China: ಮಹಿಳಾ ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು! ಲೇಡಿ ಮಾಡೆಲ್ ಗಳಿಗಿಲ್ಲ ಇನ್ನು ಈ ಅವಕಾಶ!
China: ಮಹಿಳೆಯರು ಧರಿಸುವ ಒಳ ಉಡುಪುಗಳ ಕುರಿತು ಅನೇಕ ಜಾಹೀರಾತುಗಳನ್ನು ನಾವು ಮಾಧ್ಯಮಗಳಲ್ಲಿ ಕಂಡಿರುತ್ತೇವೆ. ಇಂತಹ ಬಗೆ ಬಗೆಯ ಉಡುಪುಗಳನ್ನು ಧರಿಸಿದ ಚಂದ ಚಂದದ ಹುಡುಗಿಯರು, ವಯ್ಯಾರದಿಂದ ಪರದೆ ಮೇಲೆ ಕಾಣುತ್ತಾ, ಎಲ್ಲರನ್ನೂ ಸೆಳೆಯುತ್ತಾ, ಆ ಒಳ ಉಡುಪುಗಳ ಪ್ರಚಾರವನ್ನೂ ಮಾಡುತ್ತಾರೆ. ಅಂತೆಯೇ ಇದರಲ್ಲಿ ಸುಂದರ ಮೈಮಾಟ ಹೊಂದಿದ, ಬೆಳ್ಳಬೆಳ್ಳಗಿನ ಮಹಿಳಾ ಮಾಡೆಲ್( Women Modeling) ಗಳೇ ಹೆಚ್ಚು ಭಾಗವಹಿಸುತ್ತಿದ್ದರು. ಆದರೆ ಇನ್ನು ಮುಂದೆ ಇಂತಹ ಅಡ್ವರ್ಟೈಸ್ ಮೆಂಟ್ನಲ್ಲಿ ಇವರ ಸ್ಥಾನವನ್ನು ಪುರುಷರು ತುಂಬಲಿದ್ದಾರೆ!
ಹೌದು, ಚೀನಾ(China) ಸರ್ಕಾರವು (China Government) ಇಂತಹ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇನ್ನು ಮುಂದೆ ಮಹಿಳಾ ಮಾಡೆಲ್‌ಗಳು (Women Modeling) ಆನ್‌ಲೈನ್‌ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನ ನಿಷೇಧಿಸಿದೆ. ಹೀಗಾಗಿ ದೇಶದ ಲೈವ್‌ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಕಂಪೆನಿಗಳೆಲ್ಲವೂ ಹುಡುಗಿಯರ ಬ್ರಾ ದಿಂದ ನೈಟ್‌ಗೌನ್ ವರೆಗಿನ ಎಲ್ಲ ರೀತಿಯ ಒಳ ಉಡುಪುಗಳ ಜಾಹೀರಾತಿಗೆ ಪುರುಷರನ್ನ ನೇಮಿಸಿಕೊಳ್ಳುತ್ತಿವೆ. ಸದ್ಯ ಮಹಿಳೆಯರ ಒಳ ಉಡುಪುಗಳನ್ನ ಧರಿಸಿರುವ ಚೀನಿ ಪುರುಷರ ಚಿತ್ರಗಳು, ಫ್ಯಾಷನ್ ಕಂಪನಿಗಳ ಲೈವ್‌ಸ್ಟ್ರೀಮ್ ಪ್ರಸಾರದ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕೆಲ ಪುರುಷ ಮಾಡೆಲ್‌ಗಳು ಕ್ಯಾಟ್ ಇಯರ್ ಹೆಡ್‌ಬ್ಯಾಂಡ್‌ನೊಂದಿಗೂ ಕಾಣಿಸಿಕೊಂಡಿದ್ದು ವಿಚಿತ್ರವಾಗಿ ತೋರುತ್ತಿದೆ.
ಇನ್ನು ಈ ರೀತಿಯ ವಿಲಕ್ಷಣ ನಿರ್ಧಾರ ತೆಗೆದುಕೊಂಡು ಅದನ್ನು ಕಾರ್ಯರೂಪಕ್ಕೆ ತಂದಿರುವ ಚೀನಾ ಸರ್ಕಾರವೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೆಲವರು ಇದಕ್ಕೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಫ್ಯಾಶನ್ ಕಂಪನಿಗಳ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬೇರೆ ಬೇರೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಲೈವ್‌ಸ್ಟ್ರೀಮ್ ಇ-ಕಾಮರ್ಸ್ (Livestreaming E-Commerce) ಬಳಕೆದಾರರ ಸಂಖ್ಯೆ 46 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.