PM Modi : ಮಾ.12 ರಂದು ಮಂಡ್ಯಕ್ಕೆ ಪ್ರಧಾನಿ ಮೋದಿ ಆಗಮನ : ರೈತರಿಂದ ಪ್ರತಿಭಟನೆಗೆ ಭರ್ಜರಿ ಸಿದ್ಧತೆ

Election : ಮುಂದಿನ ಚುನಾವಣೆ ( Election) ಗೆ ರಾಜ್ಯದೆಲ್ಲೆಡೆ ಭರ್ಜರಿ ರಣತಂತ್ರ ರೂಪಿಸುತ್ತಿದ್ದು,ಈ ಬೆನ್ನಲ್ಲೆ ಕರ್ನಾಟಕ(Karnataka) ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌( Amith Shah) ಮತ್ತೆ ಮತ್ತೆ ಆಗಮಿಸುವ ಮೂಲಕ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ಮತ್ತೆ ಮಾ.12 ರಂದು ಮಂಡ್ಯ(Mandya) ಕ್ಕೆ ಮೋದಿ ಆಗಮಿಸುತ್ತಿದ್ದ ಜಿಲ್ಲೆಯಾದ್ಯಂತ ಭಾರೀ ಸಕಲ ಸಿದ್ದತೆ ನಡೆಸಲಾಗುತ್ತಿದೆ.

 

ಮುಂದಿನ ಚುನಾವಣೆಗೆ ಮತದಾರರನ್ನು ಸೆಳೆಯೋದಕ್ಕೆ ಮತ್ತೆ ರಾಜ್ಯಕ್ಕೆ ಮಾ.12 ರಂದು ಮಂಡ್ಯಕ್ಕೆ ಮೋದಿ(Modi) ಆಗಮಿಸುತ್ತಿದ್ದಾರೆ. ಅಂದು ಧಾರವಾಡದಲ್ಲಿ ಐಐಟಿ ಮತ್ತು ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಎಕ್ಸ್​​ಪ್ರೆಸ್ ವೇ​​​ (Mysore Bangalore Express way)ಲೋಕಾರ್ಪಣೆ ಮಾಡಲಾಗಿದ್ದಾರೆ, ರಾಜ್ಯಕ್ಕೆ ಮೋದಿ ಆಗಮಿಸುವ ವಿಚಾರ ಸದ್ದು ಮಾಡುತ್ತಿದ್ದಂತೆ ರಾಜ್ಯ ರೈತ ಸಂಘ(Farmers Sangha) ದಿಂದ ಪ್ರತಿಭಟನೆ ನಡೆಸಲು ನಿರ್ಧಾರವನ್ನು ಕೈಗೊಂಡಿದೆ.

ಮಂಡ್ಯ ಜಿಲ್ಲೆ ಮದ್ದೂರು(Madduru) ತಾಲೂಕಿನ ಗೆಜ್ಜಲಗೆರೆ ಕಾಲೋನಿಗೆ ಪ್ರಧಾನಿ ಆಗಮಿಸುತ್ತಿರುವ ಸಂದರ್ಭದಲ್ಲೇ ರೈತರ ಪ್ರತಿಭಟನೆ ಕಾವು ಹೆಚ್ಚಾಗಲಿದೆ, ಅಷ್ಟೇ ಅಲ್ಲದೇ ಕಬ್ಬು, ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಪ್ರಧಾನಿ ಮನಮುಟ್ಟುವಂತೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಧರಣಿ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ(PM Modi) ಮಂಡ್ಯ ಜಿಲ್ಲೆಗೆ ಆಗಮಿಸುವ ಬಗ್ಗೆ ಸಚಿವ ಗೋಪಾಲಯ್ಯ ಪೂರ್ವಭಾವಿ ಸಭೆ ನಡಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ. ಮಂಡ್ಯ ಜಿಲ್ಲೆಯಾದ್ಯಂತ ಹೆಚ್ಚಿನ ಪೊಲೀಸರ ನಿಯೋಜನೆ ಮಾಡುವ ಮೂಲಕ ಭದ್ರತೆ(Security) ವಹಿಸಲಾಗುತ್ತದೆ.

ಇದನ್ನೂ ಓದಿ : MS Dhoni : ಕೂಲ್‌ ಕ್ಯಾಫ್ಟನ್‌ ಧೋನಿ ಫಾಲೋ ಮಾಡುವ ಇನ್ಸ್ಟಾಗ್ರಾಂ ಫಾಲೋವರ್ಸ್‌ ಯಾರು ಗೊತ್ತೇ?

Leave A Reply

Your email address will not be published.