ಪ್ರವಾಸಿಗರಿಗೆ ಬಿಗ್‌ ಶಾಕಿಂಗ್‌..!? ಏಕವ್ಯಕ್ತಿ ಚಾರಣವನ್ನು ಬ್ಯಾನ್‌ ಮಾಡಿದ ನೇಪಾಳ, ಏಪ್ರಿಲ್ 1 ರಿಂದ ಜಾರಿ

Trekking :ಪ್ರವಾಸ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ ಅದರಲ್ಲೂ ಪ್ರತಿಯೊಬ್ಬರು ಒಂದೊಂದು ರೀತಿ ಪ್ರವಾಸದ ವೈಶಿಷ್ಟತೆಗಳನ್ನು ಹೊಂದಿರುತ್ತಾರೆ. ಪ್ರವಾಸವನ್ನು ಸಾಮಾನ್ಯವಾಗಿ ಹಲವಾರು ವಿಧಗಳಾಗಿ ವಿಂಗಡಿಸಬಹುದು. ಕೌಟುಂಬಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಅಧ್ಯಯನ ಪ್ರವಾಸ, ಸಾಹಸಮಯ ಪ್ರವಾಸ, ಧಾರ್ಮಿಕ ಪ್ರವಾಸ ಹೀಗೆ ಹತ್ತಾರು ವಿಧಗಳನ್ನು ಹೊಂದಿದೆ. ಇದೀಗ ಕೆಲವು ಪ್ರವಾಸ ಪ್ರಿಯರು ಪ್ರದೇಶಗಳಿಗೆ ಅನುಗುಣವಾಗಿ ಪ್ರವಾಸವನ್ನು ಕೈಗೊಳ್ಳುವ ಮೂಲಕ ಎಂಜಾಯ್‌ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ನೇಪಾಳಕ್ಕೆ ಕೈಗೊಳ್ಳುವ ಪ್ರವಾಸಿಗರಿಗೆ ಭಾರೀ ಶಾಕಿಂಗ್‌ ಎದುರಾಗಿದ್ದು, ಹಾಯಾಗಿ ಏಕಾಂತಿಯಾಗಿ ಚಾರಣ (solo trekking) ಕೈಗೊಳ್ಳುತ್ತಿದ್ದ ಜನರಿಗೆ ನಿರ್ಬಂಧ ಹೇರಲಾಗಿದೆ ಅರೇ ಯಾಕೆ, ಯಾವಾಗಿಂದ ಈ ಕಾನೂನು ಅನ್ನೋದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ

ನೇಪಾಳವು ತನ್ನ ಮೂರು ಭಾಗಗಳಲ್ಲಿ ಭಾರತದಿಂದ ಸುತ್ತುವರೆದಿದ್ದು ಭಾರತದೊಂದಿಗೆ ಅನೇಕ ದಶಕಗಳಿಂದ ಉತ್ತಮ ಬಾಂಧವ್ಯ ಹೊಂದಿದೆ.ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ಇನ್ಮುಂದೆ ನೇಪಾಳದಲ್ಲಿ ಯಾರೂ ಒಂಟಿಯಾಗಿ ಚಾರಣ ಮಾಡುವಂತಿಲ್ಲ. ಏಪ್ರಿಲ್ 1ರಿಂದ ದೇಶದಲ್ಲಿ ಚಾರಣಕ್ಕೆ ಮಾರ್ಗದರ್ಶಿಗಳನ್ನು ಕಡ್ಡಾಯಗೊಳಿಸಲಾಗಿದೆ.ನೇಪಾಳ ಪ್ರವಾಸೋದ್ಯಮ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಏಪ್ರಿಲ್ 1ರಿಂದ ಹೊಸ ನಿರ್ಧಾರ ಜಾರಿಗೆ ಬರಲಿದೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ನಿರ್ದೇಶಕ ಮಣಿರಾಜ್ ಲಮಿಚಾನೆ ಮಾಹಿತಿ ನೀಡಿದ್ದಾರೆ.

