H3N2 Virus : ಕರ್ನಾಟಕದಲ್ಲಿ ಮತ್ತೊಂದು ವೈರಸ್‌ ಹೆಚ್‌3ಎನ್‌2 ಗೆ ಮೊದಲ ಸಾವು!

H3N2 Virus: ಕೋರೋನಾ (Covid) ಮಹಾಮಾರಿಯು ಕೊಂಚ ತಗ್ಗಿದ್ದೆ ಎಂದು ನಿಟ್ಟುಸಿರು ಬಿಡುತ್ತಿದ್ದ ರಾಜ್ಯದ ಜನತೆಗೆ ಈಗ ಹೊಸ ವೈರಸ್ ಪತ್ತೆ ಆತಂಕ ಮೂಡಿಸಿದೆ.

ಇತ್ತೀಚೆಗೆ ಎಲ್ಲೆಡೆ ದೀರ್ಘಕಾಲಿಕ ಕೆಮ್ಮು ಮತ್ತು ಜ್ವರದ(Health Problems) ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ, ಈ ಲಕ್ಷಣಗಳು ಸೋಂಕು ಉಲ್ಬಣ ವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ರವರು(K. Sudhakar) ಇತ್ತೀಚೆಗೆ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದರು.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ (H3N2 Virus) ಪ್ರಭಾವ ಹೆಚ್ಚುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ H​​3N​​2 ಸೋಂಕು (H3N2 Virus)ದೃಢಪಟ್ಟಿದೆ ಎಂದು ತಿಳಿದುಬಂದಿದೆ.ಈ ನಡುವೆ ಈ ವೈರಸ್ ಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, (Death) ಇದರಿಂದ ಜನರಲ್ಲಿ ಅತಂಕ, ದುಗುಡ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಹೆಚ್ 3ಎನ್ 2 ವೈರಲ್​ ಜ್ವರ ಸೋಂಕಿಗೆ ತುತ್ತಾಗಿ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಹಾಸನದಲ್ಲಿ ವರದಿಯಾಗಿದೆ. H3N​​2 ವೈರಸ್​ನಿಂದ( Virus) ಬಳಲುತ್ತಿದ್ದ ಹಾಸನ( Hassan)ಮೂಲದ ವೃದ್ಧ ಬಲಿಯಾಗಿದ್ದು, ಹೀಗಾಗಿ, ಜ್ವರ,( Fever)ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧರೊಬ್ಬರು ಅಸುನೀಗಿದ್ದಾರೆ. ಹೆಚ್​​3ಎನ್​​2 ವೈರಲ್ ಗೆ ತುತ್ತಾಗಿ ಸಾವಿನ ಕದ ತಟ್ಟುವಂತೆ ಆಗಿದ್ದು, ಇದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು( Precaution Measures) ಕೈಗೊಳ್ಳುವುದು ಅವಶ್ಯ ಎಂಬ ಎಚ್ಚರಿಕೆಯ ಕರೆ ಗಂಟೆಯಂತೆ ಗೋಚರಿಸುತ್ತಿದೆ. ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಮಾಧ್ಯಮ ವೊಂದರಲ್ಲಿ ವೈರಸ್ ಪತ್ತೆಯ ಬಗ್ಗೆ ಸ್ಪಷ್ಟನೆ ನೀಡಿ ಸಾವಿಗೆ ವೈರಸ್ ಕಾರಣ ಎಂಬುದನ್ನು ಖಚಿತಪಡಿಸಿದ್ದಾರೆ. ಹೀಗಾಗಿ, ರಾಜ್ಯದ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರದೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನುಸರಿಸಿ ಮಾಸ್ಕ್ ( Mask) ಧರಿಸಿ ಹೊರಗಡೆ ಓಡಾಡುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಉತ್ತಮ.

Leave A Reply

Your email address will not be published.