Most Dangerous Cities : ಈ ಸ್ಥಳಗಳಿಗೆ ನೀವು ಎಂದು ಕಾಲಿಡಬೇಡಿ, ನೀವು ಜೀವಂತವಾಗಿ ವಾಪಾಸ್‌ ಬರ್ತೀರಾ ಅನ್ನೋದು ಗೊತ್ತಿಲ್ಲದ ಡೇಂಜರಸ್‌ ಸ್ಥಳಗಳಿವು!

Most Dangerous Cities: ವಿಶ್ವದಲ್ಲಿ ಸುಂದರ ತಾಣಗಳು ಅದೆಷ್ಟೋ ಇವೆ. ಹಲವು ಪ್ರೇಕ್ಷಣೀಯ ಸ್ಥಳಗಳು ಇದ್ದು, ಅದರ ಸೊಬಗನ್ನು ಆನಂದಿಸಲು ಸಾಕಷ್ಟು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ನಿಮಗೆ ಗೊತ್ತಾ? ಸುಂದರ, ಸುರಕ್ಷಿತ ಸ್ಥಳ ಮಾತ್ರವಲ್ಲ, ಅಪಾಯಕಾರಿ ಸ್ಥಳಗಳೂ (Most Dangerous Cities) ಇವೆ. ಹೌದು, ಇದೀಗ ನಿಮಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಲೈಫಲ್ಲಿ ಯಾವತ್ತೂ ಈ ಊರುಗಳಿಗೆ ಹೋಗ್ಲೇಬೇಡಿ, ಯಾಕಂದ್ರೆ, ಮತ್ತೆ ವಾಪಸ್ ಬದುಕಿ ಬರೋದು ಡೌಟ್!!

ಕಾಬುಲ್ (Kabul): ಇದು ಅಫ್ಘಾನಿಸ್ತಾನ (Afghanistan) ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದೆ. ಇದು ಅಫ್ಘಾನಿಸ್ತಾನದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರ ಸುಂದರವಾಗಿದೆ. ಆದರೆ ಈ ಸ್ಥಳಕ್ಕೆ ಭೇಟಿ ನೀಡುವಂತಿಲ್ಲ, ಯಾಕೆ ಗೊತ್ತಾ? ಅಫ್ಘಾನಿಸ್ತಾನವು ತಾಲಿಬಾನ್‌ ಕೈಯಲ್ಲಿರುವುದರಿಂದ ಅಲ್ಲಿಗೆ ಹೋಗುವುದು ತುಂಬಾನೇ ಅಪಾಯಕಾರಿ. ಹಾಗೆಯೇ, ಆಫ್ರಿಕಾದ ದಕ್ಷಿಣ ಸುಡಾನ್ ನ ರಾಜಧಾನಿ ಜುಬಾ ಕೂಡ ಅಸುರಕ್ಷಿತ ಸ್ಥಳ. ಅಲ್ಲಿ ಸಶಸ್ತ್ರ ಸಂಘರ್ಷ ಮತ್ತು ಹಿಂಸಾಚಾರ ನಡೆಯುತ್ತಲೇ ಇದೆ.

ಇಸ್ಲಾಮಾಬಾದ್ (Islamabad) : ಇದು ಪಾಕಿಸ್ತಾನ(Pakistan) ದೇಶದ ರಾಜಧಾನಿಯಾಗಿದೆ. ಎರಡು ಮಿಲಿಯನ್ ಜನಸಂಖ್ಯೆಯೊಂದಿಗೆ, ಇದು ಪಾಕಿಸ್ತಾನದ 10 ನೆಯ ಅತಿ ದೊಡ್ಡ ನಗರವಾಗಿದೆ. ಹಾಗೇ ಇದು ವಿಶ್ವದ ಎರಡನೇ ಅತ್ಯಂತ ಸುಂದರ ರಾಜಧಾನಿಯಾಗಿದೆ. ಆದರೆ ಇದು ಅಪಾಯಕಾರಿ ಸ್ಥಳವಾಗಿದೆ. ಭಯೋತ್ಪಾದಕರ ದಾಳಿಯಿಂದಾಗಿ ಪಾಕಿಸ್ತಾನ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾಗಿದೆ. ವಿಶೇಷವಾಗಿ ಧಾರ್ಮಿಕ ರಜಾದಿನಗಳು ಮತ್ತು ಚುನಾವಣೆ ಸಂದರ್ಭಗಳಲ್ಲಿ ಇದು ಸುರಕ್ಷಿತವಲ್ಲ.

