Viral post: ಬಾಣಂತಿ, ವೃದ್ಧೆ, ದಿವ್ಯಾಂಗ ಹಾಗೂ ಅಶಕ್ತ ಇವರಲ್ಲಿ ಯಾರಿಗೆ ಸೀಟ್ ಬಿಡಬೇಕು? ವೈರಲ್ ಆಯ್ತು IAS ಅಧಿಕಾರಿಯ ಪೋಸ್ಟ್! ನೀವೂ ಉತ್ತರಿಸಿ.

Viral post : ಸೋಷಿಯಲ್ ಮೀಡಿಯಾಗಳಲ್ಲಿ ದಿನನಿತ್ಯ ನೂರಾರು ಪೋಸ್ಟ್(Post) ಗಳು, ವಿಡಿಯೋ(Vedio) ಗಳು ಅಥವಾ ಏನಾದ್ರೂ ಡಿಫರೆಂಟ್ ಆದಂತಹ ಸುದ್ಧಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಯಾವಾಗಲಾದರೂ ಒಮ್ಮೆ ಮಾತ್ರ ಇವುಗಳಲ್ಲಿ ತುಂಬಾ ಪ್ರಮುಖ ಎನಿಸುವ ಕೆಲವು ವಿಚಾರಗಳು ಮುನ್ನಲೆಗೆ ಬಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಅಥವಾ ಮನನ ಮಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮನ್ನು ಪ್ರಚೋದಿಸುತ್ತವೆ. ಅಂತೆಯೇ ಇದೀಗ IAS ಅಧಿಕಾರಿಯೊಬ್ಬರು ಕೆಲವು ಪ್ರಶ್ನೆಗಳನ್ನು ಕೇಳಿ ಮಾಡಿರುವ ಟ್ವಿಟ್ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ಹಾಗಿದ್ರೆ ಆ ಪೋಸ್ಟ್ ನಲ್ಲಿ (viral post) ಅಂತದ್ದೇನಿದೆ ಗೊತ್ತಾ?

 

ಹೌದು, ಈಗ ಅವಿನೀಶ್(Avinish) ಎಂಬ ಐಎಎಸ್ (IAS) ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಒಂದು ಸಂದಿಗ್ಥತೆ ರೂಪದ ಪ್ರಶ್ನೆಯೊಂದನ್ನ ಹಂಚಿಕೊಂಡಿದ್ದಾರೆ. ಹಾಗೂ ಸಾಧ್ಯವಾದರೆ ಉತ್ತರಿಸಿ ಎಂದು ಹೇಳಿದ್ದಾರೆ. ಇದು ನಾವು ಪ್ರತಿ ನಿತ್ಯ ನೋಡುವ ವಾಸ್ತವವಾದರೂ, ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟಸಾಧ್ಯ. ಆದರೂ ಅವರ ಪ್ರಶ್ನೆಗೆ ಟ್ವೀಟರ್ (Tweeter) ಬಳಕೆದಾರರು ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ.

ಅವಿನೀಶ್ ಅವರು ಕಾರ್ಟೂನ್(Cartoon) ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಅದ್ರಲ್ಲಿ ಯುವಕನೊಬ್ಬ ಸಾರ್ವಜನಿಕ ಸಾರಿಗೆ ಸೀಟ್ ಮೇಲೆ ಕುಳಿತಿದ್ದಾನೆ. ಅವನ ಪಕ್ಕದಲ್ಲಿ ನಾಲ್ಕು ಮಂದಿ ನಿಂತಿದ್ದಾರೆ. ಮೊದಲು ಕೈನಲ್ಲಿ ಮಗು ಹಿಡಿದು, ಹಿಂದೆ ಬ್ಯಾಗ್ ಹಾಕಿರುವ ಮಹಿಳೆ ಇದ್ದರೆ. ಆಕೆಯ ಹಿಂದೆ ವಯಸ್ಸಾದ ವೃದ್ಧೆ ಊರುಗೋಲು ಹಿಡಿದು ನಿಂತಿದ್ದಾಳೆ. ಆಕೆಯ ಹಿಂದೆ ಕಾಲಿಗೆ ಪ್ಲಾಸ್ಟರ್ ಹಾಕಿರುವ, ಸಹಾಯಕ್ಕೆ ಕೋಲು ಹಿಡಿದಿರುವ ಒಬ್ಬ ಗಾಯಾಳು ವ್ಯಕ್ತಿ ನಿಂತಿದ್ದಾನೆ. ಆತನ ಹಿಂದೆ ದೈಹಿಕವಾಗಿ ಅಪೌಷ್ಟಿಕತೆ ಹೊಂದಿರುವ ವ್ಯಕ್ತಿ ನಿಂತಿದ್ದಾನೆ.

‘ಯಾರು ಈ ಸೀಟಿಗೆ ಅರ್ಹರು, ಹಾಗೆ ಯಾಕೆ’ ಎಂಬ ಶೀರ್ಷಿಕೆಯೊಂದಿಗೆ ಅವಿನೀಶ್ ಈ ಪೋಸ್ಟ್ ಹಂಚಿಕೊಂಡಿದ್ದು, ಕುಳಿತವರು ನೀವಾಗಿದ್ದರೆ, ನೀವು ಎ,ಬಿ,ಸಿ,ಡಿ ಈ ನಾಲ್ಕು ಮಂದಿಯಲ್ಲಿ ಯಾರಿಗೆ ಸೀಟು ಬಿಟ್ಟುಕೊಡುತ್ತೀರಿ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. IAS ಅಧಿಕಾರಿಯ ಈ ಪ್ರಶ್ನೆಗೆ ಹಲವು ಟ್ವೀಟರ್ ಬಳಕೆದಾರರು ಬಗೆ ಬಗೆಯಾಗಿ ಕಮೆಂಟಿಸೋದ್ರೊಂದಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ವಿಭಿನ್ನ ರೀತಿಯ ಉತ್ತರಗಳೂ ಬಂದಿವೆ.

