ಮದುವೆ ಮಾಡಿಕೊಳ್ಳದೇ ಮಕ್ಕಳು ಮಾಡೋ ಅವಕಾಶ ಮಾಡಿಕೊಟ್ಟಿದೆ ಈ ದೇಶ! ಕಾರಣ ಏನಿರಬಹುದು? ಇಲ್ಲಿದೆ ಉತ್ತರ

China: ಇತ್ತೀಚೆಗಷ್ಟೆ ಚೀನಾ ಹೊಸ ನಿಯಮ (Rules)ವನ್ನು ಪರಿಚಯಿಸಿದ್ದು, ಇದು ಜಸ್ಟ್ ಮ್ಯಾರೀಡ್ ಕಪಲ್ ಹಾಗೂ ಭಾವೀ ವಧು-ವರರ (Bride-groom) ಮೊಗದಲ್ಲಿ ವಿಶೇಷ ಖುಷಿ ತರಿಸುವಲ್ಲಿ ಯಶಸ್ವಿಯಾಗಿತ್ತು. ಚೀನಾ ದೇಶದಲ್ಲಿ ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಚೀನಾ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ಮದುವೆಯಾದ ದಂಪತಿಗೆ (Couple) ರೋಮ್ಯಾನ್ಸ್ ಮಾಡುವ ಸಲುವಾಗಿ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ (China government) ಘೋಷಿಸಿದ ಬೆನ್ನಲ್ಲೇ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ಚೀನಾದಲ್ಲಿ(China) ದುಬಾರಿ ಮದುವೆಗಳಿಗೆ (Grand Marriage) ನಿಷೇಧ ಹೇರಿ, ಮದುವೆಯಿಲ್ಲದೆ ಮಕ್ಕಳ ಜನನಕ್ಕೆ ಅನುವು ಮಾಡಿಕೊಡಲಾಗಿದೆ.

ಚೀನಾದಲ್ಲಿ ಜನನ ಪ್ರಮಾಣ (Birth rate) ಕಡಿಮೆಯಾಗುತ್ತಿದ್ದು ಇದನ್ನು ಕಂಡು ಗಾಬರಿಗೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯಲ್ಲಿ(Population) ಏರಿಕೆ (Increasing)ಕಂಡುಬರುತ್ತಿದ್ದು ಇದರಿಂದಾಗಿ ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲು ಚೀನಾ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗೆ ಜನ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮದುವೆಯಾದವರಿಗೆ ರೋಮ್ಯಾನ್ಸ್ ಮಾಡಲು 30 ದಿನಗಳ ವೇತನ ಸಹಿತ ರಜೆ ನೀಡಲು ಚೀನಾ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದೀಗ, ಸುಲಭದಲ್ಲಿ ಮದುವೆಯಾಗುವ ( Marriage)ಮದುವೆಯಾಗದೆ ಮಕ್ಕಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಚೀನಾದ 5 ನೇ ಅತಿದೊಡ್ಡ ಪ್ರಾಂತ್ಯವಾಗಿರುವ ಸಿಚುವಾನ್ ನಲ್ಲಿ ಸುಮಾರು ಎಂಟೂವರೆ ಕೋಟಿ ಜನಸಂಖ್ಯೆ ಇದ್ದು, ಇದು ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ, ಸರ್ಕಾರ ಹೊಸ ಪ್ರಯೋಗ ನಡೆಸುತ್ತಿದೆ.

ಸಾಮಾನ್ಯವಾಗಿ ಮದುವೆ ಎಂದರೆ ಸಾಕು ಅದ್ದೂರಿಯಾಗಿ ವೈಭವೋಪೇತವಾಗಿ ಅರಮನೆ ಮಾದರಿಯಲ್ಲಿ ಕೋಟಿಗಟ್ಟಲೆ ವ್ಯಯಿಸಿ ಜೊತೆಗೆ ಮದುವೆಯಾಗುವ ವಧುವಿನ ಜೊತೆಗೆ ಒಂದಕ್ಕೊಂದು ಆಫರ್ ಅನ್ನೋ ಹಾಗೆ ದುಬಾರಿ ಉಡುಗೊರೆ ರೂಪದಲ್ಲಿ ಕಾರು, ಭಂಗಲೆ, ನಗ, ಅಮೂಲ್ಯ ವಸ್ತುಗಳನ್ನು ವಧುವನ್ನು ಧಾರೆ ಎರೆದು ಕೊಡುವಾಗ ವರನ ಕಡೆಗೆ ಮಗಳ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸಿ ವಧುವಿನ ಕಡೆಯವರು( Bride Dowries) ವರ ದಕ್ಷಿಣೆಯಾದರೂ ಕೂಡಾ ವರನಿಗೆ (ವಧುವಿನ ದಕ್ಷಿಣೆ) ರೂಪದಲ್ಲಿ ಪಡೆಯುವ ಚಾಳಿ ಇಂದಿಗೂ ಮುಂದುವರೆಯುತ್ತಿದೆ. ಆದರೆ, ಇದೀಗ, ಚೀನಾ ಸರ್ಕಾರ ಹೆಚ್ಚಿನ ಮದುವೆಗಳಿಗೆ ಉತ್ತೇಜನ (Encouragement) ನೀಡುವ ಜೊತೆಗೆ ತನ್ನ ಸರಕಾರದ ಧ್ಯೇಯವಾದ ಜನನ ದರವನ್ನು ಹೆಚ್ಚಿಸಲು ದುಬಾರಿ ವಧುವಿನ ವರದಕ್ಷಿಣೆಯನ್ನು (Dowry) ತಡೆಯಲು ಮುಂದಾಗಿದೆ. ಹಾಗಾಗಿ, ಚೀನಾದ ಸಿಚುವಾನ್ ಪ್ರಾಂತ್ಯವು ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಇದೀಗ, ಮದುವೆಯಾಗದ ಪೋಷಕರಿಗೆ ಹೆರಿಗೆ ರಜೆ ಮತ್ತು ವೈದ್ಯಕೀಯ ವೆಚ್ಚಗಳನ್ನು ಒದಗಿಸಲು ಶುರು ಮಾಡಿದೆ.

