7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಏರಿಕೆ ಕಾಣೋದು ಫಿಕ್ಸ್!! ಅತೀ ಶೀಘ್ರದಲ್ಲಿ ಘೋಷಣೆ ಸಾಧ್ಯತೆ


7th Pay Commission: ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು(Good News) ಅತಿ ಶೀಘ್ರದಲ್ಲಿಯೆ ಬರಲಿದೆ. ಸುಮಾರು 62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 48 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದಾರೆ.

ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ (DA) ಶೇಕಡಾ 4 ರಷ್ಟು ಅಂದರೆ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮುನ್ನ ಕೇಂದ್ರವು 7ನೇ ವೇತನ ಆಯೋಗದ ಅಡಿಯಲ್ಲಿ ಮಾರ್ಚ್‌ನಲ್ಲಿ ಡಿಎಯನ್ನು ಶೇ 3 ರಷ್ಟು ಹೆಚ್ಚಿಸಿ ಶೇ 34 ರಷ್ಟು ಮಾಡಲಾಗಿತ್ತು. 7ನೇ ವೇತನ ಆಯೋಗದಡಿಯಲ್ಲಿ ( 7th pay commission)ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯೆ(ಡಿಎ)ಯು ಜನವರಿ 1ರಿಂದ 2023 ಅನ್ವಯವಾಗುವ ಹಾಗೆ ಮಾರ್ಚ್ ನಲ್ಲಿ ಹೆಚ್ಚಳವಾಗುವ ಬಗ್ಗೆ ಈ ಹಿಂದೆಯೇ ಹೇಳಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಪಿಂಚಣಿದಾರರ ತುಟ್ಟಿಭತ್ಯೆ (ಡಿಆರ್) ಅನ್ನು ಕೂಡಾ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಡಿಎ ಹೆಚ್ಚಳ, ಫಿಟ್‌ಮೆಂಟ್ ಅಂಶ ಹೆಚ್ಚಳ ಮತ್ತು ಡಿಎ ಬಾಕಿ ಬಿಡುಗಡೆಗೆ ಸಂಬಂಧ ಪಟ್ಟಂತೆ ಯಾವಾಗ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ನೌಕರರು (Central Government workers) ವೇತನ ಹೆಚ್ಚಳಕ್ಕೆ ಕಾಯುತ್ತಿದ್ದಾರೆ. ಈ ನಡುವೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ.

ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತುಟ್ಟಿಭತ್ಯೆ ಹೆಚ್ಚಳದ (7th Pay Commission Latest Update)ಕುರಿತು ಮಾಹಿತಿ ನೀಡಿದ್ದು, ಅದರ ಅನ್ವಯ, ಒಂದು ವೇಳೆ ತುಟ್ಟಿ ಭತ್ಯೆ ಹೆಚ್ಚಳವಾದರೆ ಅದು ಜನವರಿ 1, 2023 ರಿಂದ ಜಾರಿಗೆ ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮುಂಬರುವ 10 ದಿನಗಳ ಒಳಗಾಗಿ ಮಾಹಿತಿ(Information) ಹೊರ ಬೀಳುವ ಸಾಧ್ಯತೆ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಖಾಸಗಿ ಮಾಧ್ಯಮವೊಂದರಲ್ಲಿ ಬಹಿರಂಗಪಡಿಸಿರುವ ಮಾಹಿತಿ ಅನುಸಾರ, ಕೇಂದ್ರ ಸರ್ಕಾರಿ ನೌಕರರಿಗೆ( Central Government Workers) ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗುವ ಸಂಭವ ದಟ್ಟವಾಗಿದೆ. ಇದಲ್ಲದೆ, ನಿವೃತ್ತ ಉದ್ಯೋಗಿಗಳು ಕೂಡ ಶೇ.4ರಷ್ಟು ಡಿಯರ್ನೆಸ್ ರಿಲೀಫ್( DR) ಪಡೆಯಬಹುದು. ಪ್ರಸ್ತುತ, ಡಿಎ ಹೆಚ್ಚಳದ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಒಂದು ವೇಳೆ ತುಟ್ಟಿಭತ್ಯೆ ಹೆಚ್ಚಾದರೆ, ಅದು ಜನವರಿ 1, 2023 ರಿಂದ ಜಾರಿಗೆ ಬರಲಿದೆ. ಡಿಎ ಮತ್ತು ಡಿಆರ್ (DR)ಹೆಚ್ಚಳದ ಹೊರತಾಗಿ, ಕೇಂದ್ರವು ಈ ತಿಂಗಳು ಫಿಟ್ಮೆಂಟ್ ಅಂಶವನ್ನು ಪರಿಷ್ಕರಿಸುವ ನಿರೀಕ್ಷೆಯಿದ್ದು, ಡಿಎ ಮತ್ತು ಡಿಆರ್ ಹೆಚ್ಚಳದಿಂದ ದೇಶದ 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈ ಹಿಂದೆ ಮಾರ್ಚ್ 8 ರಂದು ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ.

ಕೇಂದ್ರ ಸರ್ಕಾರಿ ನೌಕರರು ಡಿಎ ಮತ್ತು ಫಿಟ್ಮೆಂಟ್ ಅಂಶ ಹೆಚ್ಚಳದ ಹೊರತಾಗಿ 18 ತಿಂಗಳ ಡಿಎ ಬಾಕಿ ನೀಡುವಂತೆ ಬೇಡಿಕೆ ಇಟ್ಟು ಒತ್ತಾಯ ಮಾಡುತ್ತಿದ್ದಾರೆ. ಸದ್ಯ, ಸಾಮಾನ್ಯ ಫಿಟ್ಮೆಂಟ್ ಅಂಶವು ಶೇಕಡಾ 2.57 ರಷ್ಟಿದೆ. ಫಿಟ್ಮೆಂಟ್ ಅಂಶವನ್ನು ಶೇ.3.68ಕ್ಕೆ ಏರಿಸುವಂತೆ ಸರ್ಕಾರಿ ನೌಕರರು ಕೇಂದ್ರವನ್ನು ಒತ್ತಾಯ ಮಾಡುತ್ತಿದ್ದು, ಒಂದು ವೇಳೆ,ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನ 18,000 ರೂ.ನಿಂದ 26,000 ರೂ.ಗೆ ಏರಿಕೆಯಾಗಲಿದೆ.

Leave A Reply

Your email address will not be published.