ಒಬ್ಬ ಬಳಕೆದಾದರು ಚಾಣಕ್ಷತನದಿಂದ ಉತ್ತರಿಸಿ ‘ಮಹಿಳೆ ಹಾಗೂ ವೃದ್ಧರಿಗಾಗಿ ಪ್ರತ್ಯೇಕ ಸೀಟು ಮೀಸಲಿದೆ. ಹಾಗಾಗಿ ಅವರು ಆ ಸೀಟಿನಲ್ಲಿ ಕುಳಿತುಕೊಳ್ತಾರೆ. ಕೊನೆಯಲ್ಲಿರುವ ವ್ಯಕ್ತಿಗೆ ಶಕ್ತಿಯಿಲ್ಲ. ಆದ್ರೆ ಆತ ಇನ್ನೊಂದು ನಿಲ್ದಾಣ ಬರುವವರೆಗೆ ನಿಲ್ಲುವ ಸಾಮರ್ಥ್ಯ ಹೊಂದಿದ್ದಾನೆ. ಹಾಗಾಗಿ ಮಧ್ಯದಲ್ಲಿರುವ, ಗಾಯಗೊಂಡ ವ್ಯಕ್ತಿಗೆ ಸೀಟು ನೀಡ್ಬೇಕೆಂದು ಉತ್ತರ ನೀಡಿದ್ದಾರೆ. ಇನ್ನೊಬ್ಬರು ‘ದೆಹಲಿ ಮೆಟ್ರೋ ಪ್ರಯಾಣಿಕರಂತೆ ಕಣ್ಣು ಮುಚ್ಚಿ ನಿದ್ರಿಸುವಂತೆ ನಟನೆ ಮಾಡಬೇಕು’ ಎಂದು ಬರೆದಿದ್ದಾನೆ.

ಮತ್ತೊಬ್ಬರು ‘ಇಂಥ ಖತರ್ನಾಕ್ ಆಯ್ಕೆಯನ್ನು ಯಾರು ನೀಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಒಬ್ಬರು ‘ಯಾರಿಗೂ ಸೀಟ್ ನೀಡ್ಬಾರದು. ಇಲ್ಲಿ ನಾನು ಕೂಡ ಪ್ರಯಾಣಿಕನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾನೆ. ‘ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಪ್ರತಿಯೊಂದು ಆಯ್ಕೆಯು ತನ್ನದೇ ಆದ ಅರ್ಹತೆಯನ್ನು ಹೊಂದಿದೆ. ಇದೊಂದು ವಿಶಿಷ್ಟವಾದ ಎಥಿಕ್ಸ್ ಕೇಸ್ ಸ್ಟಡಿ. ಅಲ್ಲಿ ಸರಿ ಮತ್ತು ತಪ್ಪು ಇಲ್ಲ. ಆದಾಗ್ಯೂ ನಾನು ಎ ಆಯ್ಕೆಯನ್ನು ಆಯ್ಕೆ ಮಾಡುತ್ತದೆ. ಇದು ಇಬ್ಬರಿಗೆ ಆಸನವನ್ನು ನೀಡುತ್ತದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ಆರಂಭದಲ್ಲಿ ಹೇಳಿದಂತೆ ಇದು ನಮ್ಮ ಬದುಕಿನಲ್ಲಿ ಪ್ರತೀ ದಿನವೂ ನಡೆವ ಘಟನೆಯಾಗಿದೆ. ಪ್ರಯಾಣಿಸುವ ಸಮಯದಲ್ಲಂತೂ ನಾವು ಇವನ್ನೆಲ್ಲ ಗಮನಿಸಿರ್ತೇವೆ. ಆದರೆ ಇದರ ಬಗ್ಗೆ ಯೋಚಿಸಿರುವುದಿಲ್ಲ. ಆದ್ರೆ ಯಾರಾದರೂ ಹೀಗೆ ಇದ್ದಕ್ಕಿದ್ದಾಗೆ ಇಂತ ಪ್ರಶ್ನೆ ಕೇಳಿದಾಗ ತಲೆಯಲ್ಲಿ ಹುಳ ಬಿಟ್ಟುಕೊಂಡು ಅಲೋಚಿಸ್ತೇವೆ. ಇವೆಲ್ಲ ವಾಸ್ತವವಾದರೂ ಉತ್ತರ ನೀಡೋದು ಮಾತ್ರ ಕಷ್ಟ ಸಾಧ್ಯ. ಇರಲಿ ಬಿಡಿ. ಅಂದಹಾಗೆ ನೀವೇನಾದರೂ ಆ ಸೀಟಲ್ಲಿ ಕುಳಿತಿದ್ದರೆ ಈ ನಾಲ್ವರಲ್ಲಿ ಯಾರಿಗೆ ಸೀಟು ಬಿಟ್ಟುಕೊಡ್ತೀರಿ?

Leave A Reply

Your email address will not be published.