Sumalatha declares support to Modi: ನನ್ನ ಬೆಂಬಲ ಮೋದಿ ಸರ್ಕಾರಕ್ಕೆ; ಸುಮಲತಾ ಅಂಬರೀಷ್ ಅಧಿಕೃತ ಘೋಷಣೆ
Sumalatha declares support to Modi: ಇಂದು ಸುಮಲತಾ ಅಂಬರೀಷ್ (Sumalata Ambareesh) ನರೇಂದ್ರ ಮೋದಿ ಬಿಜೆಪಿ ಸರ್ಕಾರಕ್ಕೆ ಬೆಂಬಲವಿದೆ ಎಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯ ಘೋಷಣೆ ಮಾಡಿದ್ದಾರೆ.
ದೇಶ ಅಭಿವೃದ್ಧಿ ಆಗುತ್ತಿರೋದು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಯಕತ್ವದಲ್ಲಿ, ನಾಲ್ಕು ವರ್ಷದಲ್ಲಿ ನಾನು ನೋಡಿರೋದು ಇದನ್ನೆ ಎಂದು ಸುಮಲತಾ ಅಂಬರೀಷ್ ತುರ್ತು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ (BJP Government) ಕೇಂದ್ರ ಯೋಜನೆ ನನಗೆ ಅವಕಾಶ ನೀಡಿದೆ ಎನ್ನುವ ಮೂಲಕ ಹಾಡಿ ಹೊಗಳಿದ್ದಾರೆ.
ಅಷ್ಟೇ ಅಲ್ಲದೇ ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ (Politics) ಬಂದಿದ್ದೇನೆ. ಸಮಿಶ್ರ ಸರ್ಕಾರ ವೇಲೆ ಮುಖ್ಯಮಂತ್ರಿ ಪುತ್ರನನ್ನು ಎದುರಿಸಿ ನಿಂತಿದ್ದು ನನ್ನ ಸ್ವಾರ್ಥ ಅಲ್ಲ. ಎಲ್ಲದನ್ನು ಪಣಕ್ಕಿಟ್ಟು ನಾನು ಮುಂದೆ ಬಂದಿದ್ದೇನೆ. ಅಂದು ನನ್ನ ಬೆಂಬಲಕ್ಕೆ ನಿಂತಿದ್ದು ಅಂಬಿ ಅಪ್ತರು. ಜನ ನನ್ನನ್ನು ಪ್ರೀತಿಸುತ್ತಾರೆ ಅಶೀರ್ವಾದಿಸುತ್ತಾರೆ.
ನಾಲ್ಕು ವರ್ಷದಲ್ಲಿ ನಾನು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದೇನೆ. ಹೀಗಾಗಿ ನಾನು ಬೇರೆ ದಾರಿ ಹುಡುಕಲು ಹೋಗುವುದಿಲ್ಲ. ಮಂಡ್ಯದಲ್ಲಿ(Mandya) ನನ್ನನ್ನು ಯಾವ ರೀತಿಯಲ್ಲಿ ನೋಡಿದ್ದಾರೆ ಎಂದು ನನಗೆ ಗೊತ್ತಿದೆ. ಪಕ್ಷೇತರ ಸಂಸದೆಯಾಗಿ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕೋವಿಡ್ (Covid) ವೇಳೆ ಶ್ರಮಪಟ್ಟು ಕೆಲಸ ಮಾಡಿದ್ದೇನೆ. ನನ್ನ ಹಣದಲ್ಲಿ ನಾನು ಆಫೀಸ್ ನಡೆಸುತ್ತಿದ್ದೆ . ಎಂಪಿ ಅನ್ನೋದು ಇರಲಿ ಒಂದು ಹೆಣ್ಣು ಅನ್ನೋದನ್ನು ನೋಡಲಿಲ್ಲ. ʼನಾನು ಮನಸ್ಸು ಮಾಡದಿದ್ರೆ ಮೈಶುಗರ್ ಓಪನ್ ಆಗುತ್ತಿರಲಿಲ್ಲ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದ (Mandya) ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಭಿವೃದ್ದಿ ಆಗುತ್ತಿದೆ. ಮಂಡ್ಯ ಜಿಲ್ಲೆಗೆ ಮಹರಾಜರು ಕೊಡುಗೆ ಕೊಟ್ಟಿದ್ದಾರೆ. ಕನ್ನಂಬಾಡಿ ಇಲ್ಲ ಅಂದ್ರೆ ಮಂಡ್ಯವೇ ಇಲ್ಲ. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಿಕೊಳ್ಳಬೇಕು. ಬರೀ ರಾಜಕಾರಣ ಅಭಿವೃದ್ಧಿ ಬೇಡ್ವಾ?ರಾಜಕಾರಣದ ಭಾಷಣವನ್ನು ಕೇಳಿಕೊಂಡು ಜನರು ಇರಬೇಕಾದ ಪರಿಸ್ಥಿತಿಯಿದೆ. ಮಂಡ್ಯದಲ್ಲಿ ಏನ್ ಉದ್ದಾರ ಮಾಡಿದ್ದೀರಾ? ಎಂದು ಮಾಜಿ ಸಿಎಂ ಹೆಚ್‌ಡಿಕೆ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಮಾಡದೇ ಜೆಡಿಎಸ್ ವಿರುದ್ಧ ಸುಮಲತಾ ಕಿಡಿಕಾರಿದ್ದಾರೆ. ಅಂಬಿ ಕುಟುಂಬ ರಾಜಕಾರಣ ಮಾಡುವುದಿಲ್ಲ. ಅದರಲ್ಲೂ ಅಭಿಷೇಕ್ ಅಂಬರೀಷ್ (Abhishek Ambareesh) ರಾಜಕಾರಣಕ್ಕೆ ಬರುವುದಿಲ್ಲ. ಕುಟುಂಬ ರಾಜಕಾರಣ ಮಾಡೋದಿಲ್ಲ, ಈ ವರ್ಷ ಅಭಿಷೇಕ್ ಮದುವೆ (Marriage) ಆಗುತ್ತಾನೆ. ಸಿನಿಮಾ ಮಾಡುತ್ತಾನೆ ಎಂದು ತಮ್ಮ ಮಗ ಅಭಿಷೇಕ್ ಅಂಬರೀಷ್ ಬಗ್ಗೆಸುಮಲತಾ (Sumalatha Ambareesh) ತಿಳಿಸಿದ್ದಾರೆ