Grah Gochar 2023 Horoscope: ಶುರುವಾಯ್ತು ಸರಣಿ ಗ್ರಹಗಳ ಸ್ಥಾನಪಲ್ಲಟ! ಇನ್ನು ಈ 4 ರಾಶಿಗಳ ಸುತ್ತ ಸುತ್ತಲಿದ್ದಾಳೆ ಅದೃಷ್ಟ ಲಕ್ಷ್ಮೀ! ಹಾಗಿದ್ರೆ ನೀವೂ ಈ ರಾಶಿಯವರಾ?
Grah Gochar 2023 Horoscope :ಇದೀಗ ಮಾರ್ಚ್ ತಿಂಗಳ ಮೊದಲ ವಾರ ಕಳೆದಿದೆ. ಆದ್ರೆ ನಮ್ಮ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮುಂದಿನ ಮೂರು ವಾರಗಳು ಈ ಕೆಲವು ರಾಶಿಯವರಿಗೆ ಅದೃಷ್ಟವನ್ನು ಖುಲಾಯಿಸುತ್ತದೆ. ಯಾಕಂದ್ರೆ ಈ ಸಮಯದಲ್ಲಿ ಹಲವಾರು ಗ್ರಹಗಳು ಚಿಹ್ನೆಗಳು ಬದಲಾಯಿಸುತ್ತವೆ. ಇಂತಹ ಸಂದರ್ಭದಲ್ಲಿ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಲಕ್ಷ್ಮೀ ಒಲಿಯವಿದ್ದಾಳೆ. ಅಲ್ಲದೆ ಈ ಬದಲಾವಣೆಯು ಜೀವನದಲ್ಲಿ (Life) ಸಂತೋಷ, ಐಶ್ವರ್ಯ, ಧನ ಲಾಭ ಉಂಟು ಮಾಡಲಿದೆ. ಹಾಗಿದ್ರೆ ಈ ಬದಲಾವಣೆಯು ಯಾವ ರಾಶಿಯವರಿಗೆ (Grah Gochar 2023 Horoscope) ವಿಶೇಷವಾಗಿರುತ್ತದೆ ಗೊತ್ತಾ? ನೀವೂ ಆ ಅದೃಷ್ಟವಂತರಾಗಿದ್ದೀರಾ? ಖಚಿತಪಡಿಸಿಕೊಳ್ಳಿ.
ಹೌದು, ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮಾರ್ಚ್ 12 ರಂದು ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮರುದಿನ, ಗ್ರಹದ ಅಧಿಪತಿಯಾದ ಮಂಗಳವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಆಗ ಸೂರ್ಯ ಮತ್ತು ಬುಧ ರಾಶಿಗಳು ಬದಲಾಗುತ್ತವೆ. ನಂತರ ಗುರುವು ಮಾರ್ಚ್ 28 ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗೆ ಹಲವು ಬದಲಾವಣೆಗೆ ಈ ತಿಂಗಳು ಸಾಕ್ಷಿಯಾಗಲಿದೆ.
ಮಿಥುನ – ಬಹು ಗ್ರಹಗಳ ಸಂಚಾರದ ಪರಿಣಾಮವಾಗಿ, ಮಿಥುನ ರಾಶಿಯ ಸ್ಥಳೀಯರು ಧನಲಾಭವನ್ನು ಪಡೆಯುತ್ತಾರೆ. ಯಾವುದಾದರೂ ಕಾರ್ಯವನ್ನು ಕೈಗೊಂಡರೆ, ಅದರಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅಲ್ಲದೆ ಜ್ಯೋತಿಷ್ಯದ ಪ್ರಕಾರ, ಮಿಥುನ ರಾಶಿಯವರಿಗೆ ಉದ್ಯೋಗ ಮತ್ತು ವ್ಯಾಪಾರವು ಸುಧಾರಿಸುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.
ವೃಶ್ಚಿಕ- ಸೂರ್ಯ, ಶುಕ್ರ ಮುಂತಾದ ಗ್ರಹಗಳ ರಾಶಿಯಲ್ಲಿ ಬದಲಾವಣೆಗಳ ಪರಿಣಾಮವಾಗಿ, ವೃಶ್ಚಿಕ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅವರ ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಈ ಬದಲಾವಣೆಯ ಸಮಯ ನಿಮಗೆ ತುಂಬಾ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
ಮೇಷ ರಾಶಿ – ಮೇಷ ರಾಶಿಯ ಸ್ಥಳೀಯರು ಕೆಲವೇ ದಿನಗಳಲ್ಲಿ ಹಲವಾರು ಗ್ರಹಗಳ ಬದಲಾವಣೆಯಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಈ ರಾಶಿಯವರಿಗೆ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ಧನು ರಾಶಿ – ಬಹು ಗ್ರಹಗಳ ಬದಲಾವಣೆಯು ಧನು ರಾಶಿಯವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಉತ್ತಮ ಕಲಾವಕಾಶವಿದ್ದು, ನಿಮ್ಮ ವಿದ್ಯಾಭ್ಯಾಸದ ವಿಷಯದಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ಜೊಗೆ ಈ ಸಮಯದಲ್ಲಿ ನಿಮಗೆ ಕುಟುಂಬ ಸದಸ್ಯರ ಬೆಂಬಲವಿರುತ್ತದೆ. ಗೌರವಾಧಾರಗಳೂ ನಿಮ್ಮ ಪಾಲಾಗಲಿದೆ.