ಹೆಂಡತಿ ಹಠ ಮಾಡ್ತಿದ್ದಾಳೆ, ಅತ್ತೆ ಮನೇಲಿ ಹೋಳಿ ಆಚರಿಸೋಕೆ ರಜಾ ಕೇಳಿದ ಇನ್ಸ್ ಪೆಕ್ಟರ್, ವೈರಲ್ ಆಯ್ತು ರಜಾ ಚೀಟಿ

Viral post :ಪೊಲೀಸರುಗಳು ಸಾಮಾನ್ಯವಾಗಿ ಯಾವತ್ತೂ ಬಿಜಿಯಾಗಿ ಇರುತ್ತಾರೆ. ಊರಿನಲ್ಲಿ ಯಾವುದೇ ಹಬ್ಬಗಳು ಬಂದಾಗಲೂ, ಎಲೆಕ್ಷನ್ ಎದುರಾದಾಗಲೂ, ಗಲಭೆಗಳು ಇದ್ದಾಗಲೂ, ಊರಿಗೆ ಭೇಟಿಯಾದಾಗಲೂ ಪೊಲೀಸರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಆಯಾ ಸಂದರ್ಭಗಳಲ್ಲಿ ಸಾಮಾನ್ಯ ದಿನಗಳಿಗಿಂತ ಭದ್ರತೆ ಹೆಚ್ಚಾಗಿಯೇ ಇರುತ್ತದೆ. ಅದು ಹಬ್ಬದ ಸಂದರ್ಭಗಳಲ್ಲೂ ಕೂಡಾ ಸತ್ಯ. ರಜಾ ಕೇಳಿ ಲೀವ್ ಸಿಗದೇ ಇರುವ ಪೊಲೀಸರು ಸಪ್ಪೆ ಮುಖ ಮಾಡಿಕೊಂಡು ಡ್ಯೂಟಿ ಮಾಡುವುದು ನಾವು ಕಂಡೇ ಇದ್ದೇವೆ.

ಆದ್ರೆ ಇಲ್ಲೊಬ್ಬರು ಧೈರ್ಯವಂತ ಪೊಲೀಸ್ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಹೋಳಿ (Holi) ಆಚರಿಸಲು 10 ದಿನ ರಜೆ (cops holi leave letter) ಕೇಳಿ ಸುದ್ದಿಯಾಗಿದ್ದಾರೆ. ಅದಕ್ಕೆ ಅವರು ನಮೂದಿಸಿದ ಕಾರಣ ಈಗ ಎಲ್ಲೆಡೆ ವೈರಲ್ (viral post) ಆಗಿದೆ.

ಉತ್ತರಪ್ರದೇಶದ (Uttar Pradesh) ಫರೂಕಾಬಾದ್ ಜಿಲ್ಲೆಯ ಇನ್ಸ್‌ಪೆಕ್ಟರ್‌ ಗೆ ಮನೆಯಲ್ಲಿ ಹೆಂಡತಿಯ ಜತೆ ಹೋಳಿ ಆಚರಿಸಲಿತ್ತು. ಅದಕ್ಕಾಗಿ ಹೋಳಿಗೆ ಮುಂಚಿತವಾಗಿ 10 ದಿನಗಳ ರಜೆ ಕೇಳಿದ್ದಾರೆ. ಮನೆಯಲ್ಲಿನ ದಾಂಪತ್ಯ ಕಲಹ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ. ರಜೆಯ ಅರ್ಜಿ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ.

” ನಾನು ಮದುವೆಯಾಗಿ 22 ವರ್ಷಗಳಾದರೂ ನಾನು ಇನ್ನೂ ಅತ್ತೆ ಮನೆಗೆ ಹೋಗಿ ಹೋಳಿ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಇದರಿಂದ ನನ್ನ ಹೆಂಡತಿ ತುಂಬಾ ಕೋಪಗೊಂಡಿದ್ದಾಳೆ. ಈ ಬಾರಿ ಅಲ್ಲಿಗೆ ಹೋಗಲೇಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ರಜೆ ಇಲ್ಲದೆ ಅಲ್ಲಿಗೆ ಹೋಗಿಬರಲು ಸಾಧ್ಯವಾಗುವುದಿಲ್ಲ. ಆದುದರಿಂದ ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು 10 ದಿನ ಸಾಮಾನ್ಯ ರಜೆ ಒದಗಿಸಿ ” ಎಂದು ಆತ ಅರ್ಜಿ ಸಲ್ಲಿಸಿದ್ದಾರೆ. ರಜೆಯ ಅರ್ಜಿ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಪ, ಪೋಲಿಸಪ್ಪನ ರಜಾ ಚೀಟಿ ನಗು ಹುಟ್ಟಿಸುವುದು ಜತೆಗೆ, ಕನಿಕರ ಕೂಡಾ ಮೂಡಿಸುವಂತಿದೆ.

ಬಹುಶಹ ಈ ಪೊಲೀಸ್ ಇನ್ಸ್ಪೆಕ್ಟರ್ ಅವರ ಪ್ರಜಾ ಚೀಟಿ ಹಿರಿಯ ಅಧಿಕಾರಿಗಳ ಮನವನ್ನು ತಟ್ಟಿರಬೇಕು. ಅದಕ್ಕೆ ಇರಬೇಕು, ಆತನ ಅರ್ಜಿಯನ್ನು ಓದಿದ ನಂತರ ಎಸ್ಪಿ ಅಶೋಕ್ ಕುಮಾರ್ ಮಾರ್ಚ್ 4 ರಿಂದ ಇನ್ಸ್‌ಪೆಕ್ಟರ್‌ಗೆ 5 ದಿನಗಳ ಸಾಮಾನ್ಯ ರಜೆ ನೀಡಿ ಕಳಿಸಿದ್ದಾರೆ. ಹೆಂಡತಿಯ ಹಠ ಮತ್ತು ಕುಟುಂಬ ಕಲಹ ತಣ್ಣಗಾಗಿರಬಹುದು ಎನ್ನುವುದು ನಮ್ಮ ಊಹೆ.

 

Leave A Reply

Your email address will not be published.