Viral News: ಬಾಲಕಿಯ ದಿಟ್ಟತನ! ಸರಗಳ್ಳನ ವಿರುದ್ಧ ಸೆಣಸಾಡಿದ ಬಾಲಕಿ ! ಮುಂದೇನಾಯ್ತು? ವೀಡಿಯೋ ವೈರಲ್!

Girl fights robber: ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯ ಫೋಟೋ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ. ಬಾಲಕಿಯೊಬ್ಬಳ ದಿಟ್ಟತನ ನೋಡಿ ನೆಟ್ಟಿಗರು ಬೇಷ್ ಎಂದು ಮೆಚ್ಚುಗೆಯ ಸುರಿಮಳೆ ಗೈಯುತ್ತಿದ್ದಾರೆ. ಅಷ್ಟಕ್ಕೂ ಬಾಲಕಿ ಏನು ಮಾಡಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಮನೆ ಮಾಡಿರಬಹುದು.ಅದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!!

 

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು (Crime News) ವರದಿಯಾಗುತ್ತಲೇ ಇರುತ್ತವೆ. ಅಮೂಲ್ಯ ವಸ್ತುಗಳನ್ನು ಕೊಳ್ಳೆ ಹೊಡೆಯುವ ನಿಟ್ಟಿನಲ್ಲಿ ಕದೀಮರು ನಾನಾ ರೀತಿಯ ತಂತ್ರಗಳನ್ನು ತಮ್ಮ ಬತ್ತಳಿಕೆಯಿಂದ ಪ್ರಯೋಗ ಮಾಡಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗೋದು ಸಾಮಾನ್ಯ. ಅದರಲ್ಲಿಯೂ ರಸ್ತೆಯಲ್ಲಿ ಓಡಾಡುವಾಗ ವಯಸ್ಸಾದವರ, ಮಹಿಳೆಯರ ಗಮನ ಬೇರೆ ಕಡೆ ಹೋಗುವಂತೆ ಮಾಡಿ ಚಿನ್ನದ ಸರ( Gold Chain)ಎಗರಿಸಿದ ಅದೆಷ್ಟೋ ಪ್ರಕರಣಗಳನ್ನೂ ಕೇಳಿರಬಹುದು. ಅಷ್ಟೆ ಏಕೆ!! 500 ರ ನೋಟನ್ನು ರಸ್ತೆಯಲ್ಲಿ ಬೀಳಿಸಿ ನಿಮ್ಮದಿರಬಹುದೇನೋ ಎಂಬಂತೆ ಸಭ್ಯಸ್ತರ ಶೈಲಿಯಲ್ಲಿ ಮರುಳು ಮಾಡಿ ನಿಮ್ಮ ವ್ಯಾಲೆಟ್, ಹಣ (Money)ಎಗರಿಸಿ ಪರಾರಿಯಾಗುವ ಪ್ರವೀಣ ಕಳ್ಳರು ನಮ್ಮಲ್ಲಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಅಜ್ಜಿಯ ಸರವನ್ನು ಎಗರಿಸಲು ಯತ್ನಿಸಿದ ಕಳ್ಳನನ್ನು ಅಜ್ಜಿ (Grand Mother)ಹಾಗೂ ಬಾಲಕಿ ಹಿಗ್ಗ ಮುಗ್ಗ ಬಾರಿಸಿದ (Girl fights robber) ಘಟನೆ ನಡೆದಿದೆ.

ಶಿವಾಜಿನಗರದ ಮಾಡೆಲ್ ಕಾಲೋನಿಯಲ್ಲಿ, ಅಜ್ಜಿಯ ಸರವನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಟೈಮ್ಸ್ ನೌ ವರದಿಯ ಅನುಸಾರ,ಮಾಡೆಲ್ ಕಾಲೋನಿಯಲ್ಲಿ 60 ವರ್ಷದ ಲತಾ ಘಾಗ್ ತನ್ನ ಮೊಮ್ಮಗಳು Daughter In Law)ರುತ್ವಿ ಘಾಗ್ ಅವರೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಬೈಕಿನಲ್ಲಿ(Bike) ಬಂದ ವ್ಯಕ್ತಿಯೊಬ್ಬ ಮಹಿಳೆಯ ಬಳಿ ಹೋಗುವ ಮಾರ್ಗದ ಬಗ್ಗೆ ಮಾಹಿತಿ ಪಡೆಯುವಂತೆ ನಟಿಸಿ, ಇದ್ದಕ್ಕಿಂದ್ದಂತೆ ಅಜ್ಜಿಯ ಕುತ್ತಿಗೆಯಿಂದ ಚಿನ್ನದ ಸರ ಎಳೆಯಲು(Robbery) ಯತ್ನಿಸಿದ್ದಾನೆ. ಈ ವೇಳೆ, ಅಜ್ಜಿ ಕಳ್ಳರಿಗೆ ಸರಿಯಾಗಿ ಬೈದು ಗಲಾಟೆ ನಡೆಸಿದ್ದು ಅಲ್ಲದೇ, ದುಷ್ಕರ್ಮಿಗಳಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ 60 ವರ್ಷದ ಅಜ್ಜಿಯೊಂದಿಗೆ 10 ವರ್ಷದ ಬಾಲಕಿ ಸೇರಿಕೊಂಡು ಹಿಗ್ಗ ಮುಗ್ಗ ಬಾರಿಸಿ ಕಪಾಳ ಮೋಕ್ಷ ಮಾಡಿದ್ದು, ದುಷ್ಕರ್ಮಿ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಓಡಿ ಹೋಗಿದ್ದು, ಸದ್ಯ ಈ ಪ್ರಕರಣದ ವೀಡಿಯೋ ವೈರಲ್(Viral Video )ಆಗಿ ಸಂಚಲನ ಮೂಡಿಸಿದ್ದು, ಅಜ್ಜಿಯ ಜೊತೆ 10 ವರ್ಷದ ಬಾಲಕಿ ಕೂಡ ಕಳ್ಳನಿಗೆ ಹೊಡೆದದ್ದನ್ನು ಕಂಡು ನೆಟ್ಟಿಗರು ಬಾಲಕಿಯ ದಿಟ್ಟತನಕ್ಕೆ ಶಾಹಭಾಶ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.