“ದೇಶದಲ್ಲಿ ಏಕಾಂಗಿಯಾಗಿ ಚಾರಣ ಮಾಡುವ ಪ್ರವಾಸಿಗರು ಸಾಮಾನ್ಯವಾಗಿ ದಾರಿ ತಪ್ಪುತ್ತಾರೆ ಮತ್ತು ಅಸುರಕ್ಷಿತ ಪರಿಸ್ಥಿತಿಗಳಿಗೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸೋಲೋ ಟ್ರೆಕ್ಕಿಂಗ್ ನಿಷೇಧಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಏಪ್ರಿಲ್ 1 ರಿಂದ, ಸಾಹಸ ಪ್ರಯಾಣಕ್ಕೆ ಮಾರ್ಗದರ್ಶಿಗಳು ಕಡ್ಡಾಯವಾಗಿದೆ, ”ಎಂದು ಲಾಮಿಚಾನ್ ಹೇಳಿದರು.

ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, 2019 ರಲ್ಲಿ, 50,000 ಪ್ರವಾಸಿಗರು ಮಾರ್ಗದರ್ಶಿ ಅಥವಾ ಇನ್ನಾವುದೇ ಸಹಾಯವಿಲ್ಲದೆ ನೇಪಾಳದಲ್ಲಿ ಚಾರಣ ಮಾಡಿದ್ದಾರೆ. ಚಾರಣಿಗರ ಮಾಹಿತಿ ನಿರ್ವಹಣಾ ವ್ಯವಸ್ಥೆ ಕಾರ್ಡ್ ಎಂಬುದು ಮಾರ್ಗ ಪರವಾನಗಿ ಮತ್ತು ಚಾರಣಿಗರ ಮಾಹಿತಿ ನಿರ್ವಹಣಾ ವ್ಯವಸ್ಥೆ (ಟಿಐಎಂಎಸ್) ಕಾರ್ಡ್ ಪಡೆಯುವ ಮೂಲಕ ಸಾಹಸ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಚಾರಣ ಪರವಾನಗಿಯಾಗಿದೆ. ಆದಾಗ್ಯೂ, ಹೊಸ ನಿರ್ಧಾರದ ಪ್ರಕಾರ, ಪ್ರವಾಸೋದ್ಯಮ ಇಲಾಖೆಯು ಮಾರ್ಗದರ್ಶಿ ಇಲ್ಲದೆ ಪರವಾನಗಿ ಕಾರ್ಡ್ಗಳನ್ನು ನಿಷೇಧಿಸಿದೆ.

ನೇಪಾಳದ ಪ್ರವಾಸ ಕೈಗೊಳ್ಳಲು ಅಕ್ಟೋಬರ್‌ ತಿಂಗಳಿನಿಂದ ಡಿಸೆಂಬರ್‌ ತಿಂಗಳು ಪ್ರಶಸ್ತವಾದ ಸಮಯವಾಗಿದೆ. ಅಕ್ಟೋಬರ್ ಮತ್ತು ನವೆಂಬರ್‌ ಶರತ್ಕಾಲದ ತಿಂಗಳುಗಳು. ಈ ಸಮಯವು ಟ್ರೆಕ್ಕಿಂಗ್‌ ಮಾಡುವವರಿಗೆ ಅತ್ಯುತ್ತಮವಾದ ಸಮಯ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಪ್ರವಾಸಿ ತಾಣಗಳು, ಪ್ರಾಕೃತಿಕ ಸೊಬಗು, ಉಸಿರುಕಟ್ಟುವ ವೀಕ್ಷಣೆಗಳೊಂದಿಗೆ ತುಂಬಿರುತ್ತದೆ. ಹಾಗೆಯೇ ಕಠ್ಮಂಡು ಮತ್ತು ತಗ್ಗು ಪ್ರದೇಶಗಳಿಗೆ ವಿಹಾರವನ್ನು ಬಯಸುವವರಿಗೆ ಚಳಿಗಾಲದ ತಿಂಗಳು ಆಹ್ಲಾದಕರವಾಗಿರುತ್ತದೆ.

ನೇಪಾಳದಲ್ಲಿ ಲ್ಯಾಂಗ್ಟಾಗ್, ಅನ್ನಪೂರ್ಣ ಪ್ರದೇಶ ಮತ್ತು ಎವರೆಸ್ಟ್‌ ಬೇಸ್‌ ಕ್ಯಾಂಪ್‌ನಲ್ಲಿನ ಟ್ರೆಕ್ಕಿಂಗ್‌ ಸೇರಿದಂತೆ ಇನ್ನು ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ.

Leave A Reply

Your email address will not be published.