ಖಾರ್ಟೂಮ್ : ಖಾರ್ಟೂಮ್ ಸುಡಾನ್‌ನ ರಾಜಧಾನಿ ಆಗಿದೆ. ಇದು ಬಿಳಿ ಮತ್ತು ನೀಲಿ ನೈಲ್ ನದಿಗಳು ಸಂಧಿಸುವ ಸ್ಥಳವಾಗಿದೆ.
3 ಜೂನ್ 2019 ರಂದು, ಖಾರ್ಟೂಮ್ ಹತ್ಯಾಕಾಂಡದ ಸ್ಥಳವಾಗಿತ್ತು. 100 ಕ್ಕೂ ಹೆಚ್ಚು ಭಿನ್ನಮತೀಯರನ್ನು ಕೊಲ್ಲಲಾಯಿತು. ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಸಂಘರ್ಷದಿಂದಾಗಿ ಸುಡಾನ್‌ನ ಕೆಲವು ಭಾಗಗಳು ತುರ್ತು ಪರಿಸ್ಥಿತಿಯಲ್ಲಿವೆ. ಕರ್ಫ್ಯೂಗಳು ಮತ್ತು ಸಂಚಾರದ ಮೇಲೆ ನಿರ್ಬಂಧಗಳನ್ನು ನಗರದ ಒಳಗೆ ಮತ್ತು ಹೊರಗೆ ವಿಧಿಸಬಹುದು. ಹಾಗಾಗಿ ಇಲ್ಲಿಗೆ ಸದ್ಯ ಹೋಗದೆ ಇರುವುದು ಉತ್ತಮ.

ಅಲೆಪ್ಪೊ (Aleppo) : ಇದು ಸಿರಿಯಾದ (Syria) ಅತಿದೊಡ್ಡ ನಗರವಾಗಿದೆ ಮತ್ತು ದೇಶದ ಏಕರೂಪದ, ಹೆಚ್ಚು ಜನಸಂಖ್ಯೆ ಹೊಂದಿರುವ ಗವರ್ನರೇಟ್‌ನ ಕೇಂದ್ರವಾಗಿದೆ. ಅಲೆಪ್ಪೊ ಹಲವಾರು ವಾಸ್ತುಶಿಲ್ಪ ಶೈಲಿಗಳ ಮಿಶ್ರಣವನ್ನು ಹೊಂದಿದೆ. 2011 ರಲ್ಲಿ ಸಿರಿಯನ್ ಅಂತರ್ಯುದ್ಧದ (Civil War) ಪ್ರಾರಂಭವಾಗಿದ್ದು, ಈ ನಗರವೂ ಒಳಪಟ್ಟಿದೆ. ಯುದ್ಧದ ಕಾರಣ, ಬಾಂಬ್ ದಾಳಿಗೆ ಸಾವು-ನೋವು ಉಂಟಾಗಿದ್ದು, ಹಲವಾರು ಮನೆಗಳು ನಾಶವಾಗಿದೆ. ಈಗಲೂ ಯುದ್ಧಭೂಮಿಯಂತೇ ಇರುವ ಈ ನಗರ(city) ವಿದೇಶಿಯರಿಗೆ ಪ್ರಯಾಣಿಸಲು ಸುರಕ್ಷಿತವಲ್ಲ. ಹಾಗೂ ಪ್ರವಾಸಿಗರಿಗೆ ಭೇಟಿ ನೀಡಲು ಉತ್ತಮ ಸ್ಥಳವಲ್ಲ.

ಸನಾ (Sana): ಯೆಮೆನ್‌ನ ರಾಜಧಾನಿ ಸನಾ ಕೂಡ ಅಸುರಕ್ಷಿತ ಮತ್ತು ಅಪಾಯಕಾರಿ ಸ್ಥಳವಾಗಿದೆ. ಈ ಪ್ರದೇಶದಲ್ಲಿ 2015 ರಲ್ಲಿ ಬಾಂಬ್ ಸ್ಫೋಟಿಸಲಾಯಿತು. ಹಾಗಾಗಿ ಅಂದಿನಿಂದ ಈ ಪ್ರದೇಶಕ್ಕೆ ವಿದೇಶಿಗರು, ಪ್ರವಾಸಿಗರು ತೆರಳುತ್ತಿಲ್ಲ. ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿದ್ದು, ಹೋದರೆ ಅಪಾಯ ಖಂಡಿತ!!. ಈ ಎಲ್ಲಾ ಸ್ಥಳಗಳಿಗೆ ನೀವು ಕಾಲಿಟ್ಟರೆ, ಜೀವಂತವಾಗಿ ವಾಪಾಸ್‌ ಬರ್ತೀರಾ ಅನ್ನೋದು ಡೌಟು!! ಅಷ್ಟು ಡೇಂಜರಸ್ ಈ ಸ್ಥಳಗಳು.

Leave A Reply

Your email address will not be published.