Drama: ಮುಸಲ್ಮಾನರಿಂದ ಹಿಂದೂ ನಾಟಕ ಪ್ರದರ್ಶನ ! ಭಾವೈಕ್ಯತೆ ಸಾರೋ ಈ ನಾಟಕದ ಪಾತ್ರಧಾರಿಗಳೆಲ್ಲರೂ ಮುಸ್ಲಿಂಮರು!

Drama :ಹಿಂದೂ- ಮುಸಲ್ಮಾನ(Hindu- Muslim)ರ ನಡುವೆ ಆಗಾಗ ಗಲಾಟೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಒಂದಿಲ್ಲೊಂದು ಕಾರಣಗಳನ್ನು ಇಟ್ಟುಕೊಂಡು ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ ಕೆಲವು ವಿಚಾರಗಳು ಕೋಮು ಘರ್ಷಣೆಗೆ ಸಾಕ್ಷಿಯಾಗುತ್ತವೆ. ಆದರೆ ಇಲ್ಲೊಂದೆಡೆ ಈ ಎರಡೂ ಸಮುದಾಯಗಳ ಭಾವೈಕ್ಯತೆಯನ್ನು ಸಾರುವ ನಿಟ್ಟಿನಲ್ಲಿ ನಾಟಕ (Drama)ವೊಂದು ಪ್ರದರ್ಶನಗೊಳ್ಳಲು ತಯಾರಾಗಿದೆ. ಹಾಗಿದ್ರೆ ಈ ನಾಟಕದ ವಿಶೇಷತೆ ಏನೆಂದು ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

ಹೌದು, ಬರುವ ಮಾರ್ಚ್(March) 19ರಂದು ಬೆಂಗಳೂರು ಗ್ರಾಮಾಂತರ(Bangalore Rural District)ಜಿಲ್ಲೆಯ ಹಾಲೇನಹಳ್ಳಿ(Halenahalli)ಯಲ್ಲಿ ವೀರಾಂಜನೇಯ ಸ್ವಾಮಿ ಕಲಾ ವೃಂದದಿಂದ ಪ್ರದರ್ಶನಗೊಳ್ಳುತ್ತಿರುವ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ'(Kurukshetra or Dharma Rajya) ಎಂಬ ನಾಟಕವೊಂದು ಹಿಂದೂ ಮುಸ್ಲಿಂರ ಭಾವೈಕ್ಯತೆಯ ಧ್ಯೋತಕವಾಗಿದೆ. ಯಾಕಂದ್ರೆ ಹಿಂದೂ ಧರ್ಮದ ಹಿನ್ನೆಲೆಯುಳ್ಳ ಈ ನಾಟಕವನ್ನು ಮುಸಲ್ಮಾನರು ಅಭಿನಯಿಸುತ್ತಿದ್ದಾರೆ. ಅಂದರೆ ಇದರಲ್ಲಿರುವ ಎಲ್ಲಾ ಪಾತ್ರಗಳನ್ನು ನಿರ್ವಹಿಸಿಕೊಂಡು ಪ್ರದರ್ಶನ ಮಾಡುತ್ತಿದ್ದಾರೆ.

ನಾಟಕದಲ್ಲಿ ಬರುವ ಉತ್ತರೆ, ರುಕ್ಮಿಣಿ, ಕುಂತಿ, ದ್ರೌಪದಿ ಸೇರಿ ಹಲವು ಮಹಿಳಾ ಪಾತ್ರಗಳನ್ನು ನಿರ್ವಹಣೆ ಮಾಡಲು ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಮಹಿಳಾ ಪಾತ್ರಧಾರಿಗಳನ್ನು ಕರೆಸಲಾಗುತ್ತಿದೆ. ಬೆಟ್ಟಸ್ವಾಮಿಗೌಡ, ವೆಂಕಟಾಚಲಯ್ಯ, ನಾರಾಯಣಗೌಡ, ಮುನಿರಾಜು ಹಾಗೂ ಚಲುವರಾಜು ಅವರು ಇಲ್ಲಿ ಹಾರ್ಮೋನಿಯಂ, ತಬಲಾ, ನಾಟಕದ ಮೇಸ್ಟ್ರು ಮಾತ್ರ ಹಿಂದೂ ಧರ್ಮದವರಾಗಿದ್ದಾರೆ. ಉಳಿದಂತೆ ಎಲ್ಲ ಪಾತ್ರಧಾರಿಗಳು ಮುಸ್ಲಿಂ ಸಮುದಾಯದವರಾಗಿದ್ದಾರೆ.

