Madal Virupakshappa vs JDS: ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕೆ? ‘ಮಾಡಾಳ್ ತಳಿ’ ಅಡಿಕೆ ಗಿಡಗಳನ್ನು ಬೆಳೆಸಿರಿ, ಕೋಟಿ ಗಳಿಸಿರಿ! ವಿರೂಪಾಕ್ಷಪ್ಪನ ವಿರುದ್ಧ JDS ವ್ಯಂಗ್ಯ!

Madal Virupakshappa vs JDS : ‘ನೀವು ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕೆಂಬ ಕನಸಿನಲ್ಲಿದ್ದೀರಾ? ಹಾಗಾದ್ರೆ ‘ಮಾಡಾಳ್’ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ’ ಎಂಬ ವ್ಯಂಗ್ಯವಾದ ಶೀರ್ಷಿಕೆಯೊಂದಿಗೆ ಜೆಡಿಎಸ್ ಟ್ವೀಟ್ ಮಾಡಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ(Madal virupakshappa) ನವರ ಕಾಲೆಳೆದು, ಬಿಜೆಪಿ(BJP)ಯನ್ನು ಕುಟುಕುವ ಪ್ರಯತ್ನ ಮಾಡಿದೆ.

ಹೌದು, ಕೆಲವು ದಿನಗಳಿಂದ ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಾಡಾಳ್ ವಿರೂಪಾಕ್ಷಪ್ಪನವರ (Madal Virupakshappa vs JDS) ಕಂತೆ ಕಂತೆ ಹಣದ ವಿಚಾರ ಹಾಗೂ ಕೋಟ್ಯಾಂತರ ರೂಪಾಯಿ ಲಂಚ ಪಡೆದ ಪ್ರಕರಣವೀಗ ಸದ್ಯದ ಮಟ್ಟಿಗೆ ಶಮನವಾಗಿದೆ. ಹೈಕೋರ್ಟ್(High court) ನೀಡಿದ ನಿರೀಕ್ಷಣಾ ಜಾಮೀನಿನೊಂದಿಗೆ ಅವರು ಹೊರಗಿದ್ದಾರೆ. ಅಲ್ಲದೆ ಈ ಕುರಿತು ವಿರೂಪಾಕ್ಷಪ್ಪನವರು ‘ತಮ್ಮ ಪುತ್ರನ ಮನೆಯಲ್ಲಿ ದೊರೆತಿರುವ ಎಂಟು ಕೋಟಿ ರೂಪಾಯಿ ತಮ್ಮದೇ, ಆ ಹಣ ಅಡಿಕೆ ಬೆಳೆಯಿಂದ ಬಂದಿದ್ದು, ನಾವೇ ಸ್ವತಃ ಅಡಿಕೆ ಕೃಷಿ ಮಾಡುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.

ಮಾಡಾಳ್ ಮನೆಯಮೇಲೆ ಲೋಕಾಯುಕ್ತ ಧಾಳಿಮಾಡಿದಾಗ ಕೋಟಿಗಟ್ಟಲೆ ಹಣ ಜಪ್ತಿಯಾಗಿತ್ತು. ಇತ್ತ ಕೇಸು ದಾಖಲಾಗಿತ್ತು. ಹಣ ಪ್ರತ್ಯಕ್ಷವಾಗುತ್ತಿದ್ದಂತೆ ಮಾಡಾಳ್ ಯಾರಿಗೂ ಕಾಣದಂತೆ ಕಣ್ಮರೆಯಾಗಿದ್ದರು. ನಂತರ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡುತ್ತಿದ್ದಂತೆಯೇ ಅವರು ತಮ್ಮ ತವರು ಕ್ಷೇತ್ರದಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಬೃಹತ್  ಮೆರವಣಿಗೆ ನಡೆಸಿದ್ದರು. ಅದಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ‘ಲೋಕಾಯುಕ್ತರಿಗೆ ಸಿಕ್ಕ ಹಣ ತಮ್ಮ ಅಡಿಕೆ ತೋಟದಿಂದ ಬಂದಿದ್ದು’ ಎಂದು ಸಮರ್ಥಿಸಿಕೊಂಡಿದ್ದರು.

ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್(JDS), ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕನನ್ನು ಬಿಜೆಪಿ ಕಾರ್ಯಕರ್ತರು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಾ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ಭ್ರಷ್ಟರಿಗೆ ಜೈಕಾರ ಹಾಕುವುದೆ ಬಿಜೆಪಿ ಹೇಳುವ ದೇಶ ಪ್ರೇಮ. ನಿಮ್ಮ ನಾಚಿಕೆಯಿಲ್ಲದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಬಿಜೆಪಿಗೆ ಛೀಮಾರಿ ಹಾಕಿದೆ.

ನಾಪತ್ತೆಯಾಗಿದ್ದ ಶಾಸಕ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಅರಗ ಜ್ಞಾನೇಂದ್ರ(Araga Jnanendra) ಅವರೇ, ವಿರೂಪಾಕ್ಷಪ್ಪ, ನಾಪತ್ತೆಯಾಗಿದ್ದ ವೇಳೆ ಅವರು ಎಲ್ಲಿದ್ದರು ಎಂದು ನಿಮಗೆ ಗೊತ್ತಿರಲಿಲ್ಲವೆ? ಜನರಿಗೆ ಎಷ್ಟು ಮಂಕುಬೂದಿ ಎರಚಬಲ್ಲಿರಿ?ಈ ಬಾರಿ ನಿಮ್ಮೆಲ್ಲರನ್ನೂ ಮನೆಯಲ್ಲಿ ಕೂರುವಂತೆ ಜನತೆ ಮಾಡಲಿದ್ದಾರೆ ನೆನಪಿರಲಿ ಎಂದು ಜೆಡಿಎಸ್, ಬಿಜೆಪಿಗೆ ಎಚ್ಚರಿಕೆ ನೀಡಿದೆ. ಜೊತೆಗೆ ನರೇಂದ್ರ ಮೋದಿ(Narednra Modi) ಮತ್ತು ಅಮಿತ್ ಶಾ(Amith Sha) ಅವರೆ ನೀವು ಪದೇ ಪದೇ ರಾಜ್ಯಕ್ಕೆ ಬರುತ್ತಿರುವುದು ಮಾಡಾಳು ವಿರೂಪಾಕ್ಷ ಅವರ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ಎಂದು ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ಬಾರಿ ಬಂದಾಗ ಸ್ಪಷ್ಟೀಕರಣ ನೀಡಿ ಎಂದು ಮಾತಿನಲ್ಲೇ ಕಿಚಾಯಿಸಿದೆ.

ಅಲ್ಲದೆ ವಿರೂಪಾಕ್ಷಪ್ಪ ತಮ್ಮ ಮನೆಯಲ್ಲಿ ಪತ್ತೆಯಾದ ಹಣದ ಕುರಿತು ಅದು ಅಡಿಕೆ ಬೆಳೆಯಿಂದ ಬಂದಿದ್ದು ಎಂದು ಹೇಳಿದ್ದು, ಅದರ ಕುರಿತು ವಿಚಿತ್ರವಾಗಿ ಫೋಟೋ ಎಡಿಟ್ ಮಾಡಿ, ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿರುವ JDS ‘ನೀವು ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕೆಂಬ ಕನಸಿನಲ್ಲಿದ್ದೀರಾ? ಹಾಗಾದ್ರೆ ‘ಮಾಡಾಳ್’ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ’ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಕಾಲೆಳೆದಿದೆ.

 

Leave A Reply

Your email address will not be published.