾಟಾ ಟ್ರಸ್ಟ್ ಏನು? ಯಾರು ನಿರ್ವಹಿಸೋದು? ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಸುಮಾರು 130 ವರ್ಷಗಳ ಹಿಂದೆ ಟಾಟಾ ಟ್ರಸ್ಟ್ಸ್ ಅನ್ನು ಆರಂಭ ಮಾಡಲಾಗಿದೆ. 1892ರಲ್ಲಿ ಭಾರತದ ಇಂಡಸ್ಟ್ರೀಯ ಪಿತಾಮಹ ಮತ್ತು ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್ಶೆಡ್ ಜೀ ಟಾಟಾ, ಜೆನ್ ಟಾಟಾ ಎಂಡೋಮೆಂಟ್ ಫಂಡ್ ಅನ್ನು ಆರಂಭಿಸಿದಾಗ ಟಾಟಾ ಟ್ರಸ್ಟ್ಸ್ ಅನ್ನು ಆರಂಭಿಸಲಾಗಿದೆ. ಈ ಫಂಡ್ ಅನ್ನು ಮುಖ್ಯವಾಗಿ ಭಾರತೀಯ ನಾಗರಿಕರಿಗೆ ಉನ್ನತ ಶಿಕ್ಷಣ ನೀಡಲು ಬಳಕೆ ಮಾಡಲಾಗುತ್ತದೆ.
ಟಾಟಾ ಟ್ರಸ್ಟ್ಸ್ ಅಧಿಕೃತ ವೆಬ್ಸೈಟ್ ಪ್ರಕಾರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಉನ್ನತ ಸಂಶೋಧನೆಗೆ ಒತ್ತು ನೀಡುವುದು ಆ ಸಂದರ್ಭದಲ್ಲಿ ಪ್ರಮುಖವಾಗಿತ್ತು. ಬೆಳವಣಿಗೆ ಹೊಂದಿದ ಯುಎಸ್ನಂತಹ ದೇಶಗಳು ಕೂಡಾ ಇದೇ ಮಾರ್ಗವನ್ನು ಹಿಡಿದಿದೆ ಎಂದು ಉಲ್ಲೇಖ ಮಾಡಲಾಗಿದೆ. ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್ಶೆಡ್ ಜೀ ಟಾಟಾ ಈ ಫೀಲ್ಡ್ನ ಮೊದಲ ಪ್ರವರ್ತಕರು ಆಗಿದ್ದಾರೆ.