Uttar Pradesh: ಐವರು ಮಕ್ಕಳಿದ್ದರೂ, ಕೋಟಿಗಟ್ಟಲೆ ಆಸ್ತಿಯನ್ನು UP ಸರ್ಕಾರಕ್ಕೆ ಕೊಟ್ಟ ವೃದ್ಧ! ಅಷ್ಟಕ್ಕೂ ವಿಲ್ ನಲ್ಲಿ ಏನಿದೆ ಗೊತ್ತಾ?
Uttar Pradesh : ವೃದ್ಧನೊಬ್ಬ ತನಗೆ 5 ಜನ ಮಕ್ಕಳಿದ್ದರೂ ಕೂಡ ತನ್ನ ಪಾಲಿನ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು (Property) ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ (Government) ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದ್ದು ಎಲ್ಲರೂ ಅಚ್ಚರಿಪಡುವಂತಾಗಿದೆ. ಅಷ್ಟಕ್ಕೂ ಆತ ಹೀಗೆ ಮಾಡಲು ಕಾರಣವೇನು? ಎಷ್ಟು ಕೋಟಿ ಆಸ್ತಿಯನ್ನು ದಾನ ಮಾಡಿದ್ದಾನೆ ಗೊತ್ತಾ?
ಹೌದು, ಮುಜಾಫರ್(Mujaafer) ನಗರದ ನಿವಾಸಿ, 85 ವರ್ಷದ ನಾಥು ಸಿಂಗ್(Nathu Sing) ಎಂಬ ವೃದ್ಧರೊಬ್ಬರು ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿ ಯನ್ನು ವಿಲ್ ಬರೆದಿದ್ದಾರೆ. ಅಂದಹಾಗೆ ನಾಥು ಸಿಂಗ್ ಅವರು ತಮ್ಮ ಮನೆ ಹಾಗೂ ಜಮೀನು ಸೇರಿ ಬರೋಬ್ಬರಿ 1.5 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶದ ಸರ್ಕಾರಕ್ಕೆ ವಿಲ್ ಬರೆದಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ನಾಲ್ವರು ಹೆಣ್ಣುಮಕ್ಕಳು ಸೇರಿ ಒಟ್ಟು 5 ಮಂದಿ ಮಕ್ಕಳಿದ್ದರೂ ಹೀಗೆ ಆಸ್ತಿ ದಾನ ಮಾಡಿರುವುದು ಕಂಡು ಎಲ್ಲರೂ ಬೆರಗಾಗಿದ್ದಾರೆ.
ಇನ್ನು ನಾಥು ಸಿಂಗ್ ಅವರು ಯಾಕೆ ಈ ರೀತಿ ನಿರ್ಧಾರ ಮಾಡಿದರು ಎಂದು ನೋಡೋದಾದ್ರೆ, ಅವರು ಹಾಗೂ ಅವರ ಪತ್ನಿ ತಮ್ಮ ಜಮೀನನಲ್ಲಿ ಸಂತೋಷದಿಂದ ಜೀವನ ನಡೆಸುತ್ತಿದ್ದರು. ನಾಥುಸಿಂಗ್ ಪುತ್ರ ಶಾಲಾ ಶಿಕ್ಷಕನಾಗಿ ಸಹರಾನ್‍ಪುರದಲ್ಲಿ ವಾಸವಾಗಿದ್ದ. ಉಳಿದ ನಾಲ್ವರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿತ್ತು. ಹೀಗಿರುವಾಗ ಅವರ ಪತ್ನಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಳು. ನಂತರ ಕೆಲವೇ ದಿನಗಳಲ್ಲಿ ನಾಥುಸಿಂಗ್ ಐವರು ಮಕ್ಕಳಿದ್ದರೂ ಒಂಟಿ ಜೀವನ ನಡೆಸಲು ಪ್ರಾರಂಭಿಸಿದರು.
ಈ ಒಂಟಿತನದಿಂದಾಗಿ ಬೇಸತ್ತು ಸುಮಾರು 7 ತಿಂಗಳ ಹಿಂದೆ ತಮ್ಮ ಗ್ರಾಮದಲ್ಲೇ ಇರುವ ವೃದ್ಧಾಶ್ರಮಕ್ಕೆ ಸೇರಿದರು. ಈ ವೇಳೆಯೂ ನಾಥುಸಿಂಗ್‍ನನ್ನು ಭೇಟಿ ಮಾಡಲು ಅವರ ಮಕ್ಕಳು ಯಾರು ಬಂದಿರಲಿಲ್ಲ. ಮಕ್ಕಳಿದ್ದರೂ ತಾನು ವೃದ್ಧಾಶ್ರಮ ಸೇರಬೇಕಾಯಿತಲ್ಲ ಅನ್ನೋ ನೋವು ಅವರನ್ನು ಕಾಡಲಾರಂಭಿಸಿತು. ಇದರಿಂದಾಗಿ ಬೇಸರಗೊಂಡ ನಾಥುಸಿಂಗ್ ತಮ್ಮ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರದ ಹೆಸರಿಗೆ ವಿಲ್ ಮಾಡಲು ನಿರ್ಧರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ನಾಥುಸಿಂಗ್, ಈ ವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು. ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ವರ್ಗಾಯಿಸಲು ನನ್ನ ಮನಸ್ಸು ಮಾಡಿದೆ. ಈ ಎಲ್ಲ ಆಸ್ತಿಯೂ ನನ್ನ ಮರಣದ ನಂತರ ಸರ್ಕಾರಕ್ಕೆ ಸೇರಲಿದೆ ಎಂದು ತಿಳಿಸಿದರು.
ಇನ್ನು ಅವರು ವಿಲ್ ನಲ್ಲಿ ಏನು ಬರೆದಿದ್ದಾರೆಂದು ನೋಡೋದಾದ್ರೆ, ತಾವು ಯೋಚಿಸಿದಂತೆ ಇದೀಗ ಉತ್ತರಪ್ರದೇಶ ಸರ್ಕಾರಕ್ಕೆ ತಮ್ಮ ಸಮಸ್ತ ಆಸ್ತಿಯನ್ನು ವಿಲ್ ಮಾಡಿದ್ದು, ಮರಣದ ನಂತರ ಆ ಜಮೀನಿನಲ್ಲಿ ಶಾಲೆ ಹಾಗೂ ಆಸ್ಪತ್ರೆಯನ್ನು ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಲ್‍ನಲ್ಲಿ, ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕು. ಜೊತೆಗೆ ಅಂತಿಮ ವಿಧಿವಿಧಾನ ನಡೆಯುವಾಗ ಮಗ ಹಾಗೂ ನಾಲ್ವರು ಪುತ್ರಿಯರಿಗೆ ಪಾಲ್ಗೊಳ್ಳಲು ಬಿಟ್ಟುಕೊಳ್ಳಬಾರದು ಎಂದು ಬರೆದಿದ್ದಾರೆಂದು ತಿಳಿದು ಬಂದಿದೆ.