Holi 2023 : ಹೋಲಿಯ ಬಣ್ಣ ಮಸೀದಿಗೆ ತಾಗದಿರುಲು ಟರ್ಪಾಲ್‌ನಿಂದ ಮುಚ್ಚಿದ ಮುಸ್ಲಿಂ ಬಾಂಧವರು!
Holi 2023: ಎಲ್ಲೆಡೆ ಹೋಳಿ ಹಬ್ಬದ ರಂಗು ಕಳೆ ಕಟ್ಟಿದ್ದು, ಹೋಳಿ(Holi) ಹಬ್ಬದ ಸಂಭ್ರಮದಲ್ಲಿ ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚಿ ಓಕುಳಿಯಾಡಿ ಸಂಭ್ರಮಾಚರಣೆ ಮಾಡೋದು ಸಹಜ. ಆದರೆ, ಹೊಳಿಯ ಬಣ್ಣ ಉತ್ತರಪ್ರದೇಶದ(UttarPradesh) ಅಲಿಗಢದಲ್ಲಿ ಮಸೀದಿಯನ್ನು(Mosque) ಸೋಕಿದ ಹಿನ್ನೆಲೆ ಇಸ್ಲಾಂ ಸಮುದಾಯದವರು(Muslim) ಟಾರ್ಪಲ್ ನಿಂದ (Tarpal) ಮುಚ್ಚಿರುವ ಘಟನೆ ಮುನ್ನಲೆಗೆ ಬಂದಿದೆ.
ಉತ್ತರ ಪ್ರದೇಶದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಹಬ್ಬದ (Holi 2023)ಸಂದರ್ಭದಲ್ಲಿ ಬಣ್ಣಗಳಿಂದ ಕಾಪಾಡುವ ನಿಟ್ಟಿನಲ್ಲಿ ಕಪ್ಪು ಟಾರ್ಪಲಿನ್ನಿಂದ ಮುಚ್ಚಲಾಗಿದೆ. ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಅನುಸಾರ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಹೋಳಿಯಂದು ಸೂಕ್ಷ್ಮ ಪ್ರದೇಶದಲ್ಲಿರುವ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‌ನಿಂದ ಮುಚ್ಚುವ ಕ್ರಮ ಚಾಲ್ತಿಯಲ್ಲಿದೆ. ಹೀಗಾಗಿ, ಹೋಳಿ ಸಮಯದಲ್ಲಿ ಮಸೀದಿಯ ಮೇಲೆ ಬಣ್ಣ ಎರಚುವ ಸಮಸ್ಯೆ ಉಂಟಾಗುವುದಿಲ್ಲ.
ಈ ಬಗ್ಗೆ ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾಹಿತಿ ನೀಡಿದ್ದು, ಆಡಳಿತದ ಸೂಚನೆಯ ಅನುಸಾರ ಮಸೀದಿಯನ್ನ ಟಾರ್ಪಾಲಿನ್‌ನಿಂದ ಮುಚ್ಚಲಾಗಿದೆ ಹೀಗಾಗಿ, ಯಾರೂ ಮಸೀದಿಗೆ ಬಣ್ಣ ಅಥವಾ ಕೊಳಕು ಎಸೆಯಲು ಆಸ್ಪದವಿರದು ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರಕಾರ ಬಂದ ನಂತರ ಆಡಳಿತದ ನೆರವಿನ ಮುಖಾಂತರ ಯಾರು ಕೂಡ ಮಸೀದಿಗೆ ಬಣ್ಣ ಎರಚದಂತೆ ಮಸೀದಿಯನ್ನು ಮುಚ್ಚುವ ಕ್ರಮ ರೂಢಿಯಾಗಿರುವ ಕುರಿತು ಅಲ್ಲಿನ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Gujiya History : ನಿಮಗಿದು ಗೊತ್ತೇ? ಕರ್ಜಿಕಾಯಿ ಎಂಬ ಸಿಹಿ ತಿಂಡಿಯ ಹಿನ್ನಲೆ ಏನು? ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