ಅಷ್ಟೆ ಅಲ್ಲದೇ, ಚೀನಾದಲ್ಲಿ ಸಾಮಾನ್ಯವಾಗಿ ವರನ ಕಡೆಯವರು ವರದಕ್ಷಿಣೆ ರೀತಿಯ ಸಂಪ್ರದಾಯ (Tradition) ಅನುಸರಿಸುತ್ತಿದ್ದು, ಎಲ್ಲಾ ಚೀನೀ ವಿವಾಹಗಳು ಮೂರನೇ ಎರಡರಷ್ಟು ಕೈಲಿ ಪದ್ಧತಿಯನ್ನು ಅನುಸರಿಸುತ್ತಾರೆ. ವರನ(Groom) ಕಡೆಯವರು ತನ್ನ ಶ್ರೀಮಂತಿಕೆ,ತನ್ನ ಒಟ್ಟು ಆದಾಯವನ್ನ ಪ್ರದರ್ಶನ ಮಾಡಿ ನೋಡುಗರ ಮುಂದೆ ತನ್ನ ಸಿರಿವಂತಿಕೆಯ ಪ್ರದರ್ಶನ ಮಾಡಲು ವಧುವಿನ ಕಡೆಯವರಿಗೆ ಇಷ್ಟು ಎಂದು ಹೇಳಿ ನಿರ್ದಿಷ್ಟ ಮೊತ್ತ ಪಾವತಿ ಮಾಡಲು ಆದೇಶಿಸುತ್ತಾರೆ. ಹೀಗಾಗಿ, ವಧುವಿನ ಕಡೆಗೆ ಆ ಉಡುಗೊರೆಯ ಮೊತ್ತ ಹೊರೆಯಾದರು ಕೂಡ ಪಾವತಿ ಮಾಡಬೇಕಾಗುತ್ತದೆ. ಸದ್ಯ ಚೀನಾ ಸರ್ಕಾರ ಮದುವೆಗಳಿಗೆ ಪಡೆಯುವ ನಿಶ್ಚಿತಾರ್ಥದ ಉಡುಗೊರೆಯನ್ನು (Gift) ಎಂಬ ಸಂಪ್ರದಾಯಕ್ಕೆ (Tradition) ಕಡಿವಾಣ ಹಾಕಿ ನಿಲ್ಲಿಸಲು ಮುಂದಾಗಿ, ಸದ್ಯ ಈ ಪದ್ಧತಿಗೆ ನಿಷೇಧ ಹೇರಿದೆ.

‘ಬ್ರೈಡ್ ಪ್ರೈಸ್’ ಎಂಬ ಸಂಪ್ರದಾಯಕ್ಕೆ ಬ್ರೇಕ್ ನೀಡಿರುವ ಹಿನ್ನೆಲೆ ಜನರು ಸುಲಭವಾಗಿ ಮದುವೆಯಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಷ್ಟೆ ಅಲ್ಲದೆ, ಸಿಚುವಾನ್ ಪ್ರಾಂತ್ಯದಲ್ಲಿ ಮಕ್ಕಳ ಸಂಖ್ಯೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದಿದ್ದು, ಮಕ್ಕಳಿರಲವ್ವ ಮನೆ ತುಂಬಾ ಎಂಬಂತೆ ಹೆಚ್ಚು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಿದೆ. ಇಲ್ಲಿಯವರೆಗೆ ವಿವಾಹಿತ ದಂಪತಿಗಳು ಮಾತ್ರ ಹೆರಿಗೆ ರಜೆ ಮತ್ತು ವೈದ್ಯಕೀಯ ವೆಚ್ಚಗಳನ್ನು ಪಡೆಯಲು ಅರ್ಹರಾಗಿದ್ದರು. ಇದೀಗ, ಸಿಚುವಾನ್ನಲ್ಲಿ, ಅವಿವಾಹಿತ ತಾಯಂದಿರು ಕೂಡ ಸರ್ಕಾರಿ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆ. ಚೀನಾದ ಹೊಸ ನಿಯಮಗಳನ್ನು ನೋಡಿ ಉಳಿದ ದೇಶದವರು ಇದನ್ನು ನೋಡಿ ಅನುಕರಣೆ ಮಾಡಿದರು ಅಚ್ಚರಿಯಿಲ್ಲ.

Leave A Reply

Your email address will not be published.