Kerala Temperature Rise: ಕೇರಳದಲ್ಲಿ ದಾಖಲೆಯ 54 ಡಿಗ್ರಿ ಸೆಂಟಿಗ್ರೇಡ್ ಗೆ ಏರಿದ ಉಷ್ಣಾಂಶ, ಮಂಗಳೂರು ಕರಾವಳಿಗೂ ಹಬ್ಬಿದ ಉಷ್ಣ ಹವೆ !

Kerala Temperature Rise: ದೇವರನಾಡು ಖ್ಯಾತಿಯ ಕೇರಳದಲ್ಲಿ ವಾತಾವರಣವು ಇಂದು ಬೆಂಕಿಯುಗುಳಿದೆ. ಅಲ್ಲಿನ ತಾಪಮಾನವು ಹೊಸ ದಾಖಲೆ ಬರೆದಿದ್ದು, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ ಗರಿಷ್ಠ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

ಈ ಬಗ್ಗೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸೂಚನೆ ಹೊರಡಿಸಿದೆ. ಇಲ್ಲಿ ಇಂದು ಗುರುವಾರ ದಿನನಿತ್ಯದ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಇಲ್ಲಿ ವಿಪರೀತ ಉಷ್ಣ ದಾಖಲಾಗಿದೆ. ಇಲ್ಲಿ ಉಷ್ಣಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ ಎಂಬ ಎಚ್ಚರಿಕೆ ನೀಡಲಾಗಿದೆ. ಕೇರಳದ ಐದು ಜಿಲ್ಲೆಗಳಾದ ಕೋಝಿಕ್ಕೋಡ್, ಅಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ ಮತ್ತು ತಿರುವನಂತಪುರಂನಲ್ಲಿ ಗರಿಷ್ಠ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್ (Kerala Temperature reached 50 C today) ದಾಖಲಾಗಿದ್ದು, ಅಲ್ಲಿ ಇಂದು ಶಾಖದ ಅಲೆಯ ಎಚ್ಚರಿಕೆ ನೀಡಲಾಗಿದೆ.

ಕೇರಳದ ಸ್ವಯಂಚಾಲಿತ ಹವಾಮಾನ ಕೇಂದ್ರಗಳ (AWS) ಮಾಹಿತಿಯ ಪ್ರಕಾರ, ಕೋಝಿಕ್ಕೋಡ್ ಮತ್ತು ತಿರುವನಂತಪುರಂನಲ್ಲಿ 54 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಈ ಪ್ರಮಾಣದ ಉಷ್ಣತೆ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನು ಉಂಟುಮಾಡಲಿದ್ದು ಆರೋಗ್ಯ ಇಲಾಖೆ ಹೀಟ್ ಸ್ಟ್ರೋಕ್ ಸಾಧ್ಯತೆಯ ಸುತ್ತೋಲೆ ಹೊರಡಿಸಿದೆ. ಜನರು ಹೆಚ್ಚಿನ ಜಾಗರೂಕರಾಗಿರಿ ಎಂದು ಕೇಳಿಕೊಂಡ ಕೇರಳದ ಆರೋಗ್ಯ ಇಲಾಖೆಯು ನಿರ್ಜಲೀಕರಣ, ಅತಿಸಾರ, ಸನ್‌ಸ್ಟ್ರೋಕ್ ಮತ್ತು ಇತರ ರೋಗಗಳು ಹರಡುವುದನ್ನು ತಡೆಯಲು ಶಾಖ ಕಂಟ್ರೋಲ್ ಮಾಡುವ ಸಲಹೆಯನ್ನು ನೀಡಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಈಗಾಗಲೇ ವಿವರವಾದ ಸಲಹೆಯನ್ನು ನೀಡಿದೆ. “ಇದು ಬೇಸಿಗೆ, ಮತ್ತು ಯಾರೂ ನೀರು ಕುಡಿಯಲು ಬಾಯಾರಿಕೆ ಅನುಭವಿಸಲು ಕಾಯಬಾರದು. ನಿಯಮಿತ ಮಧ್ಯಂತರದಲ್ಲಿ ನೀರು ಕುಡಿಯಿರಿ ಮತ್ತು 11 AM ಮತ್ತು 3 PM ರವರೆಗೆ ನೇರ ಸೂರ್ಯನ ಬೆಳಕಿಗೆ ಬರುವುದನ್ನು ತಪ್ಪಿಸಿ” ಎಂದು ಸಚಿವರು ಹೇಳಿದ್ದಾರೆ. KSDMA ಈ ಗಂಟೆಗಳ ನಡುವೆ ಎಲ್ಲಾ ಹೊರಗಿನ ಕೆಲಸವನ್ನು ನಿಷೇಧಿಸಿದೆ ಎಂದು ಅವರು ಹೇಳಿದರು ಮತ್ತು ಕೊಮೊರ್ಬಿಡಿಟಿ ಇರುವವರು, ಗರ್ಭಿಣಿಯರು ಮತ್ತು ಮಕ್ಕಳು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಮತ್ತು ನೇರ ಸೂರ್ಯನ ಬೆಳಕಿಗೆ ಬರದಂತೆ ನೋಡಿಕೊಳ್ಳಬೇಕು.

ಉಷ್ಣಾಂಶ ಏರಿಕೆಯು ಆರೋಗ್ಯ ಸಮಸ್ಯೆಗಳಿರುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮಂಜೇರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಟಿ ಎಸ್ ಅನೀಶ್ ಹೇಳಿದ್ದಾರೆ. ಈ ಮಧ್ಯೆ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ ಸಂಬಂಧಿತ ರೋಗಗಳ ನಿಭಾಯಿಸಲು ಸಜ್ಜಾಗುವಂತೆ ಆರೋಗ್ಯ ಇಲಾಖೆಗೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಈಗಾಗಲೇ ಕರಾವಳಿಯಲ್ಲಿ ಉಷ್ಣಾಂಶ ಏರಿಕೆ ಆಗಿದ್ದು ಜನರು ಸುಡು ಬಿಸಿಲಿನಲ್ಲಿ ಬಳಲುತ್ತಿದ್ದಾರೆ. ಮಂಗಳೂರಿನಲ್ಲಿ ಬಿಸಿಲು ಉರಿಯುತ್ತಿದೆ, ಒಂದೇ ಸಮನೆ ಬೆವರು ಧಾರಾಕಾರವಾಗಿದೆ. ಕರಾವಳಿ ಕೇರಳದ ಗಡಿ ಭಾಗವಾದುದರಿಂದ ಇಲ್ಲಿ ಕೂಡಾ ಬಿಸಿಲಿಗೆ ಸಂಬಂಧಪಟ್ಟ ಬೇಗೆಗಳು ಬರುವ ಸನ್ನಿವೇಶ ಇದೆ.

Leave A Reply

Your email address will not be published.