ನಾಟಕದ ಯಾವ ಯಾವ ಪಾತ್ರಗಳಲ್ಲಿ ಯಾರೆಲ್ಲಾ ಅಭಿನಯಿಸುತ್ತಿದ್ದಾರೆ ಎಂದು ನೋಡೋದಾದ್ರೆ ಶ್ರೀ ಕೃಷ್ಣ- ಜಾವಿದ್‌ ಪಾಷ, ಧರ್ಮರಾಯ- ಅಬ್ದುಲ್‌ ರಜಾಕ್‌ ಸಾಬ್, 1ನೇ ಭೀಮ – ಎಜಾಜ್, 2ನೇ ಭೀಮ- ಮುಜೀಬ್‌, 1ನೇ ಅರ್ಜುನ – ರಖೀಬ್‌ ಸಾಬ್, 2ನೇ ಅರ್ಜುನ- ಶಹಬಾಜ್‌ ಖಾನ್, ಅಭಿಮನ್ಯು- ಸುಬಾನ್, ಸಾತ್ಯಕಿ- ರಿಜ್ವಾನ್‌, ಬಲರಾಮ- ಸೈಯದ್‌ ಚಾಂದ್‌ಸಾಬ, ಧುರ್ಯೋದನ – ನಯಾಜ್‌ ಖಾನ್, ಕರ್ಣ- ಹಯಾತ್‌ ಪಾಷ, ದುಶ್ಯಾಸನ- ಸಾಧಿಕ್‌ ಪಾಷ, ಸೈಂಧವ- ಸೈಯದ್‌ ಖಲೀಲ್‌, ಶಕುನಿ- ಎಸ್. ಚಾಂದ್‌ ಪಾಷ, ಭೀಷ್ಮ – ನಜೀರ್‌ ಸಾಬ್, ದ್ರೋಣ- ಜಮೀರ್‌ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಮುಖ್ಯವಾದ ವಿಷಯವೆಂದರೆ ಶ್ರೀ ವೀರಾಂಜನೇಯ ಸ್ವಾಮಿ ಕಲಾವೃಂದದ(Shree Viranjaneya Swami kala Vrunda) ವತಿಯಿಂದ ಪ್ರದರ್ಶನ ಮಾಡುವ ಈ ಕುರುಕ್ಷೇತ್ರ ನಾಟಕದ ಪೋಸ್ಟರ್‌ನಲ್ಲಿ ಎಲ್ಲಿಯೂ ಮುಸ್ಲಿಂ ಸಂಬಂಧಿತ ಧಾರ್ಮಿಕ ಚಿಹ್ನೆಗಳನ್ನು ಬಳಕೆ ಮಾಡಿಲ್ಲ. ಬುದ್ಧ, ಬಸವ, ಅಂಬೇಡ್ಕರ್‌, ಶ್ರೀ ಶಿವಕುಮಾರ ಸ್ವಾಮೀಜಿ ಸೇರಿ ಹಲವು ಮಠಾಧೀಶರಮ ಭಾವಚಿತ್ರಗಳನ್ನೇ ಬಳಕೆ ಮಾಡಲಾಗಿದೆ. ಅಂದಹಾಗೆ ಬರುವ ಮಾರ್ಚ್ 19ರ ಭಾನುವಾರ ರಾತ್ರಿ 8.15ಕ್ಕೆ ಹಾಲೇನಹಳ್ಳಿ ಗ್ರಾಮದಲ್ಲಿ ನಾಟಕ ಪ್ರದರ್ಶನ ಆಗಲಿದೆ. ತುಮಕೂರಿನ ಲತಾ ಡ್ರಾಮಾ ಸೀನರಿ ಅವರಿಂದ ವೇದಿಕೆ ಸಿದ್ಧಪಡಿಸಲಾಗುತ್ತಿದೆ.

Leave A Reply

Your email address will not be published.