Harassment: ದೌರ್ಜನ್ಯ ಲೈಂಗಿಕತೆಗೆ ಒಳಪಟ್ಟ ಬಾಲಕಿ ಯೂಟ್ಯೂಬ್ ನೋಡಿ ಹೆರಿಗೆ.! ಹುಟ್ಟಿದ ಮಗುವನ್ನು ಕತ್ತು ಹಿಸುಕಿ ಕೊಂದ ಭಯಾನಕ ಘಟನೆ .!

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಬಹು ಬೇಡಿಕೆಯ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ . ಅದೇಷ್ಟೋ ಜನರು ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಬೇಕಾದ್ರೂ ಯೂಟ್ಯೂಬ್‌ ಬಳಸುತ್ತಾರೆ. ಮಾಹಿತಿಗೆ ಪೂರಕವಾದ ವಿಡಿಯೋ ಸಂದೇಶಗಳು ಲಭ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಫೋನ್‌ ಮೂಲಕ ಯೂಟ್ಯೂಬ್ ಗಳನ್ನುಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಬಳಕೆ ಮಾಡದವರೇ ಹೆಚ್ಚಾಗಿದ್ದಾರೆ. ಯುವಕರಂತೂ ಬಿಡುವಿನ ಕ್ಷಣ ಕಾಲದಲ್ಲೂ ಯೂಟೂಬ್‌ ನೋಡುವ ಚಟಕ್ಕೆ ಬೆಳಸಿಕೊಂಡಿದ್ದಾರೆ.

 

ಯೂಟೂಬ್‌ ನಲ್ಲಿ ಜನರು ಒಳ್ಳೆಯ ವಿಚಾರ ಹಾಗೂ ಕೆಟ್ಟ ವಿಚಾರಗಳನ್ನು ಬಹುಬೇಗಾನೇ ಕಲಿಯಲು ಶುರು ಮಾಡುತ್ತಿದ್ದಾರೆ. ಕೆಲವರು ಅವರ ಅಗತ್ಯತೆಗಳಿಗೆ ತಕ್ಕಂತಹ ವಿಡಿಯೋಗಳನ್ನು ನೋಡುವುದಕ್ಕೆ ಮುಂದಾಗುತ್ತಾರೆ. ಇನ್ನು ಕೆಲ ಜನರು ಉದ್ಯೋಗ, ಯೋಗಭ್ಯಾಸ, ಕಲೆಗಾರಿಕೆ, ಸಂಗೀತ, ನೃತ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನೂ ಕೆಲ ದುಷ್ಕರ್ಮಿಗಳು ಕೊಲೆ, ದರೋಡೆ, ಲೈಂಗಿಕ ದೌರ್ಜನ್ಯ ಇಂತಹ ವಿಚಿತ್ರ ವಿಡಿಯೋ ಮೂಲಕ ತಿಳಿದು ಖತರ್ನಾಕ್‌ ಕೃತ್ಯ ಎಸಗವ ಘಟನೆಗಳು ನಿಮ್ಮ ಗಮನಕ್ಕೆ ಬಂದಿರಬಹುದು. ಇದೀಗ ಇಂತಹದ್ದೇ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಹೈದರಾಬಾದ್ ನಲ್ಲಿ ಲೈಂಗಿಕ ಶೋಷಣೆಗೆ ಒಳಗಾದ 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ತನ್ನ ಹೆರಿಗೆ ಮಾಡಿಕೊಂಡ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ನಾಗ್ಪುರದ ಅಂಬಾಜಾರಿ ಪ್ರದೇಶದ ಅಪ್ರಾಪ್ತ ಬಾಲಕಿವೊಬ್ಬಳು ವ್ಯಕ್ತಿಯೊಬ್ಬನ ಜೊತೆ ಸ್ನೇಹ ಸಾಮಾಜಿಕ ಜಾಲತಾಣದಲ್ಲಿ ಬೆಳೆಸಿಕೊಂಡಿದ್ದು. ಪರಿಚಯ ಕೆಲವು ದಿನಗಳ ಬಳಿಕ ಭೇಟಿಯಾಗಿ ದೈಹಿಕ ಸಂಬಂಧ ಬೆಳೆಸಿದ್ದಾರೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಅಲ್ಲದೆ 9 ತಿಂಗಳೂ ತನ್ನ ಮನೆಯವರಿಗೆ ತಾನೂ ಗರ್ಭಿಣಿ ಎನ್ನುವ ವಿಚಾರವನ್ನು ಮುಚ್ಚಿಟ್ಟಿದ್ದಾಳೆ. ಗರ್ಭಿಣಿಯಾಗಿದ್ದರಿಂದ ಹೊಟ್ಟೆ ದೊಡ್ಡದಾಗಿರೋದನ್ನು ನೋಡಿದ ತಾಯಿ ಕೇಳಿದಾಗಲೆಲ್ಲಾ ಹುಡುಗಿ ಸುಳ್ಳು ಹೇಳುತ್ತ ತಪ್ಪಿಸಿಕೊಂಡಿದ್ದಳು.

ಹೆಲ್ತ್‌ ಸರಿ ಇಲ್ಲ ಎಂದು ಕೊಂಡು ಯಾಮಾರಿಸುತ್ತಿದ್ದಳು. ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಾಗಿನಿಂದ ಆಕೆ ಯೂಟ್ಯೂಬ್ ನೋಡುವ ಮೂಲಕ ಪ್ರತಿದಿನ ಹೆರಿಗೆ ಮಾಡಿಕೊಳ್ಳುವುದನ್ನು ಕಲಿತಿದ್ದು, ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾರ್ಚ್​ 2ರಂದು ಯಶಸ್ವಿಯಾಗಿ ಹೆರಿಗೆ ಮಾಡಿಕೊಂಡಿದ್ದಾಳೆ. ಬಳಿಕ ಮಗುವು ಚೇತರಿಸಿಕೊಳ್ಳುತ್ತಿರೋ ಮುನ್ನವೇ ಕತ್ತು ಹಿಸುಕಿ ಬರ್ಬರವಾಗಿ ಮಗುವನ್ನು ಕೊಂದಿದ್ದಾಳೆ. ಬಳಿಕ ಮಗುವಿನ ಹೆಣವನ್ನು ಮನೆಯಲ್ಲಿದ್ದ ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟಿದ್ದಳು. ಮಗನ ಆನಾರೋಗ್ಯದ ಬಗ್ಗೆ ತಾಯಿ ಪ್ರಶ್ನಿಸಿದಾಗ ಆಕೆ ವಿವರಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದುರು, ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಕರೆದುಕೊಂಡು ಹೋಗಿದ್ದಾರೆ ಆಗ ಪೊಲೀಸರಿಗೆ ಘನಘೋರ ಕೃತ್ಯ ಮಾಹಿತಿ ಬಹಿರಂಗವಾಗಿದೆ.

Leave A Reply

Your email address will not be published.