ಬೈಕ್‌ ಪ್ರಿಯರೇ ಇತ್ತ ಗಮನಿಸಿ ! ಈ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ಈ ಬೈಕ್‌ಗಳು!!!

Share the Article

Bike: ಬೈಕ್ (bike) ಕ್ರೇಜ್ ಯಾರಿಗಿಲ್ಲಾ ಹೇಳಿ. ಅದೆಷ್ಟೋ ಜನರಿಗೆ ಬೈಕ್ ರೈಡ್ ಭಾರೀ ಇಷ್ಟ. ರೈಡ್ ಹೋಗ್ಬೇಕಾದ್ರೆ ಬೈಕ್ ಬೇಕು. ಇಲ್ಲಿವೆ ಉತ್ತಮ ಬೈಕ್!!. ನೀವು ಬೈಕ್ ಖರೀದಿಸಲು ಯೋಚಿಸಿದ್ದರೆ ಇಲ್ಲಿದೆ ವಿಭಿನ್ನ ವಿನ್ಯಾಸದ, ಅತ್ಯುತ್ತಮ ವೈಶಿಷ್ಟ್ಯದ ಬೈಕ್ ಗಳು. ಈ ತಿಂಗಳಿನಲ್ಲಿ (ಮಾರ್ಚ್) ಹೊಚ್ಚ ಹೊಸ ಬೈಕ್‌ಗಳು ಧೂಳೆಬ್ಬಿಸಲು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೋಂಡಾ (Honda), ಟಿವಿಎಸ್ (TVs) ಮತ್ತು ಬಜಾಜ್‌ (Bajaj) ಕಂಪನಿಗಳು ತಮ್ಮ ಹೊಸ ಮೋಟಾರ್ ಸೈಕಲ್ (motor cycle) ಮತ್ತು ಸ್ಕೂಟರ್‌ಗಳನ್ನು (scooter) ಬಿಡುಗಡೆ ಮಾಡಲು ಸಜ್ಜಾಗಿವೆ. ಇವುಗಳ ಹೆಚ್ಚಿನ ಮಾಹಿತಿ ತಿಳಿಯೋಣ.

Triumph Street Triple R, RS : Triumph ಮೋಟಾರ್‌ಸೈಕಲ್ಸ್ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಮತ್ತು ಸ್ಟ್ರೀಟ್ ಟ್ರಿಪಲ್ ಆರ್‌ಎಸ್ (Triumph Street Triple RS) ಅನ್ನು ಭಾರತದಲ್ಲಿ ಮಾರ್ಚ್ 15, 2023 ರಂದು ಬಿಡುಗಡೆ ಮಾಡಲಿದೆ. Street Triple ‘765’ ಶ್ರೇಣಿ ಹಾಗೂ 765cc, ಇನ್‌ಲೈನ್-3 ಸಿಲಿಂಡರ್ ಎಂಜಿನ್‌ ಪಡೆದಿರಲಿದೆ. Triumph Street Triple R ಬೂದು ಮತ್ತು ಹಳದಿ ಬಣ್ಣ ಹೊಂದಿದ್ದು, RS ಕಿತ್ತಳೆ ಮತ್ತು ಬೂದು , ಬೆಳ್ಳಿ ಮಿಶ್ರಣ ಹೊಂದಿದೆ. ಸಖತ್ ಲುಕ್, ಸ್ಟೈಲೀಶ್ ಬೈಕ್ ಆಗಿದ್ದು, ನೀವಂತೂ ಈ ಬೈಕ್ ಗೆ ಫಿದಾ ಆಗೋದು ಖಂಡಿತ!!

ಬಜಾಜ್ ಪಲ್ಸರ್ 220ಎಫ್ (Bajaj pulsar 220f) : ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋ ಶೀಘ್ರದಲ್ಲೇ ಪಲ್ಸರ್ 220ಎಫ್ ಅನ್ನು ಮರುಪರಿಚಯಿಸಲಿದೆ. ಈಗಾಗಲೇ ಡೀಲರ್ ಶಿಪ್ ಗಳಲ್ಲಿ ಅನೌಪಚಾರಿಕವಾಗಿ ಬುಕ್ಕಿಂಗ್‌ಗಳು ಶುರುವಾಗಿದ್ದು, ಈ ಬೈಕ್ 220cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, FI ಎಂಜಿನ್ ಅನ್ನು ಹೊಂದಿರುತ್ತದೆ. ಹಾಗೇ 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಇರಲಿದೆ.

ಹೋಂಡಾದ ಹೊಸ 100cc ಬೈಕ್ (Honda 100cc bike): ಇತ್ತೀಚೆಗೆ ಹೋಂಡಾ ದೇಶೀಯ ಮಾರುಕಟ್ಟೆಗೆ ಹಲವಾರು ವಾಹನಗಳನ್ನು ಪರಿಚಯಿಸುತ್ತಿದ್ದು, ಇದೀಗ ಭಾರತದಲ್ಲಿ (India) ಹೊಸ 100cc ಬೈಕ್ ಮಾರ್ಚ್ 15, 2023 ರಂದು ಬಿಡುಗಡೆ ಆಗಲಿದೆ ಎಂದು ಕಂಪನಿ ತಿಳಿಸಿದೆ. 100cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ ಹೊಂದಿದ್ದು, ಇದು ಹೊಸ RDE ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಮತ್ತು E20 ಇಂಧನದಲ್ಲಿ ಕೂಡ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಟಿವಿಎಸ್ ಐ ಕ್ಯೂಬ್ ಎಸ್ ಟಿ (TVS iQube ST): ಈ ತಿಂಗಳಲ್ಲಿ ಟಿವಿಎಸ್ ಸ್ಕೂಟರ್ ಬಿಡುಗಡೆಯಾಗಲಿದ್ದು, TVS ಮೋಟಾರ್ ಕಂಪನಿಯು ಕಳೆದ ವರ್ಷ ಮೇ ತಿಂಗಳಲ್ಲಿ ನವೀಕರಿಸಿದ iQube ಎಲೆಕ್ಟ್ರಿಕ್ ಸ್ಕೂಟರ್ ಸರಣಿಯನ್ನು ಪರಿಚಯಿಸಿದ್ದು, ಟಾಪ್-ಸ್ಪೆಕ್ iQube ST ಬೆಲೆಯ ಮಾಹಿತಿ ತಿಳಿಸಿರಲಿಲ್ಲ. ಇದೀಗ TVS iQube ST 4.56 kWh ಬ್ಯಾಟರಿ ಪ್ಯಾಕ್ ನೊಂದಿಗೆ ಬಿಡುಗಡೆ ಆಗಲಿದೆ. ಈ ಸ್ಕೂಟರ್ ಒಮ್ಮೆ ಚಾರ್ಜ್‌ ಮಾಡಿದ್ರೆ 145 ಕಿಮೀ ಚಲಿಸುತ್ತದೆ.

Leave